ಲಂಡನ್ನಲ್ಲಿ ಬಾಬಾ ರಾಮ್ದೇವ್ ವಿಚಾರಣೆ
ಲಂಡನ್: ಯೋಗಗುರು ಬಾಬಾ ರಾಮದೇವ್ ಅವರನ್ನು ಲಂಡನ್ನ ಹೆಥ್ರೂ ವಿಮಾನ ನಿಲ್ದಾಣದಲ್ಲಿ ಬ್ರಿಟನ್ನ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ರಾತ್ರಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಬ್ಯುಸಿನೆಸ್ ವೀಸಾದ ಬದಲು ವಿಸಿಟರ್ಸ್ ವೀಸಾದ ಮೂಲಕ ಬ್ರಿಟನ್ಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು, 6 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ರಾಮದೇವ್ ತಮ್ಮ ಜತೆ ಕೊಂಡೊಯ್ಯುತ್ತಿರುವ ಔಷಧದ ಕುರಿತಾಗಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ, ರಾಮದೇವ್ ಅವರ ವಕ್ತಾರ ತೇಜರ್ವಾಲಾ ಈ ವರದಿಗಳನ್ನು ಅಲ್ಲಗಳೆದಿದ್ದಾರೆ.