ಕನ್ನಡಿಗನ ಸಾವು
ಚನ್ನಪಟ್ಟಣ: ಗುರುವಾರ ಮುಂಜಾನೆ ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ನಡೆದಿರುವ ನಕ್ಸಲ್ ಬಾಂಬ್ ಸ್ಫೋಟದಲ್ಲಿ ತಾಲೂಕಿನ ಸಿಆರ್ಪಿಎಫ್ ಯೋಧ ಸಾವಿಗೀಡಾಗಿದ್ದಾರೆ. ತಾಲೂಕಿನ ಹನಿಯೂರು ಗ್ರಾಮದ ಈರೇಗೌಡರ ಮಗ ಸೋಮೇಗೌಡ(43) ಮೃತ ಯೋಧ. ಬಿಹಾರದ ಮತಗಟ್ಟೆ ಬಳಿ ಚುನಾವಣೆ ಕೆಲಸದಲ್ಲಿ ನಿಯೋಜಿತರಾಗಿದ್ದರು. ಮತ್ತೊಬ್ಬ ಯೋಧ ಕೂಡ ಹುತಾತ್ಮರಾಗಿದ್ದಾರೆ.