ರಜೆಯ ಮಜ
ಪರೀಕ್ಷೆ ಮುಗಿದು ಬೇಸಿಗೆ ಬರಲು
ಅಜ್ಜಿಯ ಊರಿನ ನೆನಪಾಗುವುದು
ಅಮ್ಮನ ಕಾಡಿ, ಅಪ್ಪನ ಬೇಡಿ
ಅಜ್ಜಿಯ ಊರಿಗೆ ಹೋಗುವೆನು
ಅಜ್ಜಿಯು ಮಾಡುವ ಬಗೆಬಗೆ ತಿಂಡಿಯ
ತಿನ್ನುತ ರಜೆಯಲಿ ನಲಿಯುವೆನು
ಅಜ್ಜನ ಜೊತೆಯಲಿ ತೋಟಕೆ ಹೋಗಿ
ಪೂಜೆಗೆ ಹೂವನು ತರುವೆನು
ಅಜ್ಜಿಯು ಹೇಳುವ ಕೆಲಸವನು
ತಪ್ಪದೆ ನಾನು ಮಾಡುವೆನು
ಅಜ್ಜನ ಮನೆಯ ಮಹಡಿಯ ಏರಿ
ಓಡುವ ರೈಲನು ನೋಡಿ ಕುಣಿಯುವೆನು
ಬೇಸಿಗೆ ರಜೆಗೆ ನಾನು ಹೋಗಲು
ಅಜ್ಜ- ಅಜ್ಜಿಗೆ ಬಲು ಖುಷಿಯು
ಜೂನ್ ಬರುತಲಿ ಅಪ್ಪನು ಬರಲು
ನನಗಾಗುವುದು ಬಲು ಬೇಸರವು
ಮುಂದಿನ ರಜೆಗೆ ಬರುವೆನು ಎನ್ನುತ
ಟಾಟಾ ಹೇಳಿ ಊರಿಗೆ ಮರಳುವೆನು
- ಇಂಚರ ಜಿ. ಅಬ್ಬೆಗೇರಿ
ಒಂದನೇ ತರಗತಿ, ಚೈತನ್ಯ ಗುರುಕುಲ ಶಾಲೆ,
ಕಡಕೋಳ, ಬೆಳಗಾವಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.