ಶೂಟೌಟ್ಗೆ ಹನ್ನೆರಡು ಬಲಿ
ಅಮೆರಿಕ ಮತ್ತೆ ಭಯೋತ್ಪಾದನಾ ದಾಳಿಗೆ ಬೆದರಿದ್ದು, ಅಪರಿಚಿತ ಬಂದೂಕುಧಾರಿಗಳ ದಾಳಿಯಿಂದಾಗಿ 12 ಮಂದಿ ಸಾವನ್ನಪ್ಪಿ, 15 ಮಂದಿ ಗಾಯಗೊಂಡಿದ್ದಾರೆ.
ವಾಷಿಂಗ್ಟನ್: ಅಮೆರಿಕ ಮತ್ತೆ ಭಯೋತ್ಪಾದನಾ ದಾಳಿಗೆ ಬೆದರಿದೆ. ವಾಷಿಂಗ್ಟನ್ ಡಿ.ಸಿ.ಯ ಬಿಗಿ ಭದ್ರತೆಯ ನೌಕಾ ನೆಲೆಗೆ ಅಪರಿಚಿತ ಬಂದೂಕುಧಾರಿಗಳು ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿ, 15 ಮಂದಿ ಗಾಯಗೊಂಡಿದ್ದಾರೆ. ಅಸುನೀಗಿದವರ ಪೈಕಿ ಇಬ್ಬರು ಅಧಿಕಾರಿಗಳೂ ಸೇರಿದ್ದಾರೆ.
ಅಲ್ಲದೆ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ನೌಕಾಪಡೆಯ ಮೂಲಗಳು ಹೇಳಿವೆ.
ತಕ್ಷಣ ಕಾರ್ಯಾಚರಣೆ ನಡೆಸಿದ ನೌಕಾಪಡೆ ಪೊಲೀಸ್ ಅಧಿಕಾರಿಗಳು ಶೂಟರ್ಗಳ ಪೈಕಿ ಒಬ್ಬನನ್ನು ಗುಂಡಿಟ್ಟು ಸಾಯಿಸಿದ್ದಾರೆ. ಆದರೆ ಇಬ್ಬರು ಪರಾರಿಯಾಗಿರಬಹುದೆಂದು ಎಂದು ವಾಷಿಂಗ್ಟನ್ ಡಿ.ಸಿ.ಯ ಪೊಲೀಸರು ತಿಳಿಸಿದ್ದಾರೆ.
ಮಿಲಿಟರಿ ಸಮವಸ್ತ್ರದಲ್ಲಿದ್ದ ಮೂವರು ನೌಕಾ ನೆಲೆಯೊಳಕ್ಕೆ ನುಸುಳಿ ಈ ಕೃತ್ಯವೆಸಗಿದ್ದಾರೆ ಎಂದು ಅವರು ಹೇಳಿದ್ದಾರೆ.