ಬಾಬುಲಾಲ್ ಮೇಲೆ ಮುಗಿಬಿದ್ದ ಅಧಿಕಾರಿಗಳು
ಬಳ್ಳಾರಿ: 'ಭಾರಿ ಕುಳ' ಬಾಬುಲಾಲ್ ಮೇಲೆ ವಿವಿಧ ಇಲಾಖೆಗಳ ಕಣ್ಣು ಬಿದ್ದಿದೆ. ಆದಾಯ ತೆರಿಗೆ ಹಾಗೂ ಇತರ ಇಲಾಖೆ ಅಧಿಕಾರಿಗಳು ಸೋಮವಾರ ಅವರ ಮನೆ ಪರಿಶೀಲಿಸಿದ್ದಾರೆ. ಅವರ ಮನೆಯಲ್ಲಿ ಸಿಕ್ಕಿರುವ ಹಣ ಹಾಗೂ ದಾಖಲೆ ಪತ್ರಗಳನ್ನು ಪರಿಶೀಲಿಸಲು ಸೋಮವಾರ ಬೆಳಗ್ಗೆ ಬೆಂಗಳೂರಿನ ಜಾರಿ ನಿರ್ದೇಶನಾಲಯದ ಅಧಿಕಾರಿ ರಾಜೇಶ್ ಆಗಮಿಸಿದ್ದಾರೆ.