ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಜಾರ್ಜ್ ಜತೆ ಕುಳಿತು ಕಾಂಗ್ರೆಸ್ ಪರ ಪ್ರಚಾರ ಮಾಡಿದ ಬ್ರಿಗೇಡ್ ಅಜಂ

ಜಾರ್ಜ್ ಜತೆ ಕುಳಿತು ಕಾಂಗ್ರೆಸ್ ಪರ ಪ್ರಚಾರ ಮಾಡಿದ ಬ್ರಿಗೇಡ್ ಅಜಂ

Srinivasa Murthy VN
Updated On : 9 Apr 2014, 12:46 pm
ಬೆಂಗಳೂರು: ಗೃಹ ಸಚಿವ ಕೆ.ಜೆ. ಜಾರ್ಜ್ ಅವರೊಂದಿಗೆ ರೌಡಿ ಶೀಟರ್ ಬ್ರಿಗೇಡ್ ಅಜಂ ವಾಹನ ಹಂಚಿಕೊಂಡಿದ್ದಾರೆ! ಅಷ್ಟೇ ಅಲ್ಲ, ಅವರ ಪಕ್ಕದಲ್ಲೇ ನಿಂತು, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ. ಚುನಾವಣೆ ಪ್ರಚಾರದಲ್ಲಿ ರೌಡಿ ಶೀಟರ್‌ರನ್ನು ಕಾಂಗ್ರೆಸ್ ಬಳಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಭಾನುವಾರ ರಾತ್ರಿ ತೆರೆದ ವಾಹನದಲ್ಲಿ ಪ್ರಚಾರ ಕೈಗೊಳ್ಳಲಾಗಿತ್ತು. ಈ ರ್ಯಾಲಿ ಸಂದರ್ಭದಲ್ಲಿ ರಿಜ್ವಾನ್ ಅರ್ಷದ್ ಜತೆ ಗೃಹ ಸಚಿವ ಕೆ.ಜೆ.  ಜಾರ್ಜ್ ಹಾಗೂ ವಾರ್ತಾ ಸಚಿವ ರೋಷನ್ ಬೇಗ್ ವಾಹನದಲ್ಲಿ ಪ್ರಚಾರ ಮಾಡಿದರು. ಇವರ ಜತೆಯಲ್ಲೇ ರೌಡಿ ಶೀಟರ್ ಬ್ರಿಗೇಡ್ ಅಜಂ ಕೂಡ ಇದ್ದರು.
ಬ್ರಿಗೇಡ್ ಅಜಂ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ ನಗರದ ನಾನಾ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 1999ರಿಂದಲೇ ರೌಡಿ ಪಟ್ಟಿಯಲ್ಲಿದ್ದಾರೆ. ಬ್ರಿಗೇಡ್ ಅಜಂ ಯಾರು ಎಂಬುದೇ ಗೊತ್ತಿಲ್ಲ. ಪ್ರಚಾರಕ್ಕೆ ಹೋದಾಗ ಸಾಕಷ್ಟು ಜನರಿರುತ್ತಾರೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಹಾಗೂ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹೇಳಿದ್ದಾರೆ. 

Advertisement

Advertisement

ಆದರೆ, ಗೃಹ ಸಚಿವರು ತಮ್ಮ ಪಕ್ಕದಲ್ಲೇ ಇರುವ ರೌಡಿ ಶೀಟರ್ ಗೊತ್ತಿಲ್ಲ ಎಂದಿರುವುದು ವಿಪರ್ಯಾಸ. ಅಷ್ಟೇ ಅಲ್ಲ, ಗೃಹ ಸಚಿವರ ಹಿಂದೆ ಸಾಕಷ್ಟು ಪೊಲೀಸ್ ಅಧಿಕಾರಿಗಳಿರುತ್ತಾರೆ. ಅವರಿಗೂ ಈತ ರೌಡಿ ಶೀಟರ್ ಎಂದು ಗೊತ್ತಾಗಲಿಲ್ಲವೇ? ಅಥವಾ ತೇಲಿಸುವ ಮಾತನಾಡುತ್ತಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
 ಮೊಕದ್ದಮೆಗಳು
1996ಕೊಲೆ, ಪ್ರಾಣ ಬೆದರಿಕೆ
2003ಅಪಹರಣ ಪ್ರಕರಣ
2004-05 ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪ
2006 ಭಾರತಿನಗರದಲ್ಲಿ ಕೊಲೆ ಯತ್ನ
2008-09 ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪ
2009 ಬಳ್ಳಾರಿಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಪ್ರಕರಣ
2013ಶಿವಾಜಿನಗರದ ಬ್ರೈಟ್ ಜ್ಯುವೆಲರ್ಸ್‌ಗೆ ದಾಳಿ
ಪ್ರಚಾರದ ವೇಳೆ ಯಾರು ಇರುತ್ತಾರೆ, ಅವರಲ್ಲಿ ರೌಡಿ ಶೀಟರ್ ಯಾರು ಎಂಬುದು ಗೊತ್ತಿರುವುದಿಲ್ಲ. ಅವರು ರೌಡಿ ಶೀಟರ್ ಆಗಿದ್ದರೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಈಗಲೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡುತ್ತೇನೆ.
-ಕೆ.ಜೆ. ಜಾರ್ಜ್, ಗೃಹ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement