ವಿಎಚ್ಪಿ ಸಂಕಲ್ಪ ದಿನಕ್ಕೆ ನಿಷೇಧ
ಲಖನೌ: ವಿಶ್ವಹಿಂದೂ ಪರಿಷತ್ ಅ.18ರಂದು ಅಯೋಧ್ಯೆಯಲ್ಲಿ ಕೈಗೊಳ್ಳಲು ಉದ್ದೇಶಿಸಿದ್ದ 'ಸಂಕಲ್ಪ ದಿವಸ' ಯಾತ್ರೆಗೆ ಉತ್ತರಪ್ರದೇಶ ಸರ್ಕಾರ ನಿಷೇಧ ಹೇರಿದೆ. ಇತ್ತೀಚೆಗೆ ನಡೆದ ಮುಜಾಫರ್ನಗರ ಹಿಂಸಾಚಾರ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಸರ್ಕಾರದ ನಿರ್ಧಾರದಿಂದ ಕೆರಳಿರುವ ವಿಎಚ್ಪಿ 18ರಂದು ಕಾರ್ಯಕ್ರಮ ನಡೆಸಿಯೇ ಸಿದ್ದ ಎಂದು ಘೋಷಿಸಿದೆ. ಈ ಮಧ್ಯೆ ರಾಮಮಂದಿರ ನಿರ್ಮಾಣ ಸಂಬಂಧ ವಿವಾದಾತ್ಮಕ ಪತ್ರ ಬರೆದಿದ್ದ ಐಎಎಸ್ ಅಧಿಕಾರಿಯನ್ನು ಉತ್ತರ ಪ್ರದೇಶ ಸರ್ಕಾರ ಅಮಾನತು ಮಾಡಿದೆ. ಈ ವಿವಾದ ತೀವ್ರ ಮುಜುಗರ ಉಂಟು ಮಾಡಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿದೆ.