ಜನಸಾಗರದ ಸಂಭ್ರಮದಿ ಅಂಬಾರಿ ಸವಾರಿ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯು ಸೋಮವಾರ ಲಕ್ಷಾಂತರ ಹೃನ್ಮನಗಳನ್ನು ಸೂರೆಗೊಂಡಿತು.
ರಾಜರ ಕಾಲದ ವೈಭವ ನೆನಪಿಸುವ, ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯು ವಿಜಯದಶಮಿಯ ದಿನವಾದ ಸೋಮವಾರ ಲಕ್ಷಾಂತರ ಹೃನ್ಮನಗಳನ್ನು ಸೂರೆಗೊಂಡಿತು.
ದೇಶ- ವಿದೇಶಗಳಿಂದ ಆಗಮಿಸಿದ್ದ ಐದು ಲಕ್ಷಕ್ಕೂ ಅಧಿಕ ಮಂದಿ ಈ ವೈಭವದ ಕ್ಷಣಗಳನ್ನು ಸಾಕ್ಷೀಕರಿಸಿದರು. ನವರಾತ್ರಿಯ ವೈಭವಕ್ಕೆ ಕಳಸಪ್ರಾಯವಾದ ಜಂಬೂ ಸವಾರಿಯಲ್ಲಿ ಗಜರಾಜ ಅರ್ಜುನ ಸತತ ಎರಡನೆ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಿದ. ಸುಡು ಬಿಸಿಲನ್ನು ಲೆಕ್ಕಿಸದೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅರಮನೆ ಎದುರು ನೆರೆದಿದ್ದ ಜನರ ಸಂಭ್ರಮ ಮುಗಿಲು ಮುಟ್ಟಿತ್ತು.
403ನೇ ದಸರಾ
5 ಲಕ್ಷ ಜನರಿಂದ ದಸರಾ ಜಂಬೂಸವಾರಿ ವೀಕ್ಷಣೆ
42 ಸ್ಥಬ್ಧ ಚಿತ್ರಗಳು
70 ಕಲಾ ತಂಡಗಳು
5 ಕಿ.ಮೀ. ಮೆರವಣಿಗೆ ಸಾಗಿದ ದೂರ
6000 ಬಂದೋಬಸ್ತ್‌ಗೆ ನಿಯೋಜಿಸಲಾಗಿದ್ದ ಪೊಲೀಸರ ಸಂಖ್ಯೆ
750 ಕೆಜಿ ಅಂಬಾರಿ ಹೊತ್ತು ನಡೆದ ಅರ್ಜುನ, ಸಾಥ್ ನೀಡಿದ ಬಲರಾಮ, ಗಜೇಂದ್ರ