ಹತ್ತು ಬಾರಿ ಕದನ ವಿರಾಮ ಉಲ್ಲಂಘನೆ
ಒಂದೇ ದಿನದಲ್ಲಿ 10 ಬಾರಿ ಕದನ ವಿರಾಮ ಉಲ್ಲಂಘನೆ! ಕಾಶ್ಮೀರ ವಿವಾದ ಬಗೆಹರಿಸಲು ಅಮೆರಿಕದ ಮಧ್ಯಸ್ಥಿಕೆ ಬೇಕು ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಬೊಬ್ಬಿಟ್ಟ ಬೆನ್ನಲ್ಲೇ ಪಾಕ್ ಸೈನಿಕರು..
ಜಮ್ಮು: ಒಂದೇ ದಿನದಲ್ಲಿ 10 ಬಾರಿ ಕದನ ವಿರಾಮ ಉಲ್ಲಂಘನೆ!
ಕಾಶ್ಮೀರ ವಿವಾದ ಬಗೆಹರಿಸಲು ಅಮೆರಿಕದ ಮಧ್ಯಸ್ಥಿಕೆ ಬೇಕು ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಬೊಬ್ಬಿಟ್ಟ ಬೆನ್ನಲ್ಲೇ ಪಾಕ್ ಸೈನಿಕರು ಅಂತಾರಾಷ್ಟ್ರೀಯ ಗಡಿಯಲ್ಲಿ ಭಾನುವಾರ ಒಂದೇ ದಿನ 10 ಬಾರಿ ಕದನ ವಿರಾಮ ಉಲ್ಲಂಘಿಸಿದ್ದಾರೆ. ಭಾರತೀಯರ ಸೈನಿಕರ ಕಡೆಯಲ್ಲಿ ಯಾವುದೇ ರೀತಿ ಸಾವು ನೋವು ಸಂಭವಿಸಿಲ್ಲ.
ಭಾನುವಾರ ರಾತ್ರಿ 8.30ರಿಂದ ಪಾಕ್ ಪಡೆ ಮತ್ತು ಭಾರತೀಯ ಯೋಧರ ನಡುವೆ ಭಾರಿ ಗುಂಡಿನ ಚಕಮಕಿ ಆರಂಭವಾಯಿತು. ಜಮ್ಮುವಿನ ಆರ್‌ಎಸ್ ಪುರ ವಲಯದಲ್ಲಿ 5 ವಿವಿಧ ಪ್ರದೇಶಗಳ ಮೇಲೆ ಪಾಕ್ ಪಡೆಯು ದಾಳಿನಡೆಸಿದೆ. ಆರಂಭದಲ್ಲಿ ಬಿಎಸ್‌ಎಫ್ ಶಿಬಿರಗಳ ಮೇಲೆ ಸಣ್ಣ ಮಟ್ಟಿನ ದಾಳಿ ನಡೆಸಿದ ಪಾಕ್ ಸೈನಿಕರು ನಂತರ ಫಿರಂಗಿ, ರಾಕೆಟ್‌ಗಳ ಮೂಲಕ ದಾಳಿ ನಡೆಸಲು ಆರಂಭಿಸಿದರು. ಹೀಗಾಗಿ ಗಡಿಯಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತೀಯ ಪಡೆಯೂ ಪ್ರತಿದಾಳಿ ಆರಂಭಿಸಿದ್ದು, ಎರಡೂ ಕಡೆಯಿಂದ ಗುಂಡಿನ ಮೊರೆತ ಶುರುವಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ನಿಕೋವಾಲ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಬಿಎಸ್‌ಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಕಳೆದ 2 ತಿಂಗಳಲ್ಲಿ ಪಾಕಿಸ್ತಾನವು 150 ಬಾರಿ ಕದನ ವಿರಾಮ ಉಲ್ಲಂಘಿಸಿದೆ.