ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದೇವಂಗಿ ಪ್ರಫುಲ್ಲಚಂದ್ರ ನಿಧನ

Srinivasa Murthy VN
Updated On : 12 Dec 2013, 12:19 pm

ಶಿವಮೊಗ್ಗ: ಕುವೆಂಪು ಅವರಿಂದ 'ಕೃಷಿ ಋಷಿ' ಎಂದೇ ಕರೆಸಿಕೊಂಡಿದ್ದ ಖ್ಯಾತ ಕೃಷಿ ತಜ್ಞ ಡಾ. ಡಿ.ಆರ್. ಪ್ರಫುಲ್ಲಚಂದ್ರ ಅವರು ಬುಧವಾರ ಬೆಳಗ್ಗೆ 9.30ಕ್ಕೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದ ನಿಧನರಾದರು.
ಅವರಿಗೆ 80 ವರ್ಷ ವಯಸ್ಸಾಗಿತ್ತು. ಇಂಟರ್‌ಮೀಡಿಯಟ್ ಓದಿದ್ದರೂ ಕೃಷಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಇವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.
ಕೃಷಿ ಕ್ಷೇತ್ರದಲ್ಲಿನ ಸಾಧನೆಗಾಗಿ ಕರ್ನಾಟಕ ಹಾಗೂ ಕುವೆಂಪು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿದ್ದವು. ಇಂಥದೊಂದು ಗೌರವಕ್ಕೆ ಭಾಜನರಾದ ಏಕೈಕ ಕೃಷಿಕರು ಇವರು.  ಅವರ ಕೊಳೆ ಕಬ್ಬಿನ ಬೆಳೆಯಲ್ಲಿ ಮಾಡಿದ್ದ ಸಾಧನೆ ಲಿಮ್ಕಾ ದಾಖಲೆಯಲ್ಲಿ ದಾಖಲಾಗಿದೆ. ನೂರಾರು ಮಂದಿ ಗಣ್ಯರು ಅಂತಿಮ ದರ್ಶನ ಪಡೆದರು. ಗುರುವಾರ ಬೆಳಗ್ಗೆ 11 ಗಂಟೆಗೆ ಪ್ರಫುಲ್ಲಚಂದ್ರ ಅವರ ಅಂತ್ಯಕ್ರಿಯೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement