ಡೌಟು
ಮಿಸ್... ಮಿಸ್
ನಂಗೊಂದು ಪುಟ್ಟ ಡೌಟು,
ಸಣ್ಣವರಿರುವಾಗ ಬಿದ್ದಿತ್ತಾ?
ನಿಮಗೂ ಏಟು!
ಸೊಟ್ಟ- ಪಟ್ಟ
ಕಾಪಿ ಬರೀರಿ ಅಂತ
ದಿನಾ ಮಿಸ್ಸು ಬಯ್ಯೋದ್ಯಾಕೆ
ಅವರ ಅಕ್ಷರ ಮಾತ್ರ
ಸೊಟ್ಟ- ಪಟ್ಟ
ಇರೋದ್ಯಾಕೆ?
ಪಾಸು-ಫೇಲು
ಪರೀಕ್ಷೆ ಮುಗೀತು
ನಾನು ಪಾಸು.
ಹೋಗ್ತೀನಿ ಬೇರೆ ಕ್ಲಾಸು
ಪಾಪ ನಮ್ಮ ಮಿಸ್ಸು
ಫೇಲೂಂತ ಅನಿಸುತ್ತೆ,
ಯಾವಾಗ್ಲೂ ಅದೇ ಕ್ಲಾಸು
ಮಿಸ್ಸು
ಅಪ್ಪನ ಹಾಗೆ ಬೈತಾರೆ,
ಅಮ್ಮನ ಹಾಗೆ ನಗ್ತಾರೆ,
ಅಣ್ಣನ ಹಾಗೆ ಆಟ ಆಡಿಸ್ತಾರೆ
ಅಕ್ಕನ ಹಾಗೆ ಕತೆ ಹೇಳ್ತಾರೆ
ನಂಗಿಷ್ಟ ಆದವರ ಮಿಕ್ಸು
ಈ ನಮ್ಮ ಮಿಸ್ಸು
- -ಡಾ. ಕೆ.ಎಸ್. ಚೈತ್ರಾ