ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಿಗಮಕ್ಕೆ ನೇಮಕ ಸನ್ನಿಹಿತ

Srinivasa Murthy VN
Updated On : 12 Dec 2013, 12:10 pm

ಕನ್ನಡಪ್ರಭ ವಾರ್ತೆ, ಬೆಂಗಳೂರು, ಡಿ.11-
ಕಳೆದ ಏಳು ತಿಂಗಳಿಂದ ನನೆಗುದಿಗೆ ಬಿದ್ದಿದ್ದ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಕೊನೆಗೂ ಮುಂದಾಗಿರುವ ಸರ್ಕಾರ, ಮೊದಲ ಕಂತಿನಲ್ಲಿ 20 ನಿಗಮ- ಮಂಡಳಿ ಅಧ್ಯಕ್ಷರ ಹುದ್ದೆ ಭರ್ತಿ ಮಾಡಲು ತೀರ್ಮಾನಿಸಿದೆ.
ನಿಮಗ-ಮಂಡಳಿಗಳ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಿಂದ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಡಿ.14ರಂದು ನಡೆಯುವ ಸಮನ್ವಯ ಸಮಿತಿ ಸಭೆ ಬಳಿಕ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲು ನಿರ್ಧರಿಸಲಾಗಿದೆ.
ನಿಗಮ-ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ನಿರ್ದೇಶಕರ ನೇಮಕ ಸಂಬಂಧ ಈಗಾಗಲೇ ಕೆಪಿಸಿಸಿ ಹಾಗೂ ಸಿಎಂ ಕಚೇರಿಗೆ 7 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿಗಳ ನೇಮಕ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಿರುವ ಸರ್ಕಾರ ಈಗ ನೇಮಕಕ್ಕೆ ಮುಂದಾಗಿದೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ನಿಗಮ-ಮಂಡಳಿ ನೇಮಕ ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದಿರುವ ಮುಖ್ಯಮಂತ್ರಿ, ಕೆಪಿಸಿಸಿ ಕೆಲ ಹೆಸರುಗಳನ್ನು ಅಂತಿಮಗೊಳಿಸಿದೆ.

ಸಂಭಾವ್ಯರು
-ಎಚ್.ಎಂ.ರೇವಣ್ಣ- ಮಾಜಿ ಸಚಿವ
-ಎಸ್.ಟಿ.ಸೋಮಶೇಖರ್- ಶಾಸಕ
-ಜೆ.ಹುಚ್ಚಪ್ಪ- ಮಾಜಿ ಮಹಾಪೌರ
-ಪ್ರೊ.ರಾಧಾಕೃಷ್ಣ- ಶಿಕ್ಷಣ ತಜ್ಞ
-ಸುರೇಶ್‌ಗೌಡ- ಮಾಜಿ ಶಾಸಕ
-ವಿಜಯ್‌ಕುಮಾರ್ ಶೆಟ್ಟಿ - ಮಾಜಿ ಶಾಸಕ
-ಉಗ್ರಪ್ಪ- ವಿಧಾನ ಪರಿಷತ್ ಮಾಜಿ ಸದಸ್ಯ
-ಎಂ.ಸಿದ್ದರಾಜು - ಮಾಜಿ ಸಂಸದ
-ಡಾ.ಬಿ.ಟಿ.ರುದ್ರೇಶ್- ಖ್ಯಾತ ವೈದ್ಯ
-ಡಾ.ಆನಂದ್‌ಕುಮಾರ್- ಕಾಂಗ್ರೆಸ್ ನಾಯಕ
-ಶಫಿ ಅಹ್ಮದ್- ಕಾಂಗ್ರೆಸ್ ನಾಯಕ
-ಗಡ್ಡದೇವರಮಠ-ಪಕ್ಷದ ಮುಖಂಡ
-ಎನ್.ಎಸ್.ರತ್ನಪ್ರಭ-ಕರಕುಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ
-ಎಂ.ಎ.ಗಫೂರ್ -ಪಕ್ಷದ ಮುಖಂಡ
-ಗಾಯತ್ರಿ ಶಾಂತನಗೌಡ- ಮೇಲ್ಮನೆ ಸದಸ್ಯೆ
-ಪ್ರೊ.ಎಸ್.ಜಿ.ಸಿದ್ದರಾಮಯ್ಯ- ಚಿಂತಕ
-ಹನುಮಂತರಾಯಪ್ಪ- ರಾಜರಾಜೇಶ್ವರಿ ನಗರಸಭೆ ಮಾಜಿ ಅಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement