ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಯುವಜನ/ಮಕ್ಕಳು

ಮನಸ್ಸಿನ ಮಾತು ಕೇಳಿ...

Vishwanath S
Updated On : 30 May 2014, 4:00 am

ಯಾವುದೋ ಜವಾಬ್ದಾರಿಯುತ ಕೆಲಸ ನಿಮ್ಮನ್ನು ಹುಡುಕಿಕೊಂಡು ಬಂದಿರುತ್ತದೆ. ಒಂದು ಕಡೆ ಮನಸ್ಸು ಒಪ್ಪಿಕೋ ಅಂತಿದ್ದರೆ, ಇನ್ನೊಂದು ಬಾರಿ 'ಇದು ನನ್ನಿಂದ ಸಾಧ್ಯವೇ...?' ಎನ್ನುವ ಪ್ರಶ್ನೆ ಇಡುತ್ತದೆ.
ಇಂಥದ್ದೊಂದು ಹೊಯ್ದಾಟ ಸೃಷ್ಟಿಯಾಗುವುದಾದರೂ ಹೇಗೆ? ಇದು 'ಜಾಗೃತ ಮನಸ್ಸಿನ' ಕಿತಾಪತಿ. ನಮಗೆ ಅರಿವಿಲ್ಲದಂತೆ 'ಜಾಗೃತ' ಮನಸ್ಸು ಈ ಪ್ರಶ್ನೆ ನಮ್ಮ ಮುಂದೆ ಇಂಥದ್ದೊಂದು ಹೊಯ್ದಾಟ ತಂದಿಟ್ಟು ಮಜಾ ನೋಡುತ್ತದೆ. ಅನೇಕರು ಈ ಹೊಯ್ದಾಟದಿಂದ ಹಿಂಜರಿಕೆಗೆ ಒಳಗಾಗಬಹುದು. ಆದರೆ, ಜಾಗೃತ ಮನಸ್ಸಿನ ನಿಜವಾದ ಉದ್ದೇಶ ನಮ್ಮಲ್ಲಿ ಹಿಂಜರಿಕೆ ಬಿತ್ತುವುದಲ್ಲ. ಬದಲಾಗಿ ನಮ್ಮ ಕೈಯಿಂದ ಆ ಕೆಲಸ ಮಾಡಲು ಸಾಧ್ಯವೇ ಎಂದು ಅವಲೋಕನ ಮಾಡಿಕೊಳ್ಳಲು ಅವಕಾಶ ಮಾಡಿಕೊಡುವುದು ಮತ್ತು ಆ ಕೆಲಸ ಮಾಡಲು ಬೇಕಾದ ಸಾಮರ್ಥ್ಯವನ್ನು ಒಟ್ಟುಗೂಡಿಸಲು ಸ್ಪೂರ್ತಿ ನೀಡುವುದು.
ಜಾಗೃತ ಮನಸ್ಸು ಎನ್ನುವುದು ಪ್ರಕೃತಿ ನಮಗೆ ನೀಡಿರುವ ಅತಿದೊಡ್ಡ ಕೊಡುಗೆ. ಆದರೆ, ಎಷ್ಟೋ ಬಾರಿ ಗುರುವಿನಂತೆ, ಗೆಳೆಯನಂತೆ ದಾರಿ ತೋರಿಸುವ ಈ ಜಾಗೃತ ಮನಸ್ಸನ್ನು ನಾವು ಕಡೆಗಣಿಸುವುದೇ ಹೆಚ್ಚು. ಅದರಲ್ಲೂ ಯುವಕರು ಈ ಜಾಗೃತ ಮನಸ್ಸಿನ ಮೌಲ್ಯವನ್ನೇ ಅರ್ಥ ಮಾಡಿಕೊಂಡಿಲ್ಲ.
ಯಾವುದೇ ಕೆಲಸ ಮಾಡುವ ಮೊದಲು ನಿಮ್ಮೊಳಗೆ ಸೃಷ್ಟಿಯಾಗುವ ತೊಯ್ದಾಟಗಳಿಗೆ ಗೊಂದಲಕ್ಕೊಳಗಾಗಬೇಡಿ. ಜಾಗೃತ ಮನಸ್ಸು ನಿಮ್ಮ ಮುಂದಿಡುವ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಿ.
ತಪ್ಪು ಹೆಜ್ಜೆಯಿಡುತ್ತಿದ್ದರೆ ಬಹುತೇಕ ಬಾರಿ ನಿಮ್ಮನ್ನು ಮೊದಲು ಎಚ್ಚರಿಸುವುದೇ ಮನಸ್ಸು. ಅದಕ್ಕೇ ಅನೇಕರು ಮನಸ್ಸನ್ನು ಮೊದಲ ಗುರು ಎಂದದ್ದು.
ಮನಸ್ಸಿನಲ್ಲಿ ನೂರೆಂಟು ವಿಚಾರಗಳು ಬರುತ್ತವೆ. ಅದನ್ನೆಲ್ಲ ಮಾಡಕಾಗುತ್ತಾ.. ಎಂದು ನಿರ್ಲಕ್ಷಿಸಬೇಡಿ. ಅಷ್ಟಕ್ಕೂ ಮನಸ್ಸೆಂಬುದು ನಿಮ್ಮ ನಿಜವಾದ ಗೆಳೆಯ. ಈ ಆತ್ಮೀಯ ಗೆಳೆಯನ ಬಗ್ಗೆ ನಿರ್ಲಕ್ಷ್ಯ ಬೇಡ.


-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement