ಕೆಎಲ್ಇಗೆ 98ರ ಸಂಭ್ರಮ
ಗುಣಮಟ್ಟದ ಶಿಕ್ಷಣ ಪ್ರಸಾರಕ್ಕೆ ಹಾಗೂ ವಿರಳಾತಿವಿರಳ ಚಿಕಿತ್ಸೆ, ಉಪಚಾರಗಳಿಗೆ ಖ್ಯಾತಿ ಪಡೆದ ಕೆಎಲ್ಇ ಶಾಲೆ-ಕಾಲೇಜುಗಳು, ತರಬೇತಿ ..
ಗುಣಮಟ್ಟದ ಶಿಕ್ಷಣ ಪ್ರಸಾರಕ್ಕೆ ಹಾಗೂ ವಿರಳಾತಿವಿರಳ ಚಿಕಿತ್ಸೆ, ಉಪಚಾರಗಳಿಗೆ ಖ್ಯಾತಿ ಪಡೆದ ಕೆಎಲ್ಇ ಶಾಲೆ-ಕಾಲೇಜುಗಳು, ತರಬೇತಿ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ಆಸ್ಪತ್ರೆಗಳು ಬೆಳಗಾವಿ ಜತೆ ಕರ್ನಾಟಕದ ಹೆಸರನ್ನೂ ಪ್ರಪಂಚದಲ್ಲಿ ಗುರುತಿಸುವಂತೆ ಮಾಡಿವೆ.
ಇಂದು ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಗೆ (ಕೆಎಲ್ಇ) 98ರ ಸಂಭ್ರಮ. ಶತಕದತ್ತ ಪಯಣ. ಅಸಾದೃಶ-ವಿಸ್ಮಯಕಾರಿ ಬೆಳವಣಿಗೆ. ನಂಬಲಾಗದ ವೇಗ; ವಿಚಿತ್ರ ಆದರೂ ಸತ್ಯ. ಹೀಗೂ ಉಂಟೆ? ಒಂದು ಸಂಸ್ಥೆಯನ್ನು ಹೀಗೂ ಬೆಳೆಸಬಹುದೇ? ಬೆಳಗಾವಿಗೆ, ಕರ್ನಾಟಕಕ್ಕೆ, ಭಾರತಕ್ಕೆ ಹೆಮ್ಮೆ ತಂದ ಶಿಕ್ಷಣ ಕಾಶಿ ಕೆಎಲ್ಇ.
ಉನ್ನ್ನತ ಶಿಕ್ಷಣ ಪಡೆಯಲು ವಿದೇಶಗಳಿಗೆ ಹೋಗುತ್ತಿದ್ದ ಕಾಲವೊಂದಿತ್ತು. ಈಗ ವಿದೇಶಿಯರೇ ಬೆಳಗಾವಿಗೆ ಶಿಕ್ಷಣ ಪಡೆಯಲು ಬರುವಂತಾಗಿರುವುದು ಕನ್ನ್ನಡಿಗರ ಸಾಮರ್ಥ್ಯಕ್ಕೆ ಸಾಕ್ಷಿ.
ಈ ಸಂಸ್ಥೆಯನ್ನು ಕೇವಲ ಏಳು ಶಿಕ್ಷಕರು ಸೇರಿ ಆರಂಭಿಸಿದರು. ಪ್ರಾರಂಭದಲ್ಲಿ ಕೇವಲ 100-150 ಗೌರವ ಸಂಭಾವನೆ ಪಡೆದು ಎಲ್ಲರೂ ಒಂದೇ ಕಟ್ಟಡದಲ್ಲಿ ವಾಸವಾಗಿದ್ದು, ರೊಟ್ಟಿ-ಖಾರಬ್ಯಾಳಿ ಉಂಡು ಸಾಲು ಸಾಲಾಗಿ ಶಿಕ್ಷಣ ಸಂಸ್ಥೆಗಳನ್ನ್ನು ಹುಟ್ಟು ಹಾಕಿದರು. ಸಾಮಾಜಿಕ ಋಣಪ್ರಜ್ಞೆಯೊಂದಿಗೆ ಕೆಎಲ್ಇ ಸಂಸ್ಥೆಯನ್ನು ಬೆಳೆಸಿದರು. ಅಶಿಕ್ಷಿತ ಸಮಾಜಕ್ಕೆ, ಹಿಂದುಳಿದ ಶಿಕ್ಷಣ ವಂಚಿತ ಜನಾಂಗಗಳಿಗೆ ಶಿಕ್ಷಣದ ಬಾಗಿಲುಗಳನ್ನ್ನು ತೆರೆದರು. ತನ್ಮೂಲಕ ಉತ್ತರ ಕರ್ನಾಟಕದ ಹತ್ತು ಹಲವು ಸಮಸ್ಯೆಗಳಿಗೆ ಶಿಕ್ಷಣದ ಮೂಲಕವೇ ಅರಿವಿನ ಬಾಗಿಲು ತೆರೆದರು. ಜ್ಞಾನದ ಬಲದಿಂದ ಅಜ್ಞಾನದಿಂದಾಗುವ ಕೆಡುಕುಗಳನ್ನ್ನು ನಿವಾರಿಸಿದರು. ಶಿಕ್ಷಣದಿಂದ ಮಾತ್ರ ವ್ಯಕ್ತಿ ಹಾಗೂ ಸಮಾಜ ಪ್ರಗತಿ ಸಾಧಿಸಬಲ್ಲದು ಎಂಬುದನ್ನ್ನು ಸಿದ್ಧಮಾಡಿ ತೋರಿಸಿದರು. ನೂರು ವರ್ಷಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಕೆ.ಜಿ. ಮೊದಲು ಮಾಡಿ ಪಿ.ಜಿ, ಪಿಎಚ್ಡಿ ಪದವಿಗಳನ್ನೂ ಸಂಪಾದಿಸಿ ವಿವಿಧ ಕ್ಷೇತ್ರಗಳಲ್ಲಿ ಉನ್ನ್ನತ ಹುದ್ದೆಗಳನ್ನ್ನು ಅಲಂಕರಿಸಿದರು.
ಭಾರತೀಯರಿಗೆ ಹೆಚ್ಚಾಯ್ತು ಬೇಡಿಕೆ: ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ತಮ್ಮ ಪ್ರತಿಭ್ನೆ ಮೆರೆಯಲು ಸಾಧ್ಯವಾಯಿತು. ಭಾರತೀಯರಿಗೆ ಬಹುದೊಡ್ಡ ಬೇಡಿಕೆ ಬಂದಿತು. ಈ ಸಾಧನೆಗಳ ಹಿಂದೆ ಕೆಎಲ್ಇ ಸಂಸ್ಥೆಯ ಪಾಲು ಅಪಾರ, ಅನನ್ಯವಾಗಿದೆ. ಕೆಎಲ್ಇ ಶಿಕ್ಷಣ ಸಂಸ್ಥೆಗಳಲ್ಲಿ ಓದಿದವರಿಗೆ ಜಗತ್ತಿನ ಎಲ್ಲೆಡೆ ಅಪಾರ ಬೇಡಿಕೆ ಇದೆ.
ಇವೆಲ್ಲ ಕೇವಲ ಒಂದೆರಡು ದಿನಗಳಲ್ಲಿ ಸಾಧ್ಯವಾದುದಲ್ಲ. ಈ ಸಾಧನೆಯ ಹಿಂದೆ ನೂರು ವರ್ಷಗಳ ಪರಿಶ್ರಮದ ಬೆವರಿನ ಕತೆ ಇದೆ. 1944ರವರೆಗಿನ ಅವಧಿಯಲ್ಲಿ ಕೇವಲ ಕೆಎಲ್ಇ ಸಂಸ್ಥಾಪಕ, ಆಜೀವ ಸದಸ್ಯರ ಅಧಿಕಾರ ವ್ಯಾಪ್ತಿ ಇದ್ದ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ 1945ರಿಂದ ಸಾರ್ವಜನಿಕರೂ ಪ್ರವೇಶಿಸುವಂತಾಯಿತು.
ಡಾ.ಕೋರೆಯಿಂದ ಸಂಸ್ಥೆಗೆ ಮರುಜೀವ: ನಿಯಮಾವಳಿಗಳು ಬದಲಾದವು. 1947ರಲ್ಲಿ ಭಾರತಕ್ಕೆ ಸ್ವಾತಂತ್ಯ್ರ ಬಂದಾಗ ಕೆಎಲ್ಇ ಸಂಸ್ಥೆಯ ಹೆಸರು ಕರ್ನಾಟಕ ಲಿಬರಲ್ ಶಿಕ್ಷಣ ಸಂಸ್ಥೆ ಎಂದಾಯಿತು. ಅದು ಮತ್ತೆ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ಎಂದು ಮರು ನಾಮಕರಣಗೊಂಡಿದ್ದು 1995ರಲ್ಲಿ. ಡಾ. ಪ್ರಭಾಕರ ಕೋರೆ ನೇತೃತ್ವದ ಆಡಳಿತ ಮಂಡಳಿ ಸಮಾಜದ ಭಾವನೆಗಳಿಗೆ ಸ್ಪಂದಿಸುತ್ತ ಕೆಎಲ್ಇ ಸಂಸ್ಥೆ ಅಭಿಮಾನದಿಂದ ತಲೆಎತ್ತಿ ನಿಲ್ಲುವ ಕಾರ್ಯ ಮಾಡಿದರು.
1984ರಲ್ಲಿ 38ರಷ್ಟು ಇದ್ದ ಅಂಗಸಂಸ್ಥೆಗಳ ಸಂಖ್ಯೆ ಇಂದು ದೇಶದ ತುಂಬ ವಿಸ್ತರಿಸುತ್ತಲೇ ವಿದೇಶಗಳಿಗೂ ಚಾಚಿಕೊಳ್ಳತೊಡಗಿದೆ. ಇಂದು ಕೆಎಲ್ಇ 239 ಅಂಗಸಂಸ್ಥೆಗಳನ್ನು ಮುನ್ನ್ನಡೆಸುತ್ತ ವಿಶ್ವವಿದ್ಯಾಲಯದ ಸ್ಥಾನಮಾನ ಪಡೆದು ಹೆಮ್ಮೆಯಿಂದ ಬೀಗುವಂತಾಗಿದೆ. ಬರುವ ಮಾರ್ಚ್ ವೇಳೆಗೆ ಕೆಎಲ್ಇ ದುಬೈನಲ್ಲಿ ಸಿಬಿಎಸ್ಇ ಶಾಲೆ ಪ್ರಾರಂಭಿಸುತ್ತದೆ. ಕರ್ನಾಟಕದ ಪ್ರತಿ ತಾಲೂಕಿನಲ್ಲಿಯೂ ಗುಣಮಟ್ಟದ ಸಿಬಿಎಸ್ಇ ಶಾಲೆ ಹಾಗೂ ಪಿಯು ವಿಜ್ಞಾನ ಕಾಲೇಜುಗಳನ್ನ್ನು ತೆರೆಯುತ್ತ ಸಾಗಿರುವ ಕೆಎಲ್ಇ ಸಂಸ್ಥೆ ಡಾ. ಪ್ರಭಾಕರ ಕೋರೆಯವರ ಎಣೆ ಇಲ್ಲದ ಉತ್ಸಾಹ ಹಾಗೂ ವೇಗಗಳಿಗೆ ನಿದರ್ಶನವಾಗಿದೆ. ಅಂತೆಯೇ ಈ ಸಂಸ್ಥೆಯ ಬೆಳವಣಿಗೆ ವಿಸ್ಮಯಕಾರಿ ಎನಿಸಿದೆ. ಹಲವಾರು ಶಿಕ್ಷಣ ಸಂಸ್ಥೆಗಳಿಗೆ 'ರೋಲ್ ಮಾಡೆಲ್' ಆಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ 'ನಾ ಮುಂದು ತಾ ಮುಂದು' ಎಂಬ ಸ್ಪರ್ಧೆಗೆ ಕೆಎಲ್ಇ ಕಾರಣ ಎನಿಸಿದೆ. ಇಂದು ಪಾಲಕರು ಸುಶಿಕ್ಷಿತರೆನಿಸಿದ್ದಾರೆ. ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಬೇಕು. ಶಿಕ್ಷಣ ಪಡೆಯಲು ಉತ್ತಮ ಕಟ್ಟಡವಿರಬೇಕು. ಎಲ್ಲ ಸೌಲಭ್ಯಗಳೂ ಇರಬೇಕು. ಎಲ್ಲವಕ್ಕೂ ಮಿಗಿಲಾಗಿ ಉತ್ಕೃಷ್ಟ ಸ್ಟ್ಯಾಫ್ ಇರಬೇಕು. ನೂರಕ್ಕೆ ನೂರು ಫಲಿತಾಂಶ ಬರಬೇಕು, ಶಿಕ್ಷಣ ಪೂರೈಸುವಾಗಲೇ ಉದ್ಯೋಗ ಅರಸಿ ಬರಬೇಕು... ಇದು ಇಂದಿನ ಪಾಲಕರ ಬೇಡಿಕೆಗಳು. ಇದಕ್ಕಾಗಿ ಅವರು ಜಾತಿ-ಧರ್ಮ-ಭಾಷೆಗಳನ್ನ್ನು ಮೀರಿದ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇಂದು ಓಣಿಗೆ ಹತ್ತಾರು ಶಾಲೆಗಳು, ನಾಲ್ಕಾರು ಕಾಲೇಜುಗಳು ಬಂದಿವೆ. ಭಾರತವೂ ಜಾಗತೀಕರಣಕ್ಕೆ ಒಡ್ಡಿಕೊಂಡಿದೆ. ಇಂದು ಮಾಸ್-ಎಜುಕೇಷನ್ ಅರ್ಥ ಕಳೆದುಕೊಂಡಿದೆ. ಕ್ಲಾಸ್ ಎಜುಕೇಷನ್ ಬೇಕಿದೆ.
ಇಂಥ ಗುಣಮಟ್ಟದ ಶಿಕ್ಷಣ ಪ್ರಸಾರಕ್ಕೆ ಹಾಗೂ ವಿರಳಾತಿವಿರಳ ಚಿಕಿತ್ಸೆ ಹಾಗೂ ಉಪಚಾರಗಳಿಗೆ ಖ್ಯಾತಿ ಪಡೆದ ಕೆಎಲ್ಇ ಶಾಲೆ-ಕಾಲೇಜುಗಳು, ತರಬೇತಿ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ಆಸ್ಪತ್ರೆಗಳು ಬೆಳಗಾವಿಯ ಹೆಸರನ್ನ್ನೂ, ಬೆಳಗಾವಿಯ ಜತೆಗೆ ಕರ್ನಾಟಕದ ಹೆಸರನ್ನೂ ಪ್ರಪಂಚದ ಭೂಪಟದಲ್ಲಿ ಗುರುತಿಸುವಂತೆ ಮಾಡಿವೆ. ರಾವ್ಬಹದ್ದೂರ ಅರಟಾಳ ರುದ್ರಗೌಡರು, ಚಚಡಿಯ ವ್ಹಿ.ಜಿ.ನಾಯಕ ಬಹದ್ದೂರ ದೇಸಾಯಿ, ಶ್ರೀಮಂತ ವೈಜಪ್ಪ ಅನಿಗೋಳರಂಥ ಸಮಾಜಮುಖಿ ಚಿಂತಕರ ಬೆಂಬಲದಿಂದ ಕೆಎಲ್ಇ ಸಂಸ್ಥೆಯನ್ನ್ನು ಹುಟ್ಟು ಹಾಕಿದ ದಿವಂಗತ ಪ್ರೊ.ಎಂ.ಆರ್.ಸಾಖರೆ, ಪ್ರೊ.ಎಸ್.ಎಸ್. ಬಸವನಾಳ, ಡಾ.ಎಚ್.ಎಫ್.ಕಟ್ಟೀಮನಿ, ಬಿ.ಬಿ. ಮಮದಾಪುರ, ಬಿ.ಎಸ್.ಹಂಚಿನಾಳ, ಪಂಡಿತಪ್ಪ ಚಿಕ್ಕೋಡಿ ಹಾಗೂ ಸರದಾರ ವೀರನಗೌಡ ಪಾಟೀಲರು ಸದಾ ಸ್ಮರಣೀಯರು. ಸಂಸ್ಥಾಪಕರ ಸಂಕಲ್ಪದಂತೆ ಅವರ ಕನಸುಗಳನ್ನ್ನು ಸಾಕಾರಗೊಳಿಸುತ್ತ ಕೆಎಲ್ಇ ಸಂಸ್ಥೆಯನ್ನು ವಿಸ್ತಾರವಾಗಿ ಬೆಳೆಸಿರುವ ಡಾ. ಪ್ರಭಾಕರ ಕೋರೆ ಮತ್ತು ಅವರ ತಂಡ ಅದ್ಭುತ ಸಾಧನೆಗಳನ್ನು ಮಾಡಿದೆ. ಕನ್ನಡಿಗರೆಲ್ಲ ಅಚ್ಚರಿಪಡುವಂಥ ಸಂಸ್ಥೆಗಳನ್ನು ಹುಟ್ಟು ಹಾಕಿ ದಾಖಲೆ ಸ್ಥಾಪಿಸಿರುವ ಕೆಎಲ್ಇ ಆಡಳಿತ ಮಂಡಳಿ ಅಭಿನಂದನೆಗಳಿಗೆ ಪಾತ್ರವಾಗಿದೆ.
- ಪ್ರಾ. ಬಿ.ಎಸ್.ಗವಿಮಠ ಬೆಳಗಾವಿ