ಲಲಿತ್ ಮೋದಿಗೆ ಆಜೀವ ನಿಷೇಧ
ಚೆನ್ನೈ: ಕಳೆದ ಮೂರು ವರ್ಷಗಳಿಂದ ಭಾರತೀಯ ಕ್ರಿಕೆಟ್ನ ಕಳಂಕವಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಮಾಜಿ ಮುಖ್ಯಸ್ಥ ಲಲಿತ್ ಮೇಲೆ ಬಿಸಿಸಿಐ ಬುಧವಾರ ಆಜೀವ ನಿಷೇಧ ಹೇರಿದೆ. 'ಅಶಿಸ್ತು ಮತ್ತು ಅವ್ಯವಹಾರ'ದ ಹಿನ್ನೆಲೆಯಲ್ಲಿ ಮೋದಿ ವಿರುದ್ಧ ಬಿಸಿಸಿಐ ಶಿಸ್ತು ಸಮಿತಿ 8 ಆರೋಪಗಳನ್ನು ಮಾಡಿದ ಹಿನ್ನೆಲೆಯಲ್ಲಿ ನಿಷೇಧದಂತ ತೀರ್ಮಾನವನ್ನು ಅದು ತೆಗೆದುಕೊಂಡಿದೆ. ಬಿಸಿಸಿಐ ವಿಶೇಷ ಸಾಮಾನ್ಯ ಸಭೆ ನಡೆಸಬೇಕೆ ಅಥವಾ ಬೇಡವೆ ಎಂಬ ಬಗ್ಗೆ ಮೋದಿ ಮತ್ತು ಬಿಸಿಸಿಐ ನಡುವೆ ಕಾನೂನು ಹೋರಾಟದ ನಂತರ, ನಡೆದ ಸಭೆಯಲ್ಲಿ 49 ವರ್ಷದ ಮೋದಿ ಮೇಲೆ ನಿಷೇಧ ಹೇರಲು ತೀರ್ಮಾನ ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ಶಿಸ್ತು ಸಮಿತಿಯ ವರದಿ ಕುರಿತು ಚರ್ಚೆ ನಡೆಸಿದ ಬಿಸಿಸಿಐ, ಮೋದಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.