ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸತ್ತವರಿಗೆ, ನಿವೃತ್ತರಿಗೆ ಚುನಾವಣೆ ಹೊಣೆ!

Srinivasa Murthy VN
Updated On : 12 Apr 2014, 11:35 am

ರಾಯಚೂರು: ಸತ್ತವರೂ ಸಮಾಧಿಯಿಂದ ಎದ್ದು ಬಂದು ಚುನಾವಣೆ ಕರ್ತವ್ಯಕ್ಕೆ ಹಾಜರಾಗಬೇಕು! ಏ.17ರ ಚುನಾವಣೆಗೆ ರಾಯಚೂರು ಜಿಲ್ಲಾಡಳಿತ, 17 ಮಂದಿ ಮರಣ ಹೊಂದಿದ ಹಾಗೂ ನಾಲ್ವರು ನಿವೃತ್ತರಿಗೆ ಕರ್ತವ್ಯದ ನೇಮಕ  ಆದೇಶ ಹೊರಡಿಸಿದೆ. ಶಿಕ್ಷಕರಾಗಿದ್ದು, ಮರಣಿಸಿದ ಹೇಮಲತಾ, ಶಂಕರಬಾಬು, ಜಿಂದಪ್ಪ, ರಾಜೇಶ್, ಮರಿಲಿಂಗಪ್ಪ, ಜಯಶ್ರೀ ಪಾಟೀಲ್, ಮುನಿಸ್ವಾಮಿ ಸೇರಿ 17 ಜನರ ಕುಟುಂಬ ಸದಸ್ಯರು ಇದರಿಂದ ಕಂಗಾಲಾಗಿದ್ದಾರೆ. ಸ್ವಯಂ ನಿವೃತ್ತಿ ಪಡೆದ ಗೀತಾಬಾಯಿ, ಸುಧಾ, ನಫೀಸ್ ಹಾಗೂ ಫಾತಿಮಾ ಬೇಗಂ ಎಂಬವರಿಗೂ ಕರ್ತವ್ಯಕ್ಕೆ ಕರೆ ಬಂದಿದೆ. ಎಚ್‌ಆರ್‌ಎಂಎಸ್ ಮಾಹಿತಿಯಲ್ಲಿನ ಲೋಪದಿಂದ ಯಡವಟ್ಟು ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement