ಮರು ಸಂದರ್ಶನ
ಕೆಪಿಎಸ್ಸಿ ನಡೆಸಿದ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಸಿಐಡಿ ಸಲ್ಲಿಸಿರುವ ವರದಿ ಒಪ್ಪಿಕೊಂಡಿರುವ ಸರ್ಕಾರ,...
ಕನ್ನಡಪ್ರಭ ವಾರ್ತೆ, ಬೆಂಗಳೂರು, ಸೆ.19-
ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ 2011ರಲ್ಲಿ ನಡೆಸಿದ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಸಿಐಡಿ ಸಲ್ಲಿಸಿರುವ ವರದಿ ಒಪ್ಪಿಕೊಂಡಿರುವ ಸರ್ಕಾರ, ಮರು ಮೌಲ್ಯಮಾಪನ ಹಾಗೂ ಮರು ಸಂದರ್ಶನ ನಡೆಸಲು ನಿರ್ಧರಿಸಿದೆ.
ಸಚಿವ ಸಂಪುಟಸಭೆಯಲ್ಲಿ ಶುಕ್ರವಾರ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, 376 ಹುದ್ದೆಗೆ ಕೆಪಿಎಸ್ಸಿ ನಡೆಸಿದ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ನಡೆದ ಸಿಐಡಿ ತನಿಖೆಯಲ್ಲಿ ಹೆಚ್ಚಿನ ಆರೋಪಗಳು ಸಾಬೀತಾಗಿವೆ.
ಹೀಗಾಗಿ 2011ನೇ ಸಾಲಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ ಎಲ್ಲರಿಗೂ ಮರುಮೌಲ್ಯಮಾಪನ ಮತ್ತು ಮರು ಸಂದರ್ಶನ ವ್ಯವಸ್ಥೆ ಕಲ್ಪಿಸಲಾಗುವುದು. ಜತೆಗೆ ಯುಪಿಎಸ್ಸಿ ಮಾದರಿಯಲ್ಲಿ ಕೆಪಿಎಸ್ಸಿಯಲ್ಲಿ ಸುಧಾರಣೆ ತರಲಾಗುವುದು ಎಂದು ಹೇಳಿದರು.
ಪ್ರಮುಖ ನಿರ್ಧಾರಗಳು
- ಭೂಮಾಪನ ಇಲಾಖೆ ವೃಂದ, ನೇಮಕ ತಿದ್ದುಪಡಿ
- ಅನ್ನಭಾಗ್ಯ ಯೋಜನೆಗೆ ಅಕ್ಕಿ ಖರೀದಿ, ಅಗತ್ಯ ಬಿದ್ದರೆ 5 ಲಕ್ಷ ಮೆಟ್ರಿಕ್ ಟನ್ವರೆಗೆ ಲೆವಿ ಸಂಗ್ರಹಣೆ, ಹೆಚ್ಚುವರಿ ಬೆಲೆಯನ್ನು ಗಿರಣಿ ಮಾಲೀಕರಿಂದ ಭರಿಸಲು ಒಪ್ಪಿಗೆ.
- ಅನ್ನಭಾಗ್ಯ ಯೋಜನೆಗೆ ಅಗತ್ಯವಾದ ರಾಗಿ ಹಾಗೂ ಜೋಳವನ್ನು ರು. 1500 ಬೆಂಬಲ ಬೆಲೆಯಲ್ಲಿ ರೈತರಿಂದ ನೇರ ಖರೀದಿಗೆ ಒಪ್ಪಿಗೆ.
- 2013-14ನೇ ಸಾಲಿನಲ್ಲಿ 1,000 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ
- ಸಾರ್ವಜನಿಕ ವಿತರಣೆಗೆ ಅಗತ್ಯವಾದ ಸಕ್ಕರೆ ಮುಕ್ತ ಮಾರುಕಟ್ಟೆಯಿಂದ ಟೆಂಡರ್ ಮೂಲಕ ಖರೀದಿ
- ಹಿಂದುಳಿದ ವರ್ಗದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿನ 20 ಸಾವಿರ ವಿದ್ಯಾರ್ಥಿಗಳಿಗೆ 10 ತಿಂಗಳವರೆಗೆ ಮಾಸಿಕ 1, 500 ಸಹಾಯಧನ, ಹಣ ಬ್ಯಾಂಕ್ ಖಾತೆಗೆ
- ಗ್ರಾಮೀಣ ಕೃಪಾಂಕ ನೌಕರರಿಗೆ ಹೆಚ್ಚುವರಿ 2 ಭತ್ಯೆ
- ಮಂಗಳೂರು ಕಾರಾಗೃಹದಿಂದ ಐವರು ಕೈದಿಗಳ ಪರಾರಿ ಪ್ರಕರಣ ಮುಖ್ಯ ವಾರ್ಡರ್ ಜನಾರ್ದನ್ ವಿರುದ್ಧ ಕ್ರಮ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.