ಸಿಬಿಐ ತನಿಖೆ ಎದುರಿಸುವೆ..
'ನಾನೇನು ಕಾನೂನಿಗಿಂತ ಅತೀತನಲ್ಲ, ಬಚ್ಚಿಟ್ಟುಕೊಳ್ಳುವುದು ಏನೂ ಇಲ್ಲ, ಕಲ್ಲಿದ್ದಲು ಹಗರಣ ಸಂಬಂಧ ಬೇಕಾದರೆ ಸಿಬಿಐ ಮುಂದೆ...
'ನಾನೇನು ಕಾನೂನಿಗಿಂತ ಅತೀತನಲ್ಲ, ಬಚ್ಚಿಟ್ಟುಕೊಳ್ಳುವುದು ಏನೂ ಇಲ್ಲ, ಕಲ್ಲಿದ್ದಲು ಹಗರಣ ಸಂಬಂಧ ಬೇಕಾದರೆ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ...'
ಇದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿಕೆ. ಚೀನಾದಿಂದ ವಾಪಸಾಗುವ ವೇಳೆ ಮಾತನಾಡಿದ ಅವರು, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ನನ್ನಿಂದ ಯಾವುದೇ ಮಾಹಿತಿ ಪಡೆಯುವ ಇಚ್ಛೆ ಸಿಬಿಐಗೆ ಅಥವಾ ಇನ್ನಾರಿಗೋ ಇದ್ದರೆ ಸಂಪರ್ಕಿಸಬಹುದು ಎಂದಿದ್ದಾರೆ.
ಉದ್ಯಮಿ ಕುಮಾರ ಮಂಗಲಂ ಬಿರ್ಲಾ ಮತ್ತು ಕಲ್ಲಿದ್ದಲು ಇಲಾಖೆಯ ನಿವೃತ್ತ ಕಾರ್ಯದರ್ಶಿ ಪಿ.ಸಿ. ಪಾರಖ್ ವಿರುದ್ಧ ಎಫ್‌ಐಆರ್ ದಾಖಲಿಸಿದ ತರುವಾಯ, ಪ್ರಧಾನಿ ಬಗ್ಗೆಯೂ ಸಿಬಿಐ ತನಿಖೆ ನಡೆಸಬೇಕು ಎಂದು ವಿಪಕ್ಷಗಳು ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಪ್ರಧಾನಿಯವರನ್ನೇ ಪ್ರಶ್ನಿಸುವ ಅಧಿಕಾರ ಸಿಬಿಐಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಗ್ ಇದನ್ನು ಕೋರ್ಟ್ ನೋಡಿಕೊಳ್ಳುತ್ತದೆ ಎಂದರು.