ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಮಗೆ ಹಿಂಡಾಲ್ಕೋ ಕಂಪನಿ ಕಡತ ಕೊಡಿ

ಹಿಂಡಾಲ್ಕೋ ಕಂಪನಿಗೆ ಹಂಚಿಕೆ ಮಾಡಲಾದ ಕಲ್ಲಿದ್ದಲು ಬ್ಲಾಕ್‌ಗೆ ಸಂಬಂಧಿಸಿದ ಕಡತಗಳನ್ನು ನೀಡುವಂತೆ ಸಿಬಿಐ ಪ್ರಧಾನಿ ಕಚೇರಿಗೆ...

Srinivasa Murthy VN
Updated On : 23 Oct 2013, 11:57 am

ನವದೆಹಲಿ: ಹಿಂಡಾಲ್ಕೋ ಕಂಪನಿಗೆ ಹಂಚಿಕೆ ಮಾಡಲಾದ ಕಲ್ಲಿದ್ದಲು ಬ್ಲಾಕ್‌ಗೆ ಸಂಬಂಧಿಸಿದ  ಕಡತಗಳನ್ನು ನೀಡುವಂತೆ ಸಿಬಿಐ ಪ್ರಧಾನಿ ಕಚೇರಿಗೆ ಪತ್ರ ಬರೆದಿದೆ.
ಉದ್ಯಮಿ ಕುಮಾರಮಂಗಲಂ ಬಿರ್ಲಾ ಮತ್ತು ನಿವೃತ್ತ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ. ಪಾರಖ್ ವಿರುದ್ಧ ದಾಖಲಿಸಿದ ಎಫ್‌ಐಆರ್ ಸೇರಿದಂತೆ ಹಗರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ಗೆ ಸ್ಥಿತಿಗತಿ ವರದಿ ಸಲ್ಲಿಸಿದ ಬೆನ್ನಲ್ಲೇ ಸಿಬಿಐ ಈ ಪತ್ರ ಬರೆದಿದೆ.
ಹಿಂಡಾಲ್ಕೋಗೆ ಹಂಚಿಕೆ ಮಾಡಲಾದ 2 ಬ್ಲಾಕ್‌ಗಳಿಗೆ ಸಂಬಂಧಿಸಿದ ಕಡತಗಳು ಕೈಸೇರಲಿ. ಅವುಗಳನ್ನು ಪರಿಶೀಲಿಸಿದ ಬಳಿಕ ಯಾರನ್ನು ಪ್ರಶ್ನಿಸಬೇಕು ಎನ್ನುವ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆ. ಎಫ್‌ಐಆರ್‌ನಲ್ಲಿ ದಾಖಲಾಗಿರುವ ಎಲ್ಲ ಅಂಶಗಳ ಬಗ್ಗೆ ತನಿಖೆ ನಡೆಸುವುದಾಗಿ ಸಿಬಿಐ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.  ಪತ್ರಕ್ಕೆ ಪ್ರತಿಕ್ರಿಯಿಸಿರುವ  ಸಚಿವ ವಿ. ನಾರಾಯಣಸ್ವಾಮಿ, ಈ ವಿಚಾರದಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಹಲವು ದಾಖಲೆಗಳನ್ನು ಸಿಬಿಐ ಕೈಗೆ ನೀಡಿದ್ದೇವೆ ಎಂದಿದ್ದಾರೆ.

29ಕ್ಕೆ ವಿಚಾರಣೆ?
ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಸ್ಥಿತಿಗತಿ ವರದಿಯಲ್ಲಿ ಮೂರು ವಿಚಾರಗಳ ಕುರಿತು ಸಿಬಿಐ ಪ್ರಸ್ತಾಪಿಸಿದೆ. ಪ್ರಕರಣದ ತನಿಖೆಗಳು, ಕಲ್ಲಿದ್ದಲು ಮತ್ತು ಉಕ್ಕು ಸಚಿವಾಲಯದಿಂದ ನಾಪತ್ತೆಯಾದ ಕಡತಗಳು ಹಾಗೂ ಬಿರ್ಲಾ ಮತ್ತು ಪಾರಖ್ ವಿರುದ್ಧ ದಾಖಲಾದ ಎಫ್‌ಐಆರ್‌ಗಳ ಕುರಿತು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಮಾಹಿತಿ ಇದೆ. ಈ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯ ಅ.29ಕ್ಕೆ ವಿಚಾರಣೆ ನಡೆಸುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement