ಯುವಜನ/ಮಕ್ಕಳು

ಬಾಯಿ ಬಿಟ್ಟು ನುಂಗಿ ನೋಡೋಣ...

ಪ್ರತಿ ಬಾರಿ ನಾವು ತಿನ್ನುವಾಗ ಆಹಾರವನ್ನು ನುಂಗುತ್ತೇವೆ. ನುಂಗುವ ವಿಧಾನದಲ್ಲಿನ ಜೀವಭೌತಶಾಸ್ತ್ರದ ತತ್ವಗಳು..

ಪ್ರತಿ ಬಾರಿ ನಾವು ತಿನ್ನುವಾಗ ಆಹಾರವನ್ನು ನುಂಗುತ್ತೇವೆ. ನುಂಗುವ ವಿಧಾನದಲ್ಲಿನ ಜೀವಭೌತಶಾಸ್ತ್ರದ ತತ್ವಗಳು ಎಷ್ಟು ಚಿತ್ತಾಕರ್ಷಕವೆಂದರೆ ಅವನ್ನು ನಾವು ಮನೆಯಲ್ಲೇ ಖರ್ಚಿಲ್ಲದೆ, ಯಾವುದೇ ವಸ್ತುಗಳಿಲ್ಲದೆ ಸುಲಭವಾಗಿ ಪ್ರಯತ್ನಿಸಬಹುದು.
ಸಡಿಲಾಗಿ ಕುಳಿತುಕೊಳ್ಳಿ ಮತ್ತು ನಿಮ್ಮ ಎಂಜಲನ್ನು ಸಂಪೂರ್ಣವಾಗಿ ನುಂಗಿರಿ. ನುಂಗಿದಿರಾ? ಬಹಳ ಸರಳ ಹೌದೇ?
ಈಗ ನಿಮ್ಮ ತುಟಿ ಹಾಗೂ ಹಲ್ಲನ್ನು ತೆರೆದಿಡಿ. ನಿಮ್ಮ ಎಂಜಲನ್ನು ನುಂಗಲು ಪ್ರಯತ್ನಿಸಿ. ನಿಮ್ಮಿಂದ ಇದು ಸಾಧ್ಯವಾಗುವುದಿಲ್ಲ ಅಲ್ಲವೇ?
ಈಗ ನಿಮ್ಮ ಹಲ್ಲುಗಳನ್ನು ಅದುಮಿ, ತುಟಿಗಳನ್ನು ತೆರೆದಿಡಿ. ಎಂಜಲನ್ನು ನುಂಗಲು ಪ್ರಯತ್ನಿಸಿ. ಸ್ವಲ್ಪ ಕಷ್ಟ, ಆದರೂ ಸಾಧ್ಯ...
ಏಕೆ ಹೀಗೆ?
ನಮ್ಮಲ್ಲಿ ಸಿರ್ಕೋ- ಫೆರಿಂಜಿಯಲ್ ಕವಾಟವಿದ್ದು, ಅದು ವಾತಾವರಣದ ಒತ್ತಡಕ್ಕಿಂತ ಹೆಚ್ಚಿನ ಒತ್ತಡಕ್ಕೆ ಮುಚ್ಚಲ್ಪಡುತ್ತದೆ. ನಮ್ಮ ತುಟಿ ಹಾಗೂ ಹಲ್ಲುಗಳನ್ನು ಮುಚ್ಚಿದಾಗ ನಮ್ಮ ನಾಲಿಗೆ ಒತ್ತಡವನ್ನು ಹೆಚ್ಚಿಸಿ ಕವಾಟ ತೆರೆಯುವಂತೆ ಮಾಡುತ್ತದೆ. ಊದ್ದರಿಂದ ನಾವು ಬಾಯಿ ತೆರೆದುಕೊಂಡಿರುವಾಗ ಬಾಯಿಯ ಒಳಗಿನ ಪ್ರದೇಶದಲ್ಲಿನ ಒತ್ತಡ ವಾತಾವರಣದ ಒತ್ತಡದಷ್ಟೇ ಇರುವುದರಿಂದ ನಮಗೆ ಎಂಜಲನ್ನು ನುಂಗಲು ಸಾಧ್ಯವಾಗುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿವಿ ಘಟಿಕೋತ್ಸವಕ್ಕೆ CJI ಸೂರ್ಯಕಾಂತ್ ಗೆ ಆಹ್ವಾನ: ಅವರಿಂದ ಪದವಿಪತ್ರ ಸ್ವೀಕರಿಸಲ್ಲ ಎಂದ NALSAR ವಿದ್ಯಾರ್ಥಿಗಳು!

ಅಮೆರಿಕದ ಜೊತೆ ನೇರ ಮಾತುಕತೆ ಇಲ್ಲ: ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಸ್ಪಷ್ಟನೆ

ಬಾರಾಮತಿಯಲ್ಲಿ ಮತ್ತೆ ತರಬೇತಿ ವಿಮಾನ ಪತನ; ಅಜಿತ್ ಪವಾರ್ ದುರಂತದ ಬಳಿಕ 2ನೇ ಘಟನೆ

ಸೆಲ್ಫಿ ಕೇಳಿ ಬಂದ ಮಹಿಳಾ ಅಭಿಯಾನಿಯಿಂದ 'ಲಿಪ್ ಲಾಕ್': ತಬ್ಬಿಬ್ಬಾದ ಬಾಲಿವುಡ್ ನಟಿ ನಿಕಿತಾ ರಾವಲ್, Video ವೈರಲ್

ಕೋಲ್ಕತ್ತಾ ಬಳಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಇಟ್ಟಿಗೆ, ಕಲ್ಲುಗಳಿಂದ ದಾಳಿ: 'ಪ್ರಾಣವೇ ಹೋಗಬೇಕಾಗಿತ್ತು' ಎಂದ ಮಾಜಿ ಸಿಎಂ!