ಬಿಹಾರ ಪೊಲೀಸ್ ವಶಕ್ಕೆಆಯಿಷಾ
ಪಟನಾ ಸ್ಫೋಟ ಆರೋಪಿಗಳಿಗೆ ಹಣಕಾಸು ವ್ಯವಹಾರದಲ್ಲಿ ನೆರವು ನೀಡಿದ ಆರೋಪಿಗಳಾದ ಆಯಿಷಾ ಬಾನು ಮತ್ತು ಜುಬೇರ್ನನ್ನು ಬಿಹಾರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಮಂಗಳೂರು: ಪಟನಾ ಸ್ಫೋಟ ಆರೋಪಿಗಳಿಗೆ ಹಣಕಾಸು ವ್ಯವಹಾರದಲ್ಲಿ ನೆರವು ನೀಡಿದ ಆರೋಪಿಗಳಾದ ಆಯಿಷಾ ಬಾನು ಮತ್ತು ಜುಬೇರ್ನನ್ನು ಮೂರನೇ ಹೆಚ್ಚುವರಿ ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಿದ್ದು, ಬಿಹಾರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಬಿಹಾರಕ್ಕೆ ತೆರಳಲು 5 ದಿನ ಬೇಕಾಗಿರುವುದರಿಂದ ಬಿಹಾರ ಪೊಲೀಸರ ಮನವಿಯಂತೆ ಕೋರ್ಟ್ 15 ದಿನ ಪ್ರಯಾಣದ ವಾರಂಟ್ ನೀಡಿದೆ. ಪಣಂಬೂರು ಪೊಲೀಸ್ ಠಾಣೆಯಿಂದ ಇಬ್ಬರನ್ನು ಮಂಗಳೂರಿನ ಕೋರ್ಟ್ ಆವರಣಕ್ಕೆ ಬುಧವಾರ ಮಧ್ಯಾಹ್ನ ಕರೆ ತರಲಾಯಿತು. ಆರು ತಿಂಗಳ ಮಗುವನ್ನು ಎದೆಗವಚಿಕೊಂಡು ಬಂದಿದ್ದ ಆಯಿಷಾ ಜೊತೆ ಜುಬೇರ್ ಕೂಡಾ ಇದ್ದ. ಅಲ್ಲಿಂದ ಅವರನ್ನು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬಿಹಾರ ಪೊಲೀಸರು ಪಣಂಬೂರು ಪೊಲೀಸ್ ಠಾಣೆಯತ್ತ ಕರೆದೊಯ್ದರು.
ಬಿಹಾರದಿಂದ ಒಬ್ಬರೇ ಸಬ್ಇನ್ಸ್ಪೆಕ್ಟರ್ ಮಂಗಳೂರಿಗೆ ಬಂದಿದ್ದು, ಕರೆದೊಯ್ಯಲು ತಂಡ ಬರುತ್ತಿದೆ ಎನ್ನಲಾಗುತ್ತಿದೆ. ಆದರೆ, ಇದುವರೆಗೂ ಮಂಗಳೂರು ತಲುಪಿಲ್ಲ.