ಕರ್ನಾಟಕದ 14 ಮಂದಿ ನಾಪತ್ತೆ
ಡೆಹ್ರಾಡೂನ್: ಉತ್ತರಾಖಂಡವನ್ನು ನಡುಗಿಸಿದ ದಿಢೀರ್ ಪ್ರವಾಹ ಹಾಗೂ ಭೂಕುಸಿತದಿಂದಾಗಿ ನಾಪತ್ತೆಯಾದವರ ಅಂತಿಮ ಅಧಿಕೃತ ಪಟ್ಟಿಯನ್ನು ಉತ್ತರಾಖಂಡ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ. ಅದರಂತೆ, ಉತ್ತರಾಖಂಡ ದುರಂತದ ಬಳಿಕ ಕಾಣೆಯಾದವರ ಸಂಖ್ಯೆ ಬರೋಬ್ಬರಿ 4,120. ನಾಪತ್ತೆಯಾದವರಲ್ಲಿ ಕರ್ನಾಟಕದ 14 ಮಂದಿಯೂ ಸೇರಿದ್ದಾರೆ. ಕಾಣೆಯಾದವರಲ್ಲಿ ಅತಿ ಹೆಚ್ಚು ಅಂದರೆ 1,150 ಮಂದಿ ಉತ್ತರ ಪ್ರದೇಶದವರು. ಬಳಿಕ ಉತ್ತರಾಖಂಡ(852), ಮಧ್ಯಪ್ರದೇಶ (542), ರಾಜಸ್ಥಾನ (511) ಸೇರಿ ಉಳಿದ ರಾಜ್ಯದವರಿದ್ದಾರೆ.