ಬೆಳಗಾವಿ ಅಧಿವೇಶನದಲ್ಲಿ ಮೌಢ್ಯಕ್ಕೆ ಜಾಗವಿಲ್ಲ
ಮೂಢನಂಬಿಕೆ ಪ್ರತಿಬಂಧಕ ವಿಧೇಯಕವನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸುವುದಿಲ್ಲ ಎಂದು ಮುಖ್ಯಮಂತ್ರಿ...
ಕನ್ನಡಪ್ರಭ ವಾರ್ತೆ, ಮಂಗಳೂರು, ನ. 11-
ಮೂಢನಂಬಿಕೆ ಪ್ರತಿಬಂಧಕ ವಿಧೇಯಕವನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ಮಂಗಳೂರಿನ ಬಜ್ಪೆ ಕರಂಬಾರಿನಲ್ಲಿ ಸೋಮವಾರ ಶ್ರೀನಾರಾಯಣಗುರು ಮಂದಿರ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜಯಚಂದ್ರ ಅವರು ಹೇಳಿದಂತೆ ಮೂಢನಂಬಿಕೆ ನಿಷೇಧದ ಬಗ್ಗೆ ಎರಡು ವರದಿಗಳು ನನ್ನ ಕೈ ಸೇರಿವೆ. ಈ ಕುರಿತು ಇನ್ನಷ್ಟೇ ಚರ್ಚೆಯಾಗಬೇಕಿದೆ. ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಇವುಗಳ ಮಂಡನೆ ಸಾಧ್ಯವಾಗುವುದಿಲ್ಲ. ಸಚಿವ ಜಯಚಂದ್ರ ಅವರು ಬೆಳಗಾವಿ ಅಧಿವೇಶನದಲ್ಲಿಯೇ ಈ ವಿಧೇಯಕ ಮಂಡಿಸುತ್ತೇವೆ ಎಂದು ಖಡಾ ಖಂಡಿತವಾಗಿ ಎಲ್ಲೂ ಹೇಳಿಲ್ಲ. ಗುಣಾವಗುಣಗಳ ಬಗ್ಗೆ ಚರ್ಚಿಸಿದ ಬಳಿಕವೇ ಕಾಯಿದೆ ಜಾರಿಗೆ ಬರಲಿದೆ ಎಂದರು.