ಕ್ರಿಕೆಟ್ ಖಚಿತ ಸಿಂಹಾಸನ
ಕ್ರಿಕೆಟ್ ಅನರ್ಘ್ಯ ರತ್ನಕ್ಕೆ ಭಾರತ ರತ್ನ ಪ್ರಶಸ್ತಿ. ಅದೂ ನಿವೃತ್ತಿಯಾದ ದಿನದಂದೇ ಈ ಪ್ರಶಸ್ತಿ ನೀಡಿರುವುದು ಅವರ ಅಭಿಮಾನಿಗಳಲ್ಲಿ ಸಂತಸದ ಹೊಳೆಯನ್ನೇ ಹರಿಸಿಬಿಟ್ಟಿದೆ.
ಕ್ರಿಕೆಟ್ ಅನರ್ಘ್ಯ ರತ್ನಕ್ಕೆ ಭಾರತ ರತ್ನ ಪ್ರಶಸ್ತಿ. ಸಂವಿಧಾನಕ್ಕೆ ತಿದ್ದುಪಡಿ ತಂದ ನಂತರ ಇದೇ ಮೊದಲ ಬಾರಿಗೆ ಕ್ರೀಡಾಪಟುವೊಬ್ಬರಿಗೆ ಈ ಪ್ರಶಸ್ತಿ ನೀಡಲಾಗಿದೆ. ಅದೂ ನಿವೃತ್ತಿಯಾದ ದಿನದಂದೇ ಈ ಪ್ರಶಸ್ತಿ ನೀಡಿರುವುದು ಅವರ ಅಭಿಮಾನಿಗಳಲ್ಲಿ ಸಂತಸದ ಹೊಳೆಯನ್ನೇ ಹರಿಸಿಬಿಟ್ಟಿದೆ.
ಕ್ರಿಕೆಟ್ಖಚಿತ ಸಿಂಹಾಸನ
ಪೂರ್ಣ ಹೆಸರು ಸಚಿನ್ ರಮೇಶ್ ತೆಂಡೂಲ್ಕರ್
ಜನ್ಮ ದಿನಾಂಕ 24-4-1973
ಅಡ್ಡ ಹೆಸರು ಲಿಟಲ್ ಮಾಸ್ಟರ್, ಮಾಸ್ಟರ್ ಬ್ಲಾಸ್ಟರ್
ಈ ಗೌರವ ಪಡೆದ ಮೊದಲ ಕ್ರೀಡಾಪಟು
ಈ ಪ್ರಶಸ್ತಿ ಪಡೆದ ಅತಿ ಕಿರಿಯ ಭಾರತೀಯ
ವೃತ್ತಿ ಜೀವನದ ಕಡೆಯ ದಿನದಂದೇ ಈ ಪ್ರಶಸ್ತಿ ಲಭಿಸಿರುವುದು ವೈಶಿಷ್ಟ್ಯ
ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸಾಧನೆ
63, ಒಟ್ಟು ರನ್: 34,357, 100: 100
24 ವರ್ಷಗಳ ಸುದೀರ್ಘ ವೃತ್ತಿಜೀವನ
2011ರಲ್ಲಿ ವಿಶ್ವಕಪ್ ಗೆದ್ದ ತಂಡದಲ್ಲಿ ಸ್ಥಾನ
ಪ್ರಶಸ್ತಿ ಅರ್ಜುನ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ, ಪದ್ಮ ಶ್ರೀ, ಪದ್ಮ ವಿಭೂಷಣ, ಆರ್ಡರ್ ಆಫ್ ಆಸ್ಟ್ರೇಲಿಯಾ
ಭಾರತ ರತ್ನ ದೊರೆತಿರುವುದಕ್ಕೆ ಖುಷಿಯಾಗಿದೆ. ಈ ಗೌರವವನ್ನು ನನ್ನ ತಾಯಿಗೆ ಅರ್ಪಿಸುತ್ತೇನೆ. ನಾನು ಭಾರತದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಎನ್ನಿಸುತ್ತದೆ.
-ಸಚಿನ್ ತೆಂಡೂಲ್ಕರ್
ದೇವರ ಆಟ ನಿಂತಾಗ, ಎಲ್ಲವೂ ಸ್ತಬ್ಧವಾಗಿತ್ತು!
ಸುದೀರ್ಘ 24 ವರ್ಷಗಳ ವರ್ಣರಂಜಿತ ಕ್ರಿಕೆಟ್ ವೃತ್ತಿ ಜೀವನಕ್ಕೆ ಅಂತ್ಯವಾಡುವ ಘಳಿಗೆಯಲ್ಲಿ ಭಾವೊದ್ವೇಗಕ್ಕೆ ಒಳಗಾದ ಸಚಿನ್ ತೆಂಡೂಲ್ಕರ್, ತಮ್ಮ ವೃತ್ತಿಜೀವನದಲ್ಲಿ ಅವರ ಪ್ರತಿಯೊಂದು ಹೆಜ್ಜೆಗೂ ಸಾಥ್ ನೀಡಿದ ಪ್ರತಿಯೊಬ್ಬರನ್ನು ನೆನೆದು ಧನ್ಯವಾದ ಅರ್ಪಿಸಿದರು.
ಶನಿವಾರ ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ದಿನದ ಪಂದ್ಯ ಮುಕ್ತಾಯವಾಗಿ ಪ್ರಶಸ್ತಿ ಸಮಾರಂಭದ ಬಳಿಕ ಮಾತನಾಡಿದ ಸಚಿನ್, ತಾವು ನಡೆದು ಬಂದ ಹಾದಿಯನ್ನು ಮೆಲುಕು ಹಾಕುತ್ತಾ ಪ್ರತಿಯೊಬ್ಬರಿಗೂ ತಮ್ಮ ಹೃದಯದಾಳದಿಂದ ವಂದನೆ ಅರ್ಪಿಸಿದರು. ಅವರು ಮಾತನಾಡಿದ ನುಡಿಗಳು ಹೀಗಿವೆ.
22 ಅಡಿಯ ಅಂಗಣದಲ್ಲಿ 24 ವರ್ಷಗಳ ನನ್ನ ಜೀವನಕ್ಕೆ ತೆರೆ ಬೀಳುತ್ತಿರುವುದನ್ನು ನಂಬಲು ಕಷ್ಟವಾಗುತ್ತಿದೆ. ಈ ನನ್ನ ಸುದೀರ್ಘ ಪಯಣದಲ್ಲಿ ನನ್ನೊಂದಿಗೆ ನಡೆದ ಅನೇಕ ವ್ಯಕ್ತಿಗಳಿಗೆ ಧನ್ಯವಾದ ಅರ್ಪಿಸಬೇಕಾದ ಪಟ್ಟಿ ನನ್ನ ಕೈಯಲ್ಲಿದೆ.
1999ರಲ್ಲಿ ನಮ್ಮನ್ನು ಅಗಲಿದ ನನ್ನ ತಂದೆಗೆ ಮೊದಲಿಗೆ ಧನ್ಯವಾದ ಅರ್ಪಿಸುತ್ತೇನೆ. ಅವರ ಮಾರ್ಗದರ್ಶನ ಇಲ್ಲದಿದ್ದರೆ, ಇಂದು ನಾನು ನಿಮ್ಮ ಮುಂದೆ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಚಿಕ್ಕ ವಯಸ್ಸಿನಲ್ಲೇ ನನಗೆ ಸ್ವಾತಂತ್ರ ನೀಡಿ 'ನಿನ್ನ ಕನಸನ್ನು ನೀನು ಬೆನ್ನತ್ತು, ಕಠಿಣ ಹಾದಿ ಎದುರಾದರೂ ಸೋಲೊಪ್ಪಿಕೊಳ್ಳಬೇಡ. ಎಂದೂ ಅಡ್ಡ ಹಾದಿ ಹುಡುಕುವ ಪ್ರಯತ್ನ ಮಾಡಬೇಡ' ಎಂದು ಕಿವಿಮಾತು ತಿಳಿಸಿದರು. ಇಂದು ಅವರ ಅನುಪಸ್ಥಿತಿ ನನ್ನನ್ನು ಕಾಡುತ್ತಿದೆ. ನನ್ನ ತಾಯಿ, ನನ್ನಂತಹ ತುಂಟ ಹುಡುಗನನ್ನು ಆಕೆ ಹೇಗೆ ನಿಭಾಯಿಸಿದಳು ನನಗೆ ಗೊತ್ತಿಲ್ಲ. ನಾನು ಆಡಲು ಆರಂಭಿಸಿದ ಮೊದಲ ದಿನದಿಂದ ಆಕೆ ಪ್ರಾರ್ಥನೆ ಮಾಡುತ್ತಾ ಬಂದಿದ್ದಾಳೆ. ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಮನೆಗೂ ಶಾಲೆಗೂ ಅಂತರ ದೂರವಿದ್ದ ಕಾರಣ ನಾನು ಅಂಕಲ್ ಮನೆಯಲ್ಲಿ ಬೆಳೆದೆ. ಅವರು ತನ್ನ ಮಗನಂತೆ ನನ್ನನ್ನು ನೋಡಿಕೊಂಡರು. ನಾನು ದಣಿದು ಬಂದಾಗ ಕೈತುತ್ತ ತಿನ್ನಿಸಿದರು.
ಇನ್ನು ನನ್ನ ಹಿರಿಯ ಅಣ್ಣ ನಿತಿನ್, ಆತ ಹೆಚ್ಚು ಮಾತನಾಡುವುದಿಲ್ಲ. ನೀನು ಏನೇ ಮಾಡಿದರೂ ನೂರರಷ್ಟು ಪರಿಶ್ರಮ ಹಾಕುವ ನಂಬಿಕೆ ನನ್ನಲ್ಲಿದೆ ಎಂದು ಪ್ರೋತ್ಸಾಹ ನೀಡಿದ್ದಾನೆ. ನನಗೆ ಮೊದಲ ಕ್ರಿಕೆಟ್ ಬ್ಯಾಟ್ ಉಡುಗೊರೆಯಾಗಿ ನೀಡಿದ್ದು, ನನ್ನ ಅಕ್ಕ ಸವಿತಾ. ಈಗಲೂ ನಾನು ಬ್ಯಾಟಿಂಗ್ ಮಾಡುವಾಗ ಆಕೆ ಉಪವಾಸಮಾಡುವುದನ್ನು ಮುಂದುವರಿಸಿದ್ದಾಳೆ. ಅಜಿತ್ ನನ್ನ ಅಣ್ಣ, ನಾವಿಬ್ಬರೂ ಒಟ್ಟಾಗಿ ಈ ಕನಸನ್ನು ಕಟ್ಟಿ ಜೀವಿಸಿದ್ದೇವೆ. ನನಗಾಗಿ ಆತ ತನ್ನ ಜೀವನವನ್ನು ಮುಡಿಪಾಗಿಟ್ಟ. ಆತ ನನ್ನನ್ನು ಮೊದಲು ಆಚ್ರೆಕರ್ ಸರ್ ಬಳಿ ಕರೆದುಕೊಂಡು ಹೋಗಿ ಪರಿಚಯಿಸಿದ. ಕಳೆದ ರಾತ್ರಿಯೂ ನಾವಿಬ್ಬರು, ನಾನು ಔಟಾದ ಪರಿಯನ್ನು ಚರ್ಚಿಸಿದ್ದೇವೆ. ಸಾಕಷ್ಟು ಬಾರಿ ಕ್ರಿಕೆಟ್ನ ತಾಂತ್ರಿಕ ವಿಷಯದ ಬಗ್ಗೆ ಚರ್ಚೆ ನಡೆಸಿದ್ದೇವೆ. ಕೆಲವೊಮ್ಮೆ ನಾವಿಬ್ಬರು ಒಮ್ಮತ ಅಭಿಪ್ರಾಯಕ್ಕೆ ಬರುತ್ತಿರಲಿಲ್ಲ. ಈ ಪ್ರಕ್ರಿಯೆ ನಡೆಯದಿದ್ದರೆ, ನಾನು ಈ ಮಟ್ಟಕ್ಕೆ ತಲುಪಲು ಸಾಧ್ಯವಾಗುತ್ತಿರಲಿಲ್ಲ.
ನನ್ನ ಜೀವನದ ಸುಂದರ ಕ್ಷಣ ಎಂದರೆ, 1990ರಲ್ಲಿ ಅಂಜಲಿಯನ್ನು ಭೇಟಿ ಮಾಡಿದ್ದು. ಆಕೆ ವೃತ್ತಿಪರ ಡಾಕ್ಟರ್ ಆಗಿದ್ದು, ಉಜ್ವಲ ಭವಿಷ್ಯ ಹೊಂದಿದ್ದಳು. ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡು ನಾನು ನಿರಾತಂಕವಾಗಿ ನನ್ನ ಆಟ ಮುಂದುವರಿಸಲು ಪ್ರೋತ್ಸಾಹ ನೀಡಿದಳು. ಎಲ್ಲಾ ವಿಷ್ಯಗಳಲ್ಲೂ ನನ್ನೊಂದಿಗೆ ಸಹಕರಿಸಿದಕ್ಕೆ ಧನ್ಯವಾದಗಳು. ನಾನು ಜೀವನದಲ್ಲಿ ಎರಡು ಮುತ್ತುಗಳನ್ನು ಹೊಂದಿದ್ದು, ಸಾರಾ ಹಾಗೂ ಅರ್ಜುನ್. ಅವರ ಸಾಕಷ್ಟು ಹುಟ್ಟುಹಬ್ಬ, ವಾರ್ಷಿಕ ಸಭ್ರಮದ ವೇಳೆ ಅವರೊಡನೆ ಇರಲು ಸಾಧ್ಯವಾಗಲಿಲ್ಲ. 14-16 ವರ್ಷಗಳ ಕಾಲ ನಿಮ್ಮೊಂದಿಗೆ ನಾನು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ನಾನು ಮುಂದಿನ 16 ಅಥವಾ ಸಾಧ್ಯವಾಗುವಷ್ಟು ಕಾಲ ನಿಮ್ಮೊಂದಿಗೆ ಇರುವ ಭರವಸೆ ನೀಡುತ್ತೇನೆ. "ನನ್ನ ಅತ್ತೆ ಮಾವನ ಜತೆ ನಾನು ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಅವರು ತೆಗೆದುಕೊಂಡ ಪ್ರಮುಖ ನಿರ್ಧಾರ ಅಂಜಲಿ ನನ್ನನ್ನು ಮದುವೆಯಾಗಲು ಒಪ್ಪಿಕೊಂಡಿದ್ದು".
ಕಳೆದ 24 ವರ್ಷಗಳಲ್ಲಿ ನನ್ನ ಸ್ನೇಹಿತರ ಕೊಡುಗೆ ಅಪಾರ. ನಾನು ಒತ್ತಡದಲ್ಲಿದ್ದಾಗ ಸಂಕಷ್ಟ ಪರಿಸ್ಥಿತಿ ಎದುರಿಸುವಾಗ ನನ್ನೊಂದಿಗೆ ಬೆಂಬಲವಾಗಿ ನಿಂತರು. ನಾನು ಗಾಯದ ಸಮಸ್ಯೆ ಎದುರಿಸುತ್ತಿರುವಾಗ ಸ್ನೇಹಿತರ ಬೆಳಗಿನ ಜಾವ 3 ಗಂಟೆ ಸಮಯದಲ್ಲೂ ನನ್ನೊಂದಿಗೆ ಇದ್ದರು. ಹಾಗಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.
ನನ್ನ ವೃತ್ತಿ ಜೀವನ ಆರಂಭವಾಗಿದ್ದು, 11ನೇ ವಯಸ್ಸಿನಲ್ಲಿ. ಆರ್ಚೆಕ್ರರ್ ಸರ್ ಅವರನ್ನು ಕ್ರೀಡಾಂಗಣದಲ್ಲಿ ನೋಡಲು ತುಂಬಾ ಉತ್ಸುಕನಾಗಿದ್ದೆ. ಆದರೆ ಅವರು ಟಿವಿಯಲ್ಲೇ ನನ್ನ ಎಲ್ಲಾ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಅವರ ಸ್ಕೂಟರ್ ಮೇಲೆ ನಾನು ಪ್ರತಿ ದಿನ ತೆರಳಿ ಎರಡು ಅಭ್ಯಾಸ ಪಂದ್ಯಗಳನ್ನಾಡುತ್ತಿದ್ದೆ. ನಾನು ತೃಪ್ತನಾಗಿ ಕಠಿಣ ಪರಿಶ್ರಮ ನಿಲ್ಲುಸುವ ಕಾರಣಕ್ಕೆ ಅವರು ಎಂದೂ 'ನೀನು ಚೆನ್ನಾಗಿ ಆಡಿದೆ' ಎಂದು ಹೇಳಿಲ್ಲ. ಸರ್ ಈಗ ನೀವು ನನ್ನ ಆಟದ ಬಗ್ಗೆ ಮಾತನಾಡ ಬಹುದು, ಕಾರಣ ನಾನು ಇನ್ನು ಮುಂದೆ ಯಾವುದೇ ಪಂದ್ಯವನ್ನಾಡುವುದಿಲ್ಲ. ನಾನು ಮುಂಬೈನಲ್ಲಿ ವೃತ್ತಿಜೀವನ ಆರಂಭಿಸಿದೆ. ಮುಂಬೈಗಾಗಿ ಆಡಲು ನಾನು ಹೆಚ್ಚು ಇಷ್ಟ ಪಡುತ್ತೇನೆ. ಹಾಗಾಗಿ ನ್ಯೂಜಿಲೆಂಡ್ನಿಂದ ಭಾರತಕ್ಕೆ ಬೆಳಗಿನ ಜಾವ ಆಗಮಿಸಿ ಮರುದಿನ ರಣಜಿ ಪಂದ್ಯವನ್ನಾಡಿದ್ದೇನೆ. ಎಂಸಿಎ ಎಂದೂ ನನ್ನ ಮೇಲೆ ಒತ್ತಡ ಹೇರಿಲ್ಲ. ನನಗೆ ಬೇಕಾದ ಎಲ್ಲಾ ನೆರವನ್ನು ನೀಡಿದೆ.
ನನ್ನ ಪದಾರ್ಪಣೆ ಪಂದ್ಯದಿಂದ ಬಿಸಿಸಿಐ ನನ್ನನ್ನು ಬೆಂಬಲಿಸುತ್ತಾ ಬಂದಿದೆ. 16 ವರ್ಷದ ಹುಡುಗನ ಮೇಲೆ ಭರವಸೆ ಇಟ್ಟು ತಂಡದಲ್ಲಿ ಅವಕಾಶ ನೀಡಿದ ಆಯ್ಕೆಗಾರರಿಗೆ ಅಭಿನಂಧನೆ ಸಲ್ಲಿಸುತ್ತೇನೆ. ನನ್ನೊಂದಿಗೆ ಆಡಿದ ಎಲ್ಲಾ ಹಿರಿಯ ಆಟಗಾರರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ರಾಹುಲ್, ವಿವಿಎಸ್, ಸೌರವ್ ಹಾಗೂ ಅನಿಲ್ ಉತ್ತಮ ಬೆಂಬಲ ನೀಡಿದ್ದಾರೆ. ಇದುವರೆಗೂ ನನಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡಿದ ಎಲ್ಲಾ ಕೋಚ್ಗಳಿಗೆ ವಂದನೆಗಳು. ನಾನು ಪಂದ್ಯದ ಮೊದಲ ದಿನ ಎಂ.ಎಸ್ ಧೋನಿಯಿಂದ 200ನೇ ಪಂದ್ಯದ ಕ್ಯಾಪ್ ಪಡೆಯುವಾಗ ತಂಡಕ್ಕೆ ಒಂದು ಸಂದೇಶ ತಿಳಿಸಿದೆ. "ದೇಶವನ್ನು ಪ್ರತಿನಿಧಿಸುತ್ತಿರುವ ನಾವೆಲ್ಲರೂ ಹೆಮ್ಮೆ ಪಡಬೇಕು. ಇದೇ ರೀತಿಯಲ್ಲಿ ದೇಶಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರಿಸಬೇಕು. ಉತ್ತಮ ಮನೋಭಾವದಿಂದ ದೇಶಕ್ಕೆ ಸೇವೆ ಸಲ್ಲಿಸುವ ವಿಶ್ವಾಸ ನನ್ನಲ್ಲಿದೆ.
ನಾನು ಸದಾ ಫಿಟ್ ಆಗಿರುವಂತೆ ನೊಡಿಕೊಂಡ ಎಲ್ಲಾ ಡಾಕ್ಟರ್ಗಳಿಗೂ ಧನ್ಯವಾದ ಅರ್ಪಿಸದಿದ್ದರೆ, ನನ್ನ ಕರ್ತವ್ಯ ಮರೆತಂತಾಗುತ್ತದೆ. ನಾನು ಗಾಯದ ಸಮಸ್ಯೆ ಎದುರಿಸಿದಾಗಲೂ ಅವರು ಹಗಲು ರಾತ್ರಿ ಎನ್ನದೆ ನನ್ನನ್ನು ಫಿಟ್ ಆಗಿರುವಂತೆ ನೋಡಿಕೊಳ್ಳಲು ಶ್ರಮ ವಹಿಸಿದ್ದಾರೆ.
ನನ್ನ ಆತ್ಮೀಯ ಸ್ನೇಹಿತ ಹಾಗೂ ನನ್ನ ಮೊದಲ ತಂಡದ ಮ್ಯಾನೇಜರ್ ಮಾರ್ಕ್ ಮಾಸ್ಕರೆನಸ್ ವಿಧಿವಶರಾಗಿದ್ದು, ಅತನ ಅನುಪಸ್ಥಿತಿ ಕಾಡುತ್ತಿದೆ. ಈಗಿನ ಭಾರತ ತಂಡದ ಆಡಳಿತ ಮಂಡಳಿ ಡಬ್ಲ್ಯೂಎಸ್ಜಿ ಸಹ ಮಾರ್ಕ್ ನೀಡಿದಂತೆ ಉತ್ತಮ ಪ್ರೋತ್ಸಾಹ ನೀಡಿದ್ದಾರೆ.ನನಗೆ ತೀರಾ ಹತ್ತಿರವಾಗಿ 14 ವರ್ಷಗಳ ಕಾಲ ಕೆಲಸ ಮಾಡಿದ ಸ್ನೇಹಿತ ಹಾಗೂ ಮ್ಯಾನೇಜರ್ ವಿನಯ್ ನಾಯ್ಡುಗೆ ಅಭಿನಂದನೆ. ನನ್ನ ಕೆಲಸಕ್ಕಾಗಿ ಆತ ತನ್ನ ಕುಟುಂಬದಿಂದ ದೂರ ಉಳಿಯಬೇಕಾಯಿತು ಹಾಗಾಗಿ ಆತನ ಕುಟುಂಬಕ್ಕೂ ಅಭಿನಂದನೆ ಸಲ್ಲಿಸುತ್ತೇನೆ.
ನಾನು ಶಾಲೆಯಲ್ಲಿದ್ದಾಗಿನಿಂದಲೂ ಮಾಧ್ಯಮಗಳು ನನಗೆ ಉತ್ತಮ ಬೆಂಬಲ ಸೂಚಿಸಿವೆ. ಫೋಟೊಗ್ರಾಫರ್ಗಳು ನನ್ನ ಜೀವನದ ಸುಮಧುರ ಕ್ಷಣಗಳನ್ನು ಸೆರೆ ಹಿಡಿದಿದ್ದಾರೆ. ಅವರಿಗೂ ಧನ್ಯವಾದಗಳು. ವಿಶ್ವದ ವಿವಿಧ ಭಾಗಗಳಿಂದ ನನ್ನನ್ನು ಬೆಂಬಲಿಸಲು ಬಂದಿರುವ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು.
ಸಚಿನ್.. ಸಚಿನ್.. ಎಂಬ ಅಭಿಮಾನಿಗಳ ಉದ್ಗಾರ ಜೀವನ ಪರ್ಯಂತ ನನ್ನ ಕಿವಿಗಳಲ್ಲಿ ಮಾರ್ದನಿಸುತ್ತದೆ
-ಸಚಿನ್ ತೆಂಡೂಲ್ಕರ್
ಟೆಸ್ಟ್ನಲ್ಲಿ ದಾಖಲಿಸಿದ ಶತಕಗಳು
ರನ್ ವಿರುದ್ಧ ಸ್ಥಳ ದಿನಾಂಕ
119 ಅ. ಇಂಗ್ಲೆಂಡ್ ಮೆಂಚೆಂಸ್ಟರ್ 9 ಆ. 1990
148 ಅ. ಆಸ್ಟ್ರೇಲಿಯಾ ಸಿಡಿ 2 ಜ. 1992
114 ಆಸ್ಟ್ರೇಲಿಯಾ ಪರ್ತ್ 1 ಫೆ. 1992
111 ದ. ಆಫ್ರಿಕಾ ಜೋಹಾನ್ಸ್ಬರ್ಗ್ 26 ನ. 1992
165 ಇಂಗ್ಲೆಂಡ್ ಚೆನೈ 11 ಫೆ. 1993
104 ಅ. ಶ್ರೀಲಂಕಾ ಕೊಲಂಬೊ 27 ಜ. 1993
142 ಶ್ರೀಲಂಕಾ ಲಖೌ 18 ಜ. 1994
179 ವೆಸ್ಟ್ ಇಂಡೀಸ್ ನಾಗ್ಪುರ 1 ಡಿ. 1994
122 ಇಂಗ್ಲೆಂಡ್ ಬರ್ಮಿಂಗ್ಹ್ಯಾಮ್ 6 ಜ. 1996
177 ಇಂಗ್ಲೆಂಡ್ ನಾಟಿಂಗ್ಹ್ಯಾಮ್ 4 ಜು. 1996
169 ದ. ಆಫ್ರಿಕಾ ಕೇಪ್ ಟೌನ್ 2 ಜ. 1997
143 ಶ್ರೀಲಂಕಾ ಕೊಲಂಬೊ 2 ಆ. 1997
139 ಶ್ರೀಲಂಕಾ ಕೊಲಂಬೊ 9 ಆ. 1997
148 ಶ್ರೀಲಂಕಾ ಮುಂಬೈ 3 ಡಿ. 1997
155 ಅ. ಆಸ್ಟ್ರೇಲಿಯಾ ಚೆನೈ 6 ಮಾ.1998
177 ಆಸ್ಟ್ರೇಲಿಯಾ ಬೆಂಗಳೂರು 25 ಮಾ. 1998
113 ನ್ಯೂಜಿಲೆಂಡ್ ವೆಲ್ಲಿಂಗ್ಟನ್ 26 ಡಿ. 1998
136 ಪಾಕಿಸ್ತಾನ ಚೆನೈ 28 ಜ. 1999
124 ಅ. ಶ್ರೀಲಂಕಾ ಕೊಲಂಬೊ 24 ಫೆ. 1999
126 ಅ. ನ್ಯೂಜಿಲೆಂಡ್ ಮೊಹಾಲಿ 10 ಅ. 1999
217 ನ್ಯೂಜಿಲೆಂಡ್ ಅಹಮದಾಬಾದ್ 29 ಅ. 1999
116 ಆಸ್ಟ್ರೇಲಿಯಾ ಮೆಲ್ಬರ್ನ್ 26 ಡಿ. 1999
122 ಜಿಂಬಾಬ್ವೆ ದೆಹಲಿ 18 ನ. 2000
201 ಅ. ಜಿಂಬಾಬ್ವೆ ನಾಗ್ಪುರ 25 ನ. 2000
126 ಆಸ್ಟ್ರೇಲಿಯಾ ಚೆನೈ 18 ಮಾ. 2001
155 ದ. ಆಫ್ರಿಕಾ ಬ್ಲೊಯಿಫಾಂಟೇನ್ 3 ನ. 2001
103 ಇಂಗ್ಲೆಂಡ್ ಅಹಮದಾಬಾದ್ 11 ಡಿ. 2001
176 ಜಿಂಬಾಬ್ವೆ ನಾಗ್ಪುರ 21 ಫೆ. 2002
117 ವೆಸ್ಟ್ ಇಂಡೀಸ್ ಪೊರ್ಟ್ ಆಫ್ ಸ್ಪೇನ್ 19 ಏ. 2002
193 ಇಂಗ್ಲೆಂಡ್ ಲೀಡ್ಸ್ 22 ಆ 2002
176 ವೆಸ್ಟ್ ಇಂಡೀಸ್ ಕೋಲ್ಕತಾ 30 ಅ 2002
241 ಅ. ಆಸ್ಟ್ರೇಲಿಯಾ ಸಿಡಿ 2 ಜ. 2004
194 ಅ. ಪಾಕಿಸ್ತಾನ ಮುಲ್ತಾನ್ 28 ಮಾ. 2004
248 ಅ. ಬಾಂಗ್ಲಾದೇಶ ಢಾಕಾ 10 ಡಿ. 2004
109 ಶ್ರೀಲಂಕಾ ದೆಹಲಿ 10 ಡಿ. 2005
101 ಬಾಂಗ್ಲಾದೇಶ ಚಿತ್ತಗಾಂಗ್ 18 ಮೇ 2007
122 ಅ. ಬಾಂಗ್ಲಾದೇಶ ಢಾಕಾ 25 ಮೇ 2007
154 ಅಜೇಯ ಆಸ್ಟ್ರೇಲಿಯಾ ಸಿಡಿ 2 ಜ. 2008
153 ಆಸ್ಟ್ರೇಲಿಯಾ ಅಡಿಲೇಡ್ 24 ಜ. 2008
109 ಆಸ್ಟ್ರೇಲಿಯಾ ನಾಗ್ಪುರ 6 ನ. 2008
103 ಅಜೇಯ ಇಂಗ್ಲೆಂಡ್ ಚೆನೈ 11 ಡಿ. 2008
160 ನ್ಯೂಜಿಲೆಂಡ್ ಹ್ಯಾಮಿಲ್ಟನ್ 18 ಮಾ. 2009
100 ಅ. ಶ್ರೀಲಂಕಾ ಅಹಮದಾಬಾದ್ 16 ನ. 2009
105 ಅ. ಬಾಂಗ್ಲಾದೇಶ ಚಿತ್ತಗಾಂಗ್ 17 ಜ. 2010
143 ಬಾಂಗ್ಲಾದೇಶ ಢಾಕಾ 24 ಜ. 2010
100 ದ. ಆಫ್ರಿಕಾ ನಾಗ್ಪುರ 6 ಫೆ. 2010
106 ದ. ಆಫ್ರಿಕಾ ಕೋಲ್ಕತಾ 14 ಫೆ. 2010
203 ಶ್ರೀಲಂಕಾ ಕೊಲಂಬೊ 26 ಜು. 2010
214 ಆಸ್ಟ್ರೇಲಿಯಾ ಬೆಂಗಳೂರು 9 ಅ. 2010
111 ಅಜೇಯ ದ. ಆಫ್ರಿಕಾ ಸೆಂಚೂರಿಯನ್ 16 ಡಿ 2010
146 ದ. ಆಫ್ರಿಕಾ ಕೇಪ್ಟೌನ್ 2 ಜ. 2011