ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರತ್ನನ್ ಪದಗಳು...

ಭಾರತ ರತ್ನ ಪಡೆದ ಇಬ್ಬರು ಮಹಾನ್ ಸಾಧಕರು ತಮ್ಮ ಜೀವನ ಸಾಗಿ ಬಂದ ಬಗ್ಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Srinivasa Murthy VN
Updated On : 18 Nov 2013, 1:05 am

ಭಾರತ ರತ್ನ ಪಡೆದ ಇಬ್ಬರು ಮಹಾನ್ ಸಾಧಕರು ತಮ್ಮ ಜೀವನ ಸಾಗಿ ಬಂದ ಬಗ್ಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್

ತಾಯಿಗಾಗಿ
ಮಕ್ಕಳನ್ನು ಬೆಳೆಸಲು ಜೀವನ ಮುಡಿಪಾಗಿಡುವ ದೇಶದ ತಾಯಂದಿರಿಗೂ ಪ್ರಶಸ್ತಿ ಅರ್ಪಿಸುವೆ. ನನ್ನ ತಾಯಿ ಕೂಡ ಬಹಳ ತ್ಯಾಗ ಮಾಡಿದ್ದಾರೆ. ದೊಡ್ಡವರಾದ ಮೇಲೆ ಅರ್ಥವಾಗುತ್ತದೆ.

ಮಧುರ
ತಂಡ ವಿಶ್ವಕಪ್ ಗೆದ್ದದ್ದು ಮರೆಯಲಾಗದ ಕ್ಷಣ. ಅದಕ್ಕಾಗಿ 22 ವರ್ಷಗಳ ಕಾಲ ಕಾಯಬೇಕಾಯಿತು. ಅಂತಿಮ ದಿನ ಜನರು ನೀಡಿದ ಅಭಿಮಾನಕ್ಕೆ ನಾನು ಕೃತಜ್ಞ.

ಬೇಸರವಿಲ್ಲ
ಇನ್ನು ಮುಂದೆ ಕ್ರಿಕೆಟ್ ಆಡುವುದಿಲ್ಲ ಎಂಬ ಬೇಸರವಿಲ್ಲ. ಏಕೆಂದರೆ ಈ ಸುದೀರ್ಘ ಪಯಣ ನನ್ನ ಕನಸಾಗಿತ್ತು. ಹೀಗಾಗಿ ನಾನು ವಿದಾಯ ಹೇಳಿದ್ದರಿಂದ ಬೇಸರವಾಗಿಲ್ಲ.

ದೇಗುಲವಿದ್ದಂತೆ
22 ಗಜದ ಕ್ರಿಕೆಟ್ ಅಂಗಣ ನನಗೆ ದೇಗುಲವಿದ್ದಂತೆ. ನಾನು ಈಗ ಯಾವ ಸ್ಥಾನ ಅಲಂಕರಿಸಿದ್ದೇನೋ ಅದಕ್ಕೆ ಕ್ರಿಕೆಟ್ ಕಾರಣ. ಅದಕ್ಕಾಗಿ ವಾಂಖೆಡೆ ಕ್ರೀಡಾಂಗಣಕ್ಕೆ ನಮಸ್ಕರಿಸಿದೆ.

ಅಭಿನಂದನೆ
ಪ್ರೊ.ಸಿ.ಎನ್.ಆರ್.ರಾವ್‌ಗೆ ಅಭಿನಂದನೆ ಸಲ್ಲಿಸುತ್ತೇನೆ. ವಿಜ್ಞಾನ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅವರ ಜತೆಗೆ ಈ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯ.

ನನ್ನ ಆಸೆ
ಕೊನೆಯ ಪಂದ್ಯ ತಾಯಿ ವೀಕ್ಷಿಸಬೇಕು ಎಂಬುದು ನನ್ನ ಆಸೆಯಾಗಿತ್ತು. ಅದಕ್ಕಾಗಿ ಟೆಸ್ಟ್ ಅನ್ನು ಮುಂಬೈನಲ್ಲಿ ನಡೆಸಿ ಎಂದು ಬಿಸಿಸಿಐಗೆ ನಾನೇ ಮನವಿ ಮಾಡಿಕೊಂಡಿದ್ದೆ.

---
ಸಿಎನ್ ಆರ್ ರಾವ್
ಬದಲಾಗಲ್ಲ
ನನಗೆ ಭಾರತರತ್ನ ಪ್ರಶಸ್ತಿ ಹೆಮ್ಮೆ ತರಿಸಿದೆ. ಆದರೆ ಅದು ನನ್ನನ್ನು ಬದಲಿಸದು. ಈಗಲೂ ಭಾನುವಾರ ಹೊರತುಪಡಿಸಿ ಉಳಿದ ಆರೂವರೆ ದಿನ ನಾನು ಕೆಲಸದಲ್ಲಿ ಮಗ್ನನಾಗುತ್ತೇನೆ.

ಕನ್ನಡಿಗ
ಕನ್ನಡಿಗ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ಪ್ರೌಢಶಾಲೆ ಶಿಕ್ಷಣ ವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ್ದೇನೆ. ಕಾಲೇಜಿನಲ್ಲಿ ಎಲ್ಲರಿಗಿಂತ ಉತ್ತಮ ಇಂಗ್ಲಿಷ್ ಮಾತಾಡುತ್ತಿದ್ದೆ.

ನಾನ್‌ಸೆನ್ಸ್
ಐಟಿ ಎನ್ನುವುದು ಶುದ್ಧ ನಾನ್‌ಸೆನ್ಸ್. ನೀವು ಮಾಡುವ ವೃತ್ತಿ ಖುಷಿ ನೀಡದೆ ಆತ್ಮಹತ್ಯೆ ಅಥವಾ ಇತರ ಚಟುವಟಿಕೆಗಳಿಗೆ ಪ್ರೇರಣೆ ನೀಡಿದರೆ ಹೇಗೆ?

ಹೋಲಿಕೆ ಬೇಡ
ತೆಂಡೂಲ್ಕರ್ ಜತೆ ನನ್ನನ್ನು ಹೋಲಿಸುವುದು ಬೇಡ. ನನ್ನ ವೃತ್ತಿಗೆ ನಿವೃತ್ತಿ ಇಲ್ಲ. ದಯವಿಟ್ಟು ಈ ಬಗ್ಗೆ ನನ್ನಲ್ಲಿ ಯಾವುದೇ ಪ್ರಶ್ನೆಯನ್ನೂ ಕೇಳಬೇಡಿ.

ಕಷ್ಟ ಬೇಕಿಲ್ಲ
ನಮ್ಮಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಪ್ರವೃತ್ತಿ ತಗ್ಗಿದೆ. ದೇಶಕ್ಕಾಗಿ ಕೆಲಸ ಮಾಡಬೇಕು ಎಂದು ಎಷ್ಟು ಮಂದಿ ಯೋಚನೆ ಮಾಡುತ್ತಾರೆ? ದೇಶಕ್ಕಾಗಿಎಲ್ಲರ ಪಾತ್ರ ಅಗತ್ಯ

ಬದಲಾಗಬೇಕು
ನಮ್ಮ ಸರ್ಕಾರಗಳು ಮತ್ತು ಖಾಸಗಿ ಉದ್ಯಮಗಳು ಶಿಕ್ಷಣ, ವಿಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿಲ್ಲ. ವಿದೇಶಗಳಲ್ಲಿ ಈ ಕ್ಷೇತ್ರಕ್ಕೆ ಇದೆ.  ನಮ್ಮಲ್ಲಿ ಈ ಸ್ಥಿತಿ ಬದಲಾಗಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement