ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಗೌಡರಿಗೆ ಸ್ವಾಭಿಮಾನಿಗಳ ಕಂಡರಾಗದು!

'ಮಹಾಯುದ್ಧ' ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ರಾಜಕಾರಣಿಗಳು..

Srinivasa Murthy VN
Updated On : 12 Apr 2014, 10:16 am

'ಮಹಾಯುದ್ಧ' ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ರಾಜಕಾರಣಿಗಳು ಅದಕ್ಕೆ ಆರೋಪದ ರಂಗು ತುಂಬುತ್ತಿದ್ದಾರೆ. ಪರಸ್ಪರ ಆರೋಪ, ಪ್ರತ್ಯಾರೋಪ, ಕಾಲೆಳೆಯುವ ಕಸರತ್ತು ಜೋರಾಗಿದೆ. ಹೀಗಿದೆ ನೋಡಿ ವಾಗ್ಯುದ್ಧದ ರಂಗು ರಂಗೋಲಿ..

-ಗೌಡರಿಗೆ ಸ್ವಾಭಿಮಾನಿಗಳ ಕಂಡರಾಗದು!
- ಸಿದ್ದರಾಮಯ್ಯ ಮುಖ್ಯಮಂತ್ರಿ (ಗದಗದಲ್ಲಿ ಹೇಳಿದ್ದು)
ನಾನು ಸಿಎಂ ಆಗಿದ್ದನ್ನೇ ದೇವೇಗೌಡರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಗೌಡರಿಗೆ ಸ್ವಾಭಿಮಾನಿಗಳನ್ನು ಕಂಡರೆ ಆಗುವುದಿಲ್ಲ. ಹೇಳಿದ್ದನ್ನು ಕೇಳುವ ಗುಲಾಮರು ಬೇಕು. ಹೋರಾಟದ ಮೂಲಕ ಬದುಕು ಕಟ್ಟಿಕೊಂಡ ವ್ಯಕ್ತಿ ನಾನು. ನನಗೆ ಅಹಂ ಬಂದಿದೆ ಎಂಬುದು ಸುಳ್ಳು.

-ಮೋದಿ ಹೆಸರೆತ್ತುವುದೇ ಅಪರಾಧ!  
- ರೆಹಮಾನ್ ಖಾನ್, ಕೇಂದ್ರ ಸಚಿವ (ಜಮಖಂಡಿ)
ಗೋದ್ರಾ ಹತ್ಯಾಕಾಂಡದ ರೂವಾರಿ ಮೋದಿ ಹೆಸರು ಹೇಳುವುದೇ ಘೋರ ಅಪರಾಧ. ಗುಜರಾತ್ ಪ್ರಗತಿ ಬಗ್ಗೆ ಮೋದಿ ಹೇಳುವುದೆಲ್ಲವೂ ಸುಳ್ಳು. 1ಗೆ 1 ಎಕರೆಯಂತೆ 10 ಸಾವಿರ ಎಕರೆಯನ್ನು ಅದಾನಿಗೆ ನೀಡಿದ್ದೇ ಅವರ ಸಾಧನೆ.

-ನಿವೃತ್ತಿ ಇಲ್ಲ                  
- ದೇವೇಗೌಡ, ಜೆಡಿಎಸ್ ವರಿಷ್ಠ (ಪಾಂಡವಪುರ)
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವವರೆಗೂ ನಿವೃತ್ತಿ ಮಾತೇ ಇಲ್ಲ. ನನ್ನ ಹಾಗೂ ನನ್ನ ಪಕ್ಷವನ್ನು ಮುಗಿಸುವುದು ಕಾಂಗ್ರೆಸ್‌ಗೆ ಸಾಧ್ಯವಿಲ್ಲ. ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ಕಾಲ ಸನ್ನಿಹಿತವಾಗಿದೆ. ಕಾಂಗ್ರೆಸ್ ನಾಯಕರು ಆರೋಪ ಮಾಡುವಾಗ ಎಚ್ಚರದಿಂದ ಇರಲಿ.

-ಗೌಡ ಎಂದರೆ ಗಡಗಡ ಏಕೆ?      
- ಪ್ರತಾಪ್ ಸಿಂಹ, ಮೈಸೂರು ಬಿಜೆಪಿ ಅಭ್ಯರ್ಥಿ (ಮಡಿಕೇರಿ)
ವಿಶ್ವನಾಥ್ ಕುರುಬರ ನಾಯಕ ಎಂದು ಹೇಳಿಕೊಳ್ಳುತ್ತಿರುವಾಗ ನಾನು ಗೌಡ ಸಮುದಾಯದವನು ಎಂದು ಹೇಳಿಕೊಳ್ಳುವುದು ತಪ್ಪೇ? ನಾನು ಗೌಡ ಎಂದಾಕ್ಷಣ ಕಾಂಗ್ರೆಸ್ ಪ್ರಮುಖರಿಗೆ ಗಡಗಡ ಎನ್ನುವುದೇಕೆ? ಇಷ್ಟು ಬೇಗ ಸೋಲಿನ ಭಯ ಕಾಡಿತೇ? ವಿಶ್ವಾಸಾರ್ಹತೆಯೇ ನನ್ನ ಬಂಡವಾಳ.

-ದೇವೇಗೌಡರು ವಿಘ್ನ ಸಂತೋಷಿ!
- ಅನಂತಕುಮಾರ್, ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ (ಶಿವಮೊಗ್ಗ)
ಜೆಡಿಎಸ್ ವರಿಷ್ಠ ದೇವೇಗೌಡರು ವಿಘ್ನ ಸಂತೋಷಿ. ದೇಶದಲ್ಲಿ ಸ್ಥಿರ ಸರ್ಕಾರ ಅವರಿಗೆ ಇಷ್ಟವಿಲ್ಲ. ರಾಜಕೀಯ ಆಟಕ್ಕೆ ಅಸ್ಥಿರತೆ ಬೇಕಾಗಿದೆ. ಆಯೋಗದಿಂದ ಛೀಮಾರಿ ಹಾಕಿಸಿಕೊಂಡ ದೇಶದ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆಯಾಚಿಸಲಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement