ಕೋಲಾರ ಚಿನ್ನದ ಗಣಿ ಮಾರಾಟಕ್ಕೆ ಟೆಂಡರ್
ಕೋಲಾರದ ಚಿನ್ನದ ಗಣಿಯ ಆಸ್ತಿ ಮಾರಾಟ ಪ್ರಕ್ರಿಯೆಗೆ ಸಲಹೆ ನೀಡಲು ಸಲಹಾ ಸಂಸ್ಥೆಗಳಿಂದ (ಕನ್ಸಲ್ಟೆನ್ಸಿ ಫರ್ಮ್) ಕೇಂದ್ರ ಸರ್ಕಾರ ಬಿಡ್ಗಳನ್ನು ಆಹ್ವಾನಿಸಿದೆ.
ನವದೆಹಲಿ: ಕೋಲಾರದ ಚಿನ್ನದ ಗಣಿಯ ಆಸ್ತಿ ಮಾರಾಟ ಪ್ರಕ್ರಿಯೆಗೆ ಸಲಹೆ ನೀಡಲು ಸಲಹಾ ಸಂಸ್ಥೆಗಳಿಂದ (ಕನ್ಸಲ್ಟೆನ್ಸಿ ಫರ್ಮ್) ಕೇಂದ್ರ ಸರ್ಕಾರ ಬಿಡ್ಗಳನ್ನು ಆಹ್ವಾನಿಸಿದೆ. ಇದಕ್ಕಾಗಿ ಸೇವಾದಾರರಾಗಲು ಸಲಹಾ ಸಂಸ್ಥೆಗಳಿಂದ ಬಿಡ್ಗಳನ್ನು ಆಹ್ವಾನಿಸಿದೆ. ಗಣಿ ಸಚಿವಾಲಯ ಈ ಬಗ್ಗೆ ಗುರುವಾರ ಪ್ರಕಟಣೆಯನ್ನು ಹೊರಡಿಸಿದೆ.
ಟೆಂಡರ್ ಮೂಲಕ ಕೆ.ಜಿ.ಎಫ್ನಲ್ಲಿರುವ ಭಾರತ್ ಗೋಲ್ಡ್ ಮೈನ್ಸ್ (ಬಿಜಿಎಂಎಲ್) ತನ್ನ ವಶದಲ್ಲಿರುವ ಭೂಮಿ, ಚಿನ್ನದ ಅದಿರು, ಯಂತ್ರೋಪಕರಣಗಳನ್ನು ಮಾರಲು ಮುಂದಾಗಿದೆ. 2008ರಲ್ಲಿ ಗಣಿಗೆ ಸಂಬಂಧಿಸಿದ ದಾಖಲೆಗಳನ್ನು ಮತ್ತೆ ಸಿದ್ಧಪಡಿಸುವುದು, ಗಣಿಯಲ್ಲಿರುವ ಆಸ್ತಿಯ ಬಗ್ಗೆ ಮೌಲ್ಯ ನಿರ್ಧರಿಸುವ ಸಭೆಯನ್ನು ಈ ಸಂಸ್ಥೆಗಳು ಆಯೋಜಿಸಬೇಕು. ಜತೆಗೆ ಬಿಡ್ಡರ್ಗಳ ಆಯ್ಕೆಯಲ್ಲಿಯೂ ಸಹಕರಿಸಬೇಕು ಎಂದು ಗಣಿ ಸಚಿವಾಲಯ ಸೂಚನೆ ನೀಡಿದೆ.