ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಕ್ಸಲ್ ಹಿಂಸೆಗೂ ಹೆದರದ ಮತದಾರ

ಲೋಕಸಭೆಗೆ 3ನೇ ಹಂತದಲ್ಲಿ 11 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳ...

Srinivasa Murthy VN
Updated On : 11 Apr 2014, 2:47 am

ಎಲ್ಲೆಲ್ಲಿ ಎಷ್ಟೆಷ್ಟು ಮತದಾನ?
ದೆಹಲಿ ಶೇ.64
ಹರ್ಯಾಣ 65ರ್
ಚಂಡೀಗಡ 74ರ್
ಉತ್ತರ ಪ್ರದೇಶ 65ರ್
ಜಮ್ಮು 66ರ್
ಮಧ್ಯಪ್ರದೇಶ 54ರ್
ಮಹಾರಾಷ್ಟ್ರ 54ರ್
ಕೇರಳ74ರ್
ಬಿಹಾರ 52ರ್
ಒಡಿಶಾ 67ರ್
ಛತ್ತೀಸ್‌ಗಡ 51ರ್
ಜಾರ್ಖಂಡ್     58ರ್
ಲಕ್ಷದ್ವೀಪ 71ರ್
ಅಂಡಮಾನ್ ನಿಕೋಬಾರ್ 67ರ್

ನವದೆಹಲಿ: ಲೋಕಸಭೆಗೆ 3ನೇ ಹಂತದಲ್ಲಿ 11 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳ 91 ಕ್ಷೇತ್ರಗಳಲ್ಲಿ ಗುರುವಾರ ಮತದಾನ ನಡೆಯಿತು. ನಕ್ಸಲ್ ಪೀಡಿತ ಜಾರ್ಖಂಡ್, ಒಡಿಶಾ ಹಾಗೂ ಬಿಹಾರಗಳಲ್ಲಿ ಹಲವೆಡೆ ಹಿಂಸಾಚಾರ ನಡೆದಿದ್ದು ಬಿಟ್ಟರೆ ಉಳಿದೆಡೆ ಮತದಾನ ಶಾಂತಿಯುತವಾಗಿತ್ತು.

 ನಕ್ಸಲರ ಹಿಂಸಾಚಾರ
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಗುರುವಾರ ನಡೆದ ಮತದಾನ ನಕ್ಸಲರ ಅಟ್ಟಹಾಸಕ್ಕೆ ಸಾಕ್ಷಿಯಾಯಿತು. ಛತ್ತೀಸ್‌ಗಡದ ಬಸ್ತಾರ್‌ನಲ್ಲಿ ಮತಗಟ್ಟೆಯಿಂದ ಹಿಂದಿರುಗುತ್ತಿದ್ದ ಪೊಲೀಸ್ ಸಿಬ್ಬಂದಿಯ ತಂಡದ ಮೇಲೆ ನಕ್ಸಲೀಯರು ದಾಳಿ ನಡೆಸಿದ್ದಾರೆ. ಪ್ರಬಲ್ ಬಾಂಬ್ ಸ್ಫೋಟಿಸಿದ ನಕ್ಸಲರು ಬಳಿಕ ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಅಸುನೀಗಿದ್ದಾರೆ. ಬಿಹಾರದ ಮುಂಗೇರ್‌ನಲ್ಲಿ ನಕ್ಸಲರು ನಡೆಸಿದ ಗುಂಡಿನ ದಾಳಿಯಿಂದ ಇಬ್ಬರು ಸಿಆರ್‌ಪಿಎಫ್ ಯೋಧರು ಮೃತಪಟ್ಟಿದ್ದಾರೆ. ಒಡಿಶಾದ ಕೋರಪುಟ್ ನಲ್ಲಿ ಕೆಂಪು ಉಗ್ರರು ವಿದ್ಯುನ್ಮಾನ ಮತಯಂತ್ರವನ್ನೇ ಲೂಟಿ ಮಾಡಿದ್ದಾರೆ.

 ಹಕ್ಕು ಚಲಾಯಿಸದ ಮೀರಾ
ಲೋಕಸಭೆ ಸ್ಪೀಕರ್ ಮೀರಾಕುಮಾರ್ ಮತ ಚಲಾಯಿಸಿಲ್ಲ. ಅವರು ಫುಲ್ ಬ್ಯುಸಿ. ಸಸಾರಾಂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮೀರಾ ಗುರುವಾರ ಕ್ಷೇತ್ರದಲ್ಲೇ ಕಾಲ ಕಳೆದರು. ಹಾಗಾಗಿ ದೆಹಲಿಗೆ ಬಂದು ಮತಹಾಕಲು ಸಮಯ ಸಿಗಲಿಲ್ಲವಂತೆ.

 ಸೋನಿಯಾ, ರಾಹುಲ್
ಗಾಂಧಿ ಕುಟುಂಬ ದೆಹಲಿಯಲ್ಲಿ ಮುಂಜಾನೆಯೇ ಮತಗಟ್ಟೆಗೆ ಆಗಮಿಸಿ ಮತ ಹಕ್ಕು ಚಲಾಯಿಸಿತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕಾಗಾಂಧಿ, ರಾಬರ್ಟ್ ವಾದ್ರಾ ಮತ್ತಿತರರು ಗುರುವಾರ ಬೆಳಗ್ಗೆ 9.30ರ ವೇಳೆಗೆ ತಂತಮ್ಮ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು. ಸೋನಿಯಾರ ಜತೆ ಅಜಯ್ ಮಾಕನ್, ಡಿಪಿಸಿಸಿ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ, ದೆಹಲಿ ಮಾಜಿ ಸಿಎಂ ಹಾರೂನ್ ಯೂಸುಫ್ ಇದ್ದರು.

 ಅಧಿಕಾರಿಗಳ ಮೇಲೆ ಹಲ್ಲೆ
ಪಶ್ಚಿಮಬಂಗಾಳದ ಮಾಲ್ಡಾದಲ್ಲಿ ತೃಣಮೂಲ ಕಾಂಗ್ರೆಸ್‌ನ ಬೈಕ್ ರ್ಯಾಲಿಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಆಯೋಗದ ಅಧಿಕಾರಿಗಳ ಮೇಲೆ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ನಿಯಮದ ಪ್ರಕಾರ ಬೈಕ್ ರ್ಯಾಲಿ ನಡೆಸುವಂತಿಲ್ಲ. ಆದರೂ ಟಿಸಿಎಂ ಕಾರ್ಯಕರ್ತರು ರ್ಯಾಲಿ ನಡೆಸಿದ್ದು, ಅದನ್ನು ಚಿತ್ರೀಕರಣ ಮಾಡಿದ್ದಕ್ಕಾಗಿ ಅಧಿಕಾರಿಗಳಿಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಆಯೋಗ, ಕಠಿಣ ಕ್ರಮಕ್ಕೆ ಆದೇಶಿಸಿದೆ.

 ಗುಲಾಂ ನಬಿ ಗಲಿಬಿಲಿ
ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಅವರು ಮತಗಟ್ಟೆಗೆ ಬಂದು ಗಲಿಬಿಲಿಗೊಂಡ ಘಟನೆ ಜಮ್ಮುವಿನಲ್ಲಿ ನಡೆಯಿತು. ಜೋಗಿ ಗೇಟ್ ಪ್ರದೇಶದ ಮತಗಟ್ಟೆ ಅಧಿಕಾರಿಗಳು ಗುಲಾಂ ನಬಿ ಅವರಲ್ಲಿ ಗುರುತು ಸಾಬೀತುಪಡಿಸುವಂತೆ ಆದೇಶಿಸಿದಾಗ ಅವರು ಗೊಂದಲಕ್ಕೊಳಗಾದರು. ನಂತರ ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರು ಆಜಾದ್‌ರ ಗುರುತಿಗೆ ಖಾತ್ರಿ ನೀಡಿದ ಬಳಿಕವೇ ಅವರನ್ನು ಒಳಗೆ ಬಿಡಲಾಯಿತು. ಇದೇ ವೇಳೆ, ಬಿಜೆಪಿ ನಾಯಕರೂ ಆಜಾದ್ ಒಬ್ಬ ರಾಷ್ಟ್ರೀಯ ನಾಯಕ ಎಂದು ಹೇಳುತ್ತಿದ್ದುದು ಕೇಳಿಬಂತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement