ಬಾಬಾ, ಶ್ರೀಶ್ರೀಮೇಲೆ ಕಣ್ಣಿಡಿ
ಆರೆಸ್ಸೆಸ್, ಬಾಬಾ ರಾಮ್ದೇವ್ ಹಾಗೂ ರವಿಶಂಕರ್ ಗುರೂಜಿ ಅವರ ಚಲನವಲನಗಳು, ಚಟುವಟಿಕೆಗಳ ಮೇಲೆ ಕಣ್ಣಿಡಿ. ಹೀಗೆಂದು..
ನವದೆಹಲಿ: ಆರೆಸ್ಸೆಸ್, ಬಾಬಾ ರಾಮ್ದೇವ್ ಹಾಗೂ ರವಿಶಂಕರ್ ಗುರೂಜಿ ಅವರ ಚಲನವಲನಗಳು, ಚಟುವಟಿಕೆಗಳ ಮೇಲೆ ಕಣ್ಣಿಡಿ. ಹೀಗೆಂದು ಆಗ್ರಹಿಸಿ ಕಾಂಗ್ರೆಸ್ ಮಂಗಳವಾರ ಚುನಾವಣಾ ಆಯೋಗದ ಮೊರೆಹೋಗಿದೆ. ಈ ವ್ಯಕ್ತಿಗಳು, ಸಂಘಟನೆಗಳು ರಾಜಕೀಯ ಪಕ್ಷಗಳಾಗಿ ನೋಂದಣಿ ಆಗಿರದಿದ್ದರೂ ರಾಜಕೀಯ ಚಟುವಟಿಕೆ ನಡೆಸುತ್ತಿದ್ದಾರೆ.
ಹಾಗಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ರಾಮ್ದೇವ್, ರವಿಶಂಕರ್ರಂತಹ ವ್ಯಕ್ತಿಗಳು, ಆರೆಸ್ಸೆಸ್ನಂತಹ ಸಂಘಟನೆಗಳ ಕಾರ್ಯಕ್ರಮಗಳ ವಿಡಿಯೋ ಚಿತ್ರೀಕರಣ ಮಾಡಬೇಕು, ತಪಾಸಣೆ ಮಾಡಬೇಕು ಎಂದು ಆಯೋಗಕ್ಕೆ ಕಾಂಗ್ರೆಸ್ ಮನವಿ ಸಲ್ಲಿಸಿದೆ. ಜತೆಗೆ, ರಾಮ್ದೇವ್, ರವಿಶಂಕರ್ ನಡೆಸುತ್ತಿರುವ ಸಂಸ್ಥೆಗಳು, ಆರೆಸ್ಸೆಸ್ ಹಣ ತೊಡಗಿಸಿ ವಿವಿಧ ಕಾರ್ಯಕ್ರಮ ಆಯೋಜಿಸಿ, ಬಿಜೆಪಿ ಅಭ್ಯರ್ಥಿಗಳ ಪ್ರಚಾರ ನಡೆಸುತ್ತಿವೆ ಎಂದು ಎಐಸಿಸಿ ಕಾನೂನು ವಿಭಾಗದ ಕೆ.ಸಿ. ಮಿತ್ತಲ್ ಆರೋಪಿಸಿದ್ದಾರೆ.