ಪ್ರಚಾರ ಇಂದು ಅಂತ್ಯ, ಮತಗಟ್ಟೆಗೆ ಮೊಬೈಲ್ ನಿಷೇಧ
ಬೆಂಗಳೂರು: ಲೋಕಸಭಾ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಮಂಗಳವಾರ ಸಾಯಂಕಾಲ 6 ಗಂಟೆ ನಂತರ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಈ ನಡುವೆ ಇದೇ ಮೊದಲ ಬಾರಿಗೆ ಮತ ಕೇಂದ್ರಕ್ಕೆ ಮೊಬೈಲ್ ನಿಷೇಧಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಪ್ರಕಾರ ಮೊಬೈಲ್ ಫೋನ್ ಅನ್ನು ಮತದಾನ ಕೇಂದ್ರಕ್ಕೆ ತರುವಂತಿಲ್ಲ. ಒಂದೊಮ್ಮೆ ತಂದರೆ ಅದನ್ನು ಮತಗಟ್ಟೆ ಅಧಿಕಾರಿಗಳ ಬಳಿ ನೀಡಬೇಕು. ಇಲ್ಲವಾದರೆ ಅಂಥವುಗಳನ್ನು ವಶಪಡಿಸಿಕೊಳ್ಳಲಾಗುತ್ತದೆ.
ಚುನಾವಣೆಗೆ ನಿಯೋಜಿತರು
2.95 ಲಕ್ಷ ಉದ್ಯೋಗಿಗಳ ನಿಯೋಜನೆ
1.76 ಲಕ್ಷ ಪುರುಷ ಸಿಬ್ಬಂದಿ
1.18 ಲಕ್ಷ ಮಹಿಳಾ ಸಿಬ್ಬಂದಿ
ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನದ ಅವಧಿ
ಮತಗಟ್ಟೆಯ ವಿವರ ಪಡೆಯಲು ಮೊಬೈಲ್ ಸಂಖ್ಯೆ: 92433-55223
ಇದಕ್ಕೆkaepic ಮುಂದೆ ಎಪಿಕ್ ಕಾರ್ಡ್ ನಂಬರ್ ಹಾಕಿ ಎಸ್‌ಎಂಎಸ್ ಕಳುಹಿಸಿದರೆ ಮಾಹಿತಿ ಲಭ್ಯ.