64 ಬರಪೀಡಿತ ತಾಲೂಕು
ರಾಜ್ಯದಲ್ಲಿ ಈ ವರ್ಷ ಅತಿ ಹೆಚ್ಚು ಮಳೆ ಆಗಿದ್ದರೂ 22 ಜಿಲ್ಲೆಗಳ 64 ತಾಲೂಕುಗಳು ಬರಪೀಡಿತ. ಈ ತಾಲೂಕುಗಳನ್ನು ರಾಜ್ಯ ಸರ್ಕಾರವೇ ಬರಪೀಡಿತ ಎಂದು ಘೋಷಿಸಿದೆ.
ರಾಜ್ಯದಲ್ಲಿ ಈ ವರ್ಷ ಅತಿ ಹೆಚ್ಚು ಮಳೆ ಆಗಿದ್ದರೂ 22 ಜಿಲ್ಲೆಗಳ 64 ತಾಲೂಕುಗಳು ಬರಪೀಡಿತ. ಈ ತಾಲೂಕುಗಳನ್ನು ರಾಜ್ಯ ಸರ್ಕಾರವೇ ಬರಪೀಡಿತ ಎಂದು ಘೋಷಿಸಿದೆ. ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ ಮಾರ್ಗಸೂಚಿ ಅನ್ವಯ ಮಳೆ ಕೊರತೆ ಮತ್ತು ತೇವಾಂಶ ಕೊರತೆ ಪರಿಗಣಿಸಿ ಈ ಘೋಷಣೆ ಮಾಡಲಾಗಿದೆ. ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಈ ತಾಲೂಕುಗಳ ಪಟ್ಟಿ ಮಾಡಲಾಗಿದ್ದು, ಅದರಂತೆ 2013-14ನೇ ಸಾಲಿನಲ್ಲಿ 64 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.
ಈ ತಾಲೂಕುಗಳಿಗೆ ತುರ್ತು ಕುಡಿಯುವ ನೀರು ಪೂರೈಕೆ, ಉದ್ಯೋಗ ಖಾತ್ರಿ ಯೋಜನೆ, ಉದ್ಯೋಗ ಒದಗಿಸುವ ಕಾರ್ಯಕ್ರಮ, ಜಾನುವಾರು ಸಂರಕ್ಷಣೆ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
ಬರಬಾದ್
-ಬೆಂಗಳೂರು ನಗರ: ಬೆಂಗಳೂರು ದಕ್ಷಿಣ.
-ರಾಮನಗರ: ಕನಕಪುರ, ಮಾಗಡಿ, ರಾಮನಗರ.
-ಕೋಲಾರ: ಬಂಗಾರಪೇಟೆ, ಮುಳಬಾಗಿಲು, ಶ್ರೀನಿವಾಸಪುರ.
-ಚಿಕ್ಕಬಳ್ಳಾಪುರ: ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ.
-ತುಮಕೂರು: ಚಿಕ್ಕನಾಯ್ಕನಹಳ್ಳಿ, ಗುಬ್ಬಿ, ಮಧುಗಿರಿ, ಪಾವಗಡ, ಶಿರಾ.
-ಚಿತ್ರದುರ್ಗ: ಚಳ್ಳಕೆರೆ, ಹಿರಿಯೂರು, ಹೊಸದುರ್ಗ, ಮೊಳಕಾಲ್ಮೂರು.
-ದಾವಣಗೆರೆ: ಜಗಳೂರು
-ಚಾಮರಾಜನಗರ: ಚಾಮರಾಜನಗರ, ಗುಂಡ್ಲುಪೇಟೆ.
-ಮೈಸೂರು: ಕೃಷ್ಣರಾಜನಗರ, ಮೈಸೂರು, ನಂಜನಗೂಡು, ಟಿ.ನರಸೀಪುರ.
-ಮಂಡ್ಯ: ಕೃಷ್ಣರಾಜಪೇಟೆ, ಮದ್ದೂರು, ಪಾಂಡವಪುರ, ಶ್ರೀರಂಗಪಟ್ಟಣ.
-ಬಳ್ಳಾರಿ: ಬಳ್ಳಾರಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಸಂಡೂರು, ಸಿರುಗುಪ್ಪ.
-ಕೊಪ್ಪಳ: ಗಂಗಾವತಿ; ಗುಲ್ಬರ್ಗ- ಜೀವರ್ಗಿ
-ಯಾದಗಿರಿ: ಶಹಾಪೂರ, ಯಾದಗಿರಿ
-ಬೆಳಗಾವಿ: ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ಗೋಕಾಕ್, ಹುಕ್ಕೇರಿ, ಖಾನಾಪುರ, ರಾಮದುರ್ಗಾ, ರಾಯಭಾಗ, ಸವದತ್ತಿ.
-ಬಾಗಲಕೋಟೆ: ಬಾದಾಮಿ, ಬಾಗಲಕೋಟೆ, ಬೀಳಗಿ, ಮುಧೋಳ.
-ಬಿಜಾಪುರ: ಬಿಜಾಪುರ; ಗದಗ- ನರಗುಂದ, ರೋಣ.
-ಹಾವೇರಿ: ಹಾವೇರಿ; ಧಾರವಾಡ- ಹುಬ್ಬಳ್ಳಿ, ಕಲಘಟಗಿ.
-ಹಾಸನ: ಅರಕಲಗೂಡು, ಬೇಲೂರು; ಉತ್ತರ ಕನ್ನಡ-ಹಳಿಯಾಳ.