ಉಗ್ರ ಉಸ್ಮಾನಿ ಎಸ್ಕೇಪ್
2008ರ ಅಹಮದಾಬಾದ್ ಮತ್ತು ಸೂರತ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ಇಂಡಿಯನ್ ಮುಜಾಹಿದೀನ್ ಉಗ್ರ ಅಫ್ಜಲ್ ಉಸ್ಮಾನಿ ಶುಕ್ರವಾರ ಎಸ್ಕೇಪ್ ಆಗಿದ್ದಾನೆ.
ಮುಂಬೈ: 2008ರ ಅಹಮದಾಬಾದ್ ಮತ್ತು ಸೂರತ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ಇಂಡಿಯನ್ ಮುಜಾಹಿದೀನ್ ಉಗ್ರ ಅಫ್ಜಲ್ ಉಸ್ಮಾನಿ ಶುಕ್ರವಾರ ಎಸ್ಕೇಪ್ ಆಗಿದ್ದಾನೆ. ಪೊಲೀಸ್ ವಶದಲ್ಲಿದ್ದ ಉಸ್ಮಾನಿಯನ್ನು ಪೊಲೀಸರ ತಂಡವೊಂದು ಮುಂಬೈನ ಮಕೋಕಾ ಕೋರ್ಟ್ಗೆ ಹಾಜರುಪಡಿಸಲು ಕರೆತಂದಿದ್ದ ವೇಳೆ ಆತ ಪರಾರಿಯಾಗಿದ್ದಾನೆ. ಈತನ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ.
ಪೊಲೀಸರಿಗೆ ಚಳ್ಳೆಹಣ್ಣು: ಉಸ್ಮಾನಿ ಸೇರಿದಂತೆ 19 ಮಂದಿ ಆರೋಪಿಗಳನ್ನು ನವಿ ಮುಂಬೈನ ತಲೋಜಾ ಸೆಂಟ್ರಲ್ ಜೈಲಿನಿಂದ ಕೋರ್ಟ್ಗೆ ಕರೆತರಲಾಗಿತ್ತು. ಈ ವೇಳೆ, ಟಾಯ್ಲೆಟ್ಗೆ ಹೋಗಬೇಕೆಂದು ಹೇಳಿದ ಉಗ್ರ ಪೊಲೀಸರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಿದ್ದಾನೆ.
ಅಲ್ಖೈದಾ ಜತೆ ಕೈಜೋಡಿಸಲು ಸಜ್ಜಾಗಿತ್ತು ಐಎಂ
ನವದೆಹಲಿ: ಭಾರತದಲ್ಲಿ 'ಜಂಟಿ ಕಾರ್ಯಾಚರಣೆ' ನಡೆಸಲು ಇಂಡಿಯನ್ ಮುಜಾಹಿದೀನ್ ಪಾಕಿಸ್ತಾನದ ಉಗ್ರ ಸಂಘಟನೆ ಅಲ್ಖೈದಾ ಜತೆಗೆ ಕೈಜೋಡಿಸಲು ಯೋಜಿಸಿತ್ತು. ಹೀಗೆಂದು ಐಎಂ ಉಗ್ರ ಯಾಸೀನ್ ಭಟ್ಕಳ್ ವಿಚಾರಣೆ ವೇಳೆ ಬಾಯಿಬಿಟ್ಟಿರುವುದಾಗಿ ಮೂಲಗಳು ತಿಳಿಸಿವೆ. ಅಲ್ಖೈದಾ ಜತೆ ಸೇರಿಕೊಂಡು ಭಾರತದಲ್ಲಿ ಜಂಟಿ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿತ್ತು. ಅದರಂತೆ, ಅಲ್ಖೈದಾದ ಪ್ರಮುಖ ನಾಯಕನೊಬ್ಬನನ್ನು ಭೇಟಿ ಮಾಡಲಾಗಿತ್ತು.