ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

313 ಜಿ ಕೆಟಗರಿ ನಿವೇಶನ ವಾಪಸ್‌ಗೆ ಸಮಿತಿ ಶಿಫಾರಸು

ಕಾನೂನು ಬಾಹಿರವಾಗಿ ನೀಡಿರುವ ಜಿ ಕೆಟಗರಿ ನಿವೇಶನಗಳನ್ನು ವಾಪಸ್ ಪಡೆಯುವಂತೆ ನ್ಯಾಯಮೂರ್ತಿ ಪದ್ಮರಾಜ್ ನೇತೃತ್ವದ...

Srinivasa Murthy VN
Updated On : 27 Oct 2013, 2:43 am

ಬೆಂಗಳೂರು: ಕಾನೂನು ಬಾಹಿರವಾಗಿ ನೀಡಿರುವ ಜಿ ಕೆಟಗರಿ ನಿವೇಶನಗಳನ್ನು ವಾಪಸ್ ಪಡೆಯುವಂತೆ ನ್ಯಾಯಮೂರ್ತಿ ಪದ್ಮರಾಜ್ ನೇತೃತ್ವದ ತನಿಖಾ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ನ್ಯಾ. ಪದ್ಮರಾಜ್, ನ್ಯಾ. ರಂಗವಿಠಲಾಚಾರ್ ಹಾಗೂ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಪಿ.ಬಿ. ಮಹಿಷಿ ಅವರನ್ನು ಒಳಗೊಂಡ ತನಿಖಾ ಆಯೋಗ ಅಗಸ್ಟ್ 29ರಂದು ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು. ತನಿಖೆ ಸಂದರ್ಭದಲ್ಲಿ 313 ನಿವೇಶನಗಳನ್ನು ಕಾನೂನು ಬಾಹಿರವಾಗಿ, ಬಿಡಿಎ ನಿಯಮಗಳಿಗೆ ವಿರುದ್ಧವಾಗಿ ಹಂಚಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ನಿವೇಶನಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆಯುವಂತೆ ಶಿಫಾರಸು ಮಾಡಿದೆ. ಅಷ್ಟು ಮಾತ್ರವಲ್ಲ ಈ ರೀತಿ ಹಂಚಿಕೆಯಾದ ನಿವೇಶನದಲ್ಲಿ ಯಾರಾದರೂ ಕಟ್ಟಡ ನಿರ್ಮಿಸಿಕೊಂಡಿದ್ದರೆ ಈಗಿನ ಮಾರುಕಟ್ಟೆ ದರದ ಎರಡರಷ್ಟು ಹಣ ವಸೂಲು ಮಾಡುವಂತೆ ಸೂಚಿಸಿದೆ.
ಜಿ ಕೆಟಗರಿ ನಿವೇಶನಗಳನ್ನು ಕಾನೂನು ಬಾಹಿರವಾಗಿ ಹಂಚಲಾಗಿದೆ ಎಂದು ಹೈಕೋರ್ಟ್‌ನಲ್ಲಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧಾರದ ಮೇಲೆ ಸರ್ಕಾರ ತನಿಖಾ ಆಯೋಗವನ್ನು ರಚಿಸಿತ್ತು.  ಶಾಸಕರು, ಸಂಸದರು, ಮಾಜಿ ಶಾಸಕರು, ರಾಜಕಾರಣಿಗಳ ಹಿಂಬಾಲಕರು, ಮುಖ್ಯಮಂತ್ರಿ ಸಚಿವಾಲಯದಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಕಾರು ಚಾಲಕರು, ಕಂಪ್ಯೂಟರ್ ಆಪರೇಟರ್‌ಗಳು, ದ್ವಿತೀಯ ದರ್ಜೆ ಗುಮಾಸ್ತರು, ಗೃಹಿಣಿ, ಸಮಾಜ ಸೇವಕಿ, ಕೃಷಿಕ, ಗಾಯಕ, ಕಾನ್‌ಸ್ಟೇಬಲ್, ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರು ಸೇರಿದಂತೆ 313 ಜನರಿಗೆ ನಿವೇಶನ ಹಂಚಿಕೆ ಮಾಡಿರುವುದು ಕಾನೂನು ಬಾಹಿರವಾಗಿದೆ ಎಂದು ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ. ಈ ರೀತಿ ಅಕ್ರಮ ನಿವೇಶನ ಪಡೆದವರಲ್ಲಿ ಇಂದಿನ ಆಡಳಿತ ಪಕ್ಷದ ಸದಸ್ಯರು, ಹಿಂದಿನ ಸರ್ಕಾರಗಳ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement