ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಳ್ಳಾರಿಲಿ ಕಾಸುಬಾತ್ 8.77 ಕೋಟಿ ವಶ

ಬಳ್ಳಾರಿ ಗಣಿಧಣಿಗಳಿಗೇ ಸಾಲ ನೀಡುತ್ತಿದ್ದ ಫೈನಾನ್ಶಿಯರ್ ಒಬ್ಬರ ಮನೆ, ಕಚೇರಿಗಳಿಂದ ರು. 8.77 ಕೋಟಿ ವಶಪಡಿಸಿಕೊಳ್ಳಲಾಗಿದೆ.

Srinivasa Murthy VN
Updated On : 12 Apr 2014, 11:35 am

ಬಳ್ಳಾರಿ: ಬಳ್ಳಾರಿ ಗಣಿಧಣಿಗಳಿಗೇ ಸಾಲ ನೀಡುತ್ತಿದ್ದ ಫೈನಾನ್ಶಿಯರ್ ಒಬ್ಬರ ಮನೆ, ಕಚೇರಿಗಳಿಂದ ರು. 8.77 ಕೋಟಿ ವಶಪಡಿಸಿಕೊಳ್ಳಲಾಗಿದೆ.
ಚುನಾವಣೆಯಲ್ಲಿ ಹವಾಲಾ ಹಣ ಸರಬರಾಜಾಗುತ್ತಿರುವ ಸುಳಿವಿನ ಮೇಲೆ ಬಾಬುಲಾಲ್ ಪರಶುರಾಮ್ ಪುರಿ ಅವರ ಮನೆ, ಕಚೇರಿ ಹಾಗೂ ಮಗನ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ನಗದಲ್ಲದೇ ರು. 4.3 ಕೋಟಿ ಮೌಲ್ಯದ ಕಿಸಾನ್ ವಿಕಾಸ ಪತ್ರ, ರು. 5 ಕೋಟಿ ಮೌಲ್ಯದ ಚೆಕ್‌ವಶಪಡಿಸಿಕೊಳ್ಳಲಾಗಿದೆ. ಮಗನ ಮನೆಯಲ್ಲಿ ರು. 4.80 ಲಕ್ಷ, ಕಚೇರಿಯಲ್ಲಿ ರು. 20.20 ಲಕ್ಷ ವಶಪಡಿಸಲಾಗಿದೆ.
ಪರಿಚಯಸ್ಥರಿಗೆ ಬಾಬುಲಾಲ್ ಪರಶುರಾಮ್ ಪುರಿ ಸ್ವತಃ 'ಎಟಿಎಂ' ಆಗಿದ್ದ. ಪರಿಚಯದವರು ಯಾವ ಹೊತ್ತಿನಲ್ಲಿ ಹೋಗಿ ಕೇಳಿದರೂ ತಕ್ಷಣ ಹಣ ಸಿಗುತ್ತಿತ್ತು ಎಂದು ಡಿಸಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಹಾಗೂ ಎಸ್‌ಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ. ಬಾಬುಲಾಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ..

ಇಡೀ ರಾತ್ರಿ ಎಣಿಕೆ
ಅದೊಂದು ಸಾಧಾರಣ ಮನೆ. ಆದರೆ, ಪೊಲೀಸರಿಗೆ ಅಲ್ಲಿ ಸಿಕ್ಕಿದ್ದು ಟ್ರಂಕ್, ಕಪಾಟುಗಳ ತುಂಬ ಬರೀ ಹಣ. ರಾತ್ರಿಯಿಡೀ ನಿರಂತರ 9 ತಾಸು ಎಣಿಸಿ ಎಣಿಸಿ ಪೊಲೀಸರು ಸುಸ್ತಾದರು. ಶುಕ್ರವಾರ ರಾತ್ರಿ 7ರ ಸುಮಾರಿಗೆ ದಾಳಿ ನಡೆಯಿತು. ರಾತ್ರಿ 11.30ರಿಂದ 2 ನೋಟು ಎಣಿಸುವ ಯಂತ್ರಗಳಲ್ಲಿ ಎಣಿಕೆ ಆರಂಭಿಸಿದರು. ಎಣಿಕೆ ಮುಗಿಸಿದಾಗ ಶನಿವಾರ ಬೆಳಗ್ಗೆ 9 ಗಂಟೆ.

ವಶಪಡಿಸಿಕೊಂಡ ಹಣಕ್ಕೂ ನನಗೂ ಸಂಬಂಧ ಇಲ್ಲ. ಬಳ್ಳಾರಿ ಎಂದ ತಕ್ಷಣ ನಮ್ಮನ್ನೇ ಯಾಕೆ ಪ್ರಶ್ನಿಸುತ್ತೀರಿ? ಅಷ್ಟಕ್ಕೂ ಅವರು ಯಾರೆಂಬುದೇ ಪರಿಚಯ ಇಲ್ಲ.
-ಶ್ರೀರಾಮುಲು, ಬಿಜೆಪಿ ಅಭ್ಯರ್ಥಿ

ರಾಜ್ಯದಲ್ಲಿ ಈತನಕ 21.31 ಕೋಟಿ ಹವಾಲ ಹಣ ವಶಪಡಿಸಿಕೊಂಡಿದ್ದು, ಇದರಲ್ಲಿ ಬಳ್ಳಾರಿಯಲ್ಲಿ ಹೆಚ್ಚು.ಆದರೆ ಗುಲ್ಲರ್ಗ, ಕೊಪ್ಪಳದಲ್ಲಿ ಏನೂ ಲಭ್ಯವಾಗಿಲ್ಲ.
-ವಿ. ಪೊನ್ನುರಾಜ್,
ವಿಶೇಷ ಚುನಾವಣಾಧಿಕಾರಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement