ಸಾಂದರ್ಭಿಕ ಚಿತ್ರ 
ಯುವಜನ/ಮಕ್ಕಳು

ಸುಮ್‌ಸುಮ್ನೆ ಬಂಕ್ ಹೊಡೆಯಂಗಿಲ್ಲ!

ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಗೈರು ಹಾಜರಿ ಇತ್ತೀಚೆಗೆ ಎಲ್ಲ ವಿದ್ಯಾ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸುತ್ತದೆ ...

ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಗೈರು ಹಾಜರಿ ಇತ್ತೀಚೆಗೆ ಎಲ್ಲ ವಿದ್ಯಾ ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸುತ್ತದೆ . ಗೈರು ಹಾಜರಿ ತಪ್ಪಿಸಲು ದಂಡ ವಿಧಿಸುವುದು, ಕ್ಲಾಸಿನಿಂದ ಹೊರಹಾಕುವುದು, ಪೋಷಕರನ್ನು ಕರೆಸಿ ಬುದ್ಧವಾದ ಹೇಳುವ ವಿಧಾನವನ್ನು ಅನೇಕ ವಿದ್ಯಾಸಂಸ್ಥೆಗಳು ಮಾಡುತ್ತಿವೆ. ಆದರೆ ಇದು ಎಷ್ಟೋ ಬಾರಿ ವಿದ್ಯಾರ್ಥಿಗಳಿಗೆ ಕಹಿ ಅನುಭವ ನೀಡಿದ್ದುಂಟು. ಇದರ ಜತೆಗೆ ವಿದ್ಯಾರ್ಥಿ- ಪ್ರಧ್ಯಾಪಕರ ಸಂಬಂಧವನ್ನೂ ಹಾಳುಗೆಡವಿದ್ದುಂಟು. ಈ ಸಮಸ್ಯೆಗೊಂದು ಕಡಿವಾಣ ಹಾಕಲು ನಿಟ್ಟೆಯ ಜಸ್ಟೀಸ್ ಕೆ.ಎಸ್ ಹೆಗ್ಡೆಯ ಮ್ಯಾನೇಜ್‌ಮೆಂಟ್ ಸಂಸ್ಥೆಯ ಪ್ರೊ. ರಾಧಾಕೃಷ್ಣ ಶರ್ಮಾ ಹೊಸ ಪರಿಹಾರ ಕಂಡುಹಿಡಿದಿದ್ದಾರೆ . ಅದು ವ್ಯಾವಹಾರಿಕ ರಜಾ ವಿಧಾನ ಅಂದರೆ ಲೀವ್ ಟ್ರೇಡಿಂಗ್ ಸಿಸ್ಟಂ!

ಈ ವ್ಯವಸ್ಥೆ ವಿದ್ಯಾರ್ಥಿಗಳಲ್ಲಿ ಸ್ವಯಂ ಶಿಸ್ತು, ತಮ್ಮ ಹಕ್ಕಿನ ರಜೆಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದರ ಅರಿವು ಮೂಡಿಸುತ್ತದೆ. ಇದರ ಜತೆಗೆ, ರಜೆಯನ್ನು ತಮ್ಮ ವಿವೇಚನೆಯಂತೆ ಬಳಸಲು ಸಂಪೂರ್ಣ ಸ್ವಾತಂತ್ರ್ಯ ನೀಡುವುದಷ್ಟೇ ಅಲ್ಲ. ಅದರೊಂದಿಗೆ ಜವಾಬ್ದಾರಿಯುತವಾಗಿ ಆ ರಜೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ. ರಜೆ ವಿಚಾರದಲ್ಲಿ ವಿದ್ಯಾರ್ಥಿ ಮತ್ತು ಉಪನ್ಯಾಸಕರ ಸಂಬಂಧ ಹದಗೆಡದಂತೆಯೂ ಕಾಪಾಡುತ್ತದೆ. ಈ ವಿಧಾನದಿಂದ  ಆಗುವ ಮತ್ತೊಂದು ಪ್ರಮುಖ ಲಾಭವೆಂದರೆ ಅದು ವಿದ್ಯಾರ್ಥಿಗಳ ಸ್ವಯಂಪ್ರೇರಿತ ಬಂಕ್‌ಗೆ ಬೀಳುವ ಬ್ರೇಕ್!

ಹೀಗಿದೆ ಈ ವಿಧಾನ...
ಒಂದು ಸೆಮಿಸ್ಟರ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ 20 ರಜಾ ಕೂಪನ್ ನೀಡಲಾಗುತ್ತದೆ. ಸೆಮಿಸ್ಟರ್‌ವೊಂದರಲ್ಲಿ 400 ತರಗತಿಗಳಿರುತ್ತವೆ. ಅವರು ಗೈರು ಹಾಜರಾದ ಕ್ಲಾಸಿಗೆ ಮಾರನೆ ದಿನ ಕಡ್ಡಾಯವಾಗಿ ಕೂಪನ್ ಕೊಡಬೇಕು. ಒಂದು ದಿನದಲ್ಲಿ 5 ಕ್ಲಾಸುಗಳಿದ್ದರೆ ಈ 20 ಕೂಪನ್‌ಗಳಿಂದ 4 ದಿನ ರಜೆ ಪಡೆಯಬಹುದು. ಕೂಪನ್ ಇಲ್ಲದಿದ್ದರೆ ಬೇರೆಯವರಿಂದ ಕೊಂಡುಕೊಳ್ಳಬಹುದು. ಆದರೆ, ಅದರ ಬೆಲೆ  ಬೇಡಿಕೆ ಮತ್ತು ಪೂರೈಕೆ ಮೇಲೆ ಅವಲಂಬಿತವಾಗಿರುತ್ತದೆ. ಗೈರು ಹಾಜರಾಗುವವರ ಸಂಖ್ಯೆ ಹೆಚ್ಚಿದ್ದಲ್ಲಿ ಕೂಪನ್ ಬೆಲೆಯೂ ಹೆಚ್ಚಾಗುತ್ತದೆ.

ಒಂದು ಕೂಪನ್ನಿನ ಬೆಲೆ ರು.60 ರಿಂದ ರು.100 ವರೆಗೂ ತಲುಪಿದ ನಿದರ್ಶನಗಳಿವೆ. ಹೀಗೆ ಹಣ ಕೊಟ್ಟು ಕೂಪನ್  ಖರೀದಿಸುವುದು ವಿದ್ಯಾರ್ಥಿಗಳಿಗೆ ಸುಲಭದ ಮಾತಲ್ಲ. ಹಾಗಾಗಿ ಅವರು ಅನಿವಾರ್ಯ ಸಂದರ್ಭದಲ್ಲಷ್ಟೇ ಗೈರು ಹಾಜರಾಗುತ್ತಾರೆ. ಅನಾರೋಗ್ಯ, ಕೌಟುಂಬಿಕ ಸಮಸ್ಯೆ ಅಥವಾ ಸಂಸ್ಥೆಯ ಹೆಸರಿನಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡವರಿಗೆ ಈ  ಕೂಪನ್ ಪದ್ಧತಿ ಅನ್ವಯ ಆಗಲ್ಲ. ಈ ಸಂದರ್ಭದಲ್ಲಿ ಎಕ್ಸೆಪ್ಶನ್ ಕೂಪನ್ ವಿತರಿಸಲಾಗುತ್ತದೆ. ಈ ಪದ್ಧತಿ ಅಳವಡಿಸುವುದರಿಂದ ಅನೇಕ ಬದಲಾವಣೆಗಳಾಗಿವೆ ಎಂಬುದು ರಾಧಾಕೃಷ್ಣ  ಶರ್ಮಾ ಅವರ ಅನುಭವದ ಮಾತು.


ವಿ. ಬಾಲಕೃಷ್ಣ ಶಿರ್ವ




Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕೊನೆಗೂ ಸಂಘರ್ಷ ಪೀಡಿತ ಮಣಿಪುರಕ್ಕೆ ಮೋದಿ ಭೇಟಿ; 'ಶಾಂತಿ ಮಾರ್ಗ' ಆರಿಸಿಕೊಳ್ಳುವಂತೆ ಮನವಿ

ದಸರಾ ಒಂದು ಧರ್ಮಕ್ಕೆ ಸೇರಿದ ಕಾರ್ಯಕ್ರಮವಲ್ಲ; ಪ್ರತಾಪ್ ಸಿಂಹ ಸಮಾಜದ ಶಾಂತಿಗೆ ಭಂಗ ತಂದ್ರೆ ಜೋಕೆ ಎಂದ ಸಿಎಂ ಸಿದ್ದರಾಮಯ್ಯ! Video

ಭಾರತ-ಪಾಕಿಸ್ತಾನ ಪಂದ್ಯಕ್ಕೆ ಬಿಸಿಸಿಐ 'ಬಹಿಷ್ಕಾರ'?: ಏಷ್ಯಾ ಕಪ್ ಟೂರ್ನಿ ಗತಿಯೇನು?

ಹಾಸನ ದುರಂತ: ಮೃತರ ಕುಟುಂಬದವರಿಗೆ ಸಾಂತ್ವನ ಹೇಳಲು ಪರಿಹಾರ ಕೊಡ್ತಿವಿ, ಆದ್ರೆ...; ಸಿಎಂ ಸಿದ್ದರಾಮಯ್ಯ ಹೇಳಿದ್ದು ಏನು?

Asia Cup cricket: ಭಾರತ-ಪಾಕಿಸ್ತಾನ ಪಂದ್ಯ; ಶತ್ರು ರಾಷ್ಟ್ರ ಜೊತೆಗೆ ಆಡುವುದಕ್ಕೆ ಬಿಜೆಪಿ, ಬಿಸಿಸಿಐ ವಿರುದ್ಧ ವಿಪಕ್ಷಗಳ ಕಿಡಿ! Video

SCROLL FOR NEXT