ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಸ್ತಿ ಆರೋಹಣ ರಾಗಾ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಒಟ್ಟು ಆಸ್ತಿ ಮೌಲ್ಯ 9.4 ಕೋಟಿ. 2009ಕ್ಕೆ ಹೋಲಿಸಿದರೆ ಅವರ ಸ್ಥಿರಾಸ್ತಿ ಕಡಿಮೆ...

Srinivasa Murthy VN
Updated On : 13 Apr 2014, 4:30 am

ಅಮೇಠಿಯಲ್ಲಿ 3ನೇ ಬಾರಿಗೆ ಕಾಂಗ್ರೆಸ್ ಉಪಾಧ್ಯಕ್ಷ ನಾಮಪತ್ರ
ರಾಹುಲ್ ಸ್ಥಿರಾಸ್ತಿಯಲ್ಲಿ ಕುಸಿತ, ಒಟ್ಟು ಆಸ್ತಿ ಮೌಲ್ಯ ಇಮ್ಮಡಿ
ಅಮೇಠಿ:
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಒಟ್ಟು ಆಸ್ತಿ ಮೌಲ್ಯ 9.4 ಕೋಟಿ. 2009ಕ್ಕೆ ಹೋಲಿಸಿದರೆ ಅವರ ಸ್ಥಿರಾಸ್ತಿ ಕಡಿಮೆಯಾದರೂ, ಒಟ್ಟು ಆಸ್ತಿ ಮೌಲ್ಯ ಇಮ್ಮಡಿಯಾಗಿದೆ.
ಹೌದು. ಅಮೇಠಿ ಲೋಕಸಭಾ ಕ್ಷೇತ್ರದಿಂದ 3ನೇ ಬಾರಿಗೆ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿ ಶನಿವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತನ್ನ ಆಸ್ತಿ ವಿವರವನ್ನು ಘೋಷಿಸಿದ್ದಾರೆ.
ಸ್ಥಿರ ಆಸ್ತಿ ಇಳಿಮುಖ: 2009ರಲ್ಲಿ 4.4 ಕೋಟಿಯಷ್ಟಿದ್ದ ರಾಹುಲ್ ಅವರ ರಿಯಲ್ ಎಸ್ಟೇಟ್ ಆಸ್ತಿ ಮೌಲ್ಯ ಈಗ 8.2 ಕೋಟಿಯಾಗಿದೆ. ಅಂದರೆ ಶೇ.86ರಷ್ಟು ಹೆಚ್ಚಾಗಿದೆ. ಇದೇ ವೇಳೆ, 2009ಕ್ಕೆ ಹೋಲಿಸಿದರೆ ಸ್ಥಿರ ಆಸ್ತಿ ಇಳಿಮುಖವಾಗಿದೆ. ಮಾಲ್‌ವೊಂದರಲ್ಲಿ ಹೊಂದಿದ್ದ 2 ಮಳಿಗೆಗಳನ್ನು ಅವರು ಮಾರಾಟ ಮಾಡಿದ್ದಾರೆ. ಜತೆಗೆ, ಹರ್ಯಾಣದಲ್ಲಿದ್ದ ಕೃಷಿ ಸಂಬಂಧಿ ಆಸ್ತಿಯನ್ನೂ ಮಾರಿದ್ದಾರೆ.
ಸ್ವಂತ ಕಾರಿಲ್ಲ: ವಿಶೇಷವೆಂದರೆ ರಾಹುಲ್ ಅವರು ಸ್ವಂತ ಕಾರನ್ನು ಹೊಂದಿಲ್ಲ. ಭದ್ರತಾ ಕಾರಣಕ್ಕಾಗಿ ಎಸ್‌ಪಿಜಿ ವಾಹನದಲ್ಲೇ ಸಂಚರಿಸುತ್ತಿರುವುದಾಗಿ ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಇದೇ ವೇಳೆ, ದೆಹಲಿಯ ಸುಲ್ತಾನ್‌ಪುರದಲ್ಲಿ ಫಾರ್ಮ್ ಹೌಸ್‌ವೊಂದನ್ನು ಹೊಂದಿರುವುದಾಗಿ ಅವರು ಘೋಷಿಸಿದ್ದಾರೆ.

ರಾಹುಲ್ ಆಸ್ತಿ
ಒಟ್ಟು ಆಸ್ತಿ
9.4 ಕೋಟಿ
ಕೈಯಲ್ಲಿರುವ ನಗದು
35 ಸಾವಿರ
ಒಟ್ಟು ಆದಾಯ
92.46 ಲಕ್ಷ
ನಿಶ್ಚಿತ ಠೇವಣಿ ಮೊತ್ತ
9.5 ಲಕ್ಷ
ಬಾಂಡ್, ಷೇರು ಹೂಡಿಕೆ
1.90 ಲಕ್ಷ
ಮ್ಯೂಚ್ಯುವಲ್ ಫಂಡ್
81.28 ಲಕ್ಷ
ಇತರೆ ಹೂಡಿಕೆ
20.70 ಲಕ್ಷ
330 ಗ್ರಾಂ ಆಭರಣ
2.87 ಲಕ್ಷ
ದೆಹಲಿಯ ಸುಲ್ತಾನ್‌ಪುರದಲ್ಲಿ ಫಾರ್ಮ್‌ಹೌಸ್
ಸ್ವಂತ ಕಾರು ಇಲ್ಲ, ಎಸ್‌ಪಿಜಿ ವಾಹನದಲ್ಲೇ ಓಡಾಟ

ಮೋದಿ ವಿರುದ್ಧ ವೈಯಕ್ತಿಕವಾದದ್ದೇನನ್ನೂ ಹೇಳಿಲ್ಲ. ಈ ಹಿಂದಿನ ಅಫಿಡವಿಟ್‌ನಲ್ಲಿ ಅವರು ತಮ್ಮ ಪತ್ನಿಯ ಹೆಸರು ನಮೂದಿಸಿಲ್ಲ ಏಕೆ ಎಂದು ಪ್ರಶ್ನಿಸಿದ್ದೆ ಅಷ್ಟೆ.
-ರಾಹುಲ್ ಗಾಂಧಿ,  ಕಾಂಗ್ರೆಸ್ ಉಪಾಧ್ಯಕ್ಷ

ಅಮೇಠಿಯಲ್ಲಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ರಾಹುಲ್ ಗಾಂಧಿ, ತಮ್ಮ ಸಂಬಂಧಿ ವರುಣ್ ಗಾಂಧಿ ಸ್ಪರ್ಧಿಸುತ್ತಿರುವ ಸುಲ್ತಾನ್‌ಪುರದಲ್ಲಿ ರೋಡ್‌ಶೋ ನಡೆಸಿ ಅಚ್ಚರಿ ಮೂಡಿಸಿದರು. ಈವರೆಗೆ ಗಾಂಧಿ ಕುಡಿಗಳು ಪರಸ್ಪರರ ಕ್ಷೇತ್ರದಲ್ಲಿ ಪ್ರಚಾರ ನಡೆಸಿರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement