ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಭೀಕರ ಅಪಘಾತ: ಇಬ್ಬರು ಮಕ್ಕಳು ಸೇರಿ 7 ಜನ ಸಾವು

ನಿಂತಿದ್ದ ಲಾರಿಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿ ಏಳು ಜನರು ಸ್ಥಳದಲ್ಲೇ ಮೃತಪಟ್ಟ ಘಟನೆ...

Srinivasa Murthy VN
Updated On : 27 Aug 2013, 12:41 pm

ಕನ್ನಡಪ್ರಭ ವಾರ್ತೆ, ಕೋಲಾರ, ಆ.26-
ನಿಂತಿದ್ದ ಲಾರಿಗೆ ಟೆಂಪೋ(ಟಾಟಾ 407) ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿ ಏಳು ಜನರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಲಾರ ತಾಲೂಕಿನ ಲಕ್ಷ್ಮೀಸಾಗರ ಗೇಟ್ ಬಳಿ ಸೋಮವಾರ ಸಂಜೆ ನಡೆದಿದೆ.
ಮೃತಪಟ್ಟವರು ತಾಲೂಕಿನ ಕಲ್ವಮಂಜಲಿ ಹಾಗೂ ಉದ್ಪಪ್ಪನಹಳ್ಳಿಯವರು. ಇವರು ನಿಶ್ಚಿತಾರ್ಥಕ್ಕಾಗಿ ಹೊಸಕೋಟೆ ತಾಲೂಕಿನ ಗೇರಹಳ್ಳಿಗೆ ಹೋಗಿ ವಾಪಸ್ ಬರುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಮೃತಪಟ್ಟವರನ್ನು ಮುನಿಯಪ್ಪ, ನರಸಮ್ಮ, ವೆಂಕಟಮ್ಮ, ಅಂಬಿಕಾ, ಮೈತ್ರಿ, ಮುನೇಂದ್ರ ಹಾಗೂ ರಾಜು ಎಂದು ಗುರುತಿಸಲಾಗಿದೆ.
ಟಾಟಾ 407 ವಾಹನದ ಚಾಲಕನ ಅಜಾಗರುಕತೆಯಿಂದಾಗಿ ಅಪಘಾತ ನಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ. ವಾಹನದಲ್ಲಿ ಒಟ್ಟು 22 ಮಂದಿ ಪ್ರಯಾಣಿಸುತ್ತಿದ್ದರು. ರಸ್ತೆ ಬದಿ ನಿಂತಿದ್ದ ಲಾರಿಗೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದರಿಂದ ಟಾಟಾ 407 ವಾಹನ ಪೂರ್ಣವಾಗಿ ಜಖಂಗೊಂಡಿದೆ. ಮದುವೆ ಆಗಬೇಕಾಗಿರುವ ಹುಡುಗ ಹನುಮಂತರಾಜು ಸೇರಿದಂತೆ ಇನ್ನಿತರರು ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ದಾಖಲು ಆಗಿದ್ದಾರೆ. ಈ ಅಪಘಾತದಿಂದಾಗಿ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಎಸ್ಪಿ ಡಾ. ರಾಮನಿವಾಸ್ ಸಫಟ್, ಡಿವೈಎಸ್ಪಿ ಶ್ರೀಹರಿ ಬರಗೂರು, ವೇಮಗಲ್ ಎಸ್‌ಐ ದೇವೇಂದ್ರಪ್ಪ ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement