ಮತ ಮಹಾಯುದ್ಧಕ್ಕೆ ನಾಳೆಯೇ ಮುಹೂರ್ತ
ನಾಳೆ ಬಿಟ್ಟರೆ ಇನ್ನೈದು ವರ್ಷ ಈ ಹಬ್ಬಕ್ಕಾಗಿ ಕಾಯಬೇಕು, ಇದರ ಹಿಂದೆ, ಸಡಗರ...
-ಅದಿತಿಮಾನಸ ಟಿ.ಎಸ್.
ಬೆಂಗಳೂರು: ನಾಳೆ ಬಿಟ್ಟರೆ ಇನ್ನೈದು ವರ್ಷ ಈ ಹಬ್ಬಕ್ಕಾಗಿ ಕಾಯಬೇಕು, ಇದರ ಹಿಂದೆ, ಸಡಗರ, ಸಂಭ್ರಮವಿದೆ. ತಪ್ಪದೇ ಗುರುವಾರ ಬೆಳಗ್ಗೆ ಬೇಗ ಎದ್ದು ಮರೆಯದೇ ಮತದಾನ ಮಾಡಿ...
ಇದು 'ಕನ್ನಡಪ್ರಭ' ಕಾಳಜಿ. ಉತ್ತಮ ಭವಿಷ್ಯತ್ತಿನ ನಿರ್ಮಿತಿಗಾಗಿ ಇಂದಿನ ಹಕ್ಕು ಜಾರಿ ತುಂಬಾನೇ ಮುಖ್ಯ. ರಜೆ ಎಂದೋ, ಇನ್ನೇನೋ ಕೆಲಸವಿದೆಯೆಂದೋ ಮತದಾನದಂಥ ಪವಿತ್ರ ಕರ್ತವ್ಯ ಮರೆಯಬೇಡಿ. ನಿಮ್ಮ ಹಕ್ಕುಗಳ ವಾರಸುದಾರರನ್ನು ತಪ್ಪದೇ ಆರಿಸಿ.
ಪವಿತ್ರ ಕರ್ತವ್ಯವಿದು
ನಮ್ಮ, ನಿಮ್ಮ ಮೂಲಭೂತ ಹಕ್ಕು ರಕ್ಷಣೆಗಾಗಿ ಮಾಡಬೇಕಿರುವ ಮೊದಲ ಕರ್ತವ್ಯ ಮತದಾನ. ಉತ್ತಮ ಸರ್ಕಾರ ರಚನೆ ಆದ್ಯ ಕರ್ತವ್ಯ. ಇಲ್ಲಿ ಜಾತಿ, ಧರ್ಮ, ಪಂಗಡ ಯಾವುದಕ್ಕೂ ಬೆಲೆ ಕೊಡಬೇಡಿ. ಸೂಕ್ತ ವ್ಯಕ್ತಿಗೇ ಮತಹಾಕಿ. ಹಣ, ಹೆಂಡದಂಥ ಕ್ಷುಲ್ಲಕ ಆಮಿಷಕ್ಕೆ ಒಳಗಾಗಬೇಡಿ.
ನೀವೇ ಮೊದಲಿಗರಾಗಿ
ನಿಮ್ಮ ಊರಿನ ಮತಗಟ್ಟೆಯಲ್ಲಿ ನಿಮ್ಮ ಮತವೇ ಮೊದಲನೆಯದಾಗಲಿ. ಈ ವಿಚಾರದಲ್ಲಿ ನಿಮಗೆ ಸಿದ್ಧಗಂಗಾ ಶ್ರೀಗಳು ಮಾದರಿಯಾಗಲಿ. ಸ್ವಾತಂತ್ರ್ಯ ಸಿಕ್ಕ ಬಳಿಕ ನಡೆದ ಎಲ್ಲ ಚುನಾವಣೆಗಳಲ್ಲೂ ಸ್ವಾಮೀಜಿ ವಾಸಿಸುವ ಬಳಿ ಇರುವ ಮತಗಟ್ಟೆಯಲ್ಲಿ ಇವರದೇ ಮೊದಲ ಮತ. ಒಂದು ಬಾರಿಯೂ ಇವರು ತಮ್ಮ ಹಕ್ಕು ತಪ್ಪಿಸಿಲ್ಲ.
ಮತ ಹಾಕದಿದ್ರೆ, ಹಕ್ಕೂ ಇಲ್ಲ
ನಿಮಗಾಗಿ ನೀವು ಮತಹಾಕಿ
ಉದಾಸೀನದಿಂದ ಹೊಗಳಿಕೆವರೆಗೆ
ಚಕ್ದೇ ಇಂಡಿಯಾ, ವೋಟ್ ಮಾಡೋಣ
ನಟರಾಗಿ, ಪ್ರೇಕ್ಷಕರಾಗಬೇಡಿ
ದೂರು ನಿಲ್ಲಿಸಿ, ವೋಟ್ ಆರಂಭಿಸಿ
ಮತವೇ ಬದಲಾವಣೆಗೆ ದಾರಿದೀಪ
ಬೇರೆ ಮಾತೇ ಬೇಡ, ಮತ ಬೇಗ
ಕೈ ಪ್ರಚಾರಕ್ಕೆ ಆಧಾರ
ಬೆಂಗಳೂರು: ಆಧಾರ್ ಕಾರ್ಡ್ಗೆ ಸಂಗ್ರಹಿಸಿದ ಮಾಹಿತಿ ಬಹಿರಂಗವಾಗುವ, ಬೇರೆಯವರ ಪಾಲಾಗುವ ಅಪಾಯವಿದೆ ಎಂಬ ಕೂಗಿಗೆ ಈಗ ಆಧಾರ ಸಿಕ್ಕಿದೆ. ಮತದಾರರನ್ನು ಸಂಪರ್ಕಿಸಿ ಮತ ಕೇಳಲು ಕಾಂಗ್ರೆಸ್ ಕಾರ್ಡ್ನ ಮಾಹಿತಿ ಬಳಸಿದ ಬಗ್ಗೆ ಆಧಾರ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದೆ.
ಬೇಡ ಅಂದ್ರೆ ಇದೆ ಮಾರ್ಗ
ಕ್ಷೇತ್ರದ ಯಾವ ಅಭ್ಯರ್ಥಿಯೂ ಇಷ್ಟವಿಲ್ಲದಿದ್ದರೆ, ನಿಮಗಾಗಿಯೇ 'ನೋಟಾ' ಎಂಬ ಆಯ್ಕೆ ಇದೆ. ಇದನ್ನು ಒತ್ತಿ ಬನ್ನಿ. ನಿಮ್ಮ ತಿರಸ್ಕಾರದ ಹಕ್ಕಿನ ಮತದಿಂದ ಇಂದು ಯಾವ ಪ್ರಯೋಜನ ಆಗದಿದ್ದರೂ, ಮುಂದೊಂದು ದಿನ ಇದರಿಂದಲೇ ಅಭ್ಯರ್ಥಿಯನ್ನೇ ನಿರಾಕರಿಸುವ ಸಾಧ್ಯತೆಗಳು ಬಂದರೂ ಬರಬಹುದು.
ಈ ಬಾರಿ ಎಲ್ಲರೂ ಹೆಬ್ಬೆಟ್ಟೇ!
ಈ ಬಾರಿ ಮತದಾರರ ಎಡಗೈ ಹೆಬ್ಬೆರಳಿಗೆ ಶಾಯಿ ಹಾಕುವುದಕ್ಕೆ ಚುನಾವಣಾ ಆಯೋಗ ನಿರ್ಧರಿಸಿದೆ. ರಾಜ್ಯದ ಕೆಲ ಭಾಗಗಳಲ್ಲಿ ಕೆಲ ತಿಂಗಳ ಹಿಂದಷ್ಟೇ ಗ್ರಾಮ ಪಂಚಾಯಿತಿ ಹಾಗೂ ಎಪಿಎಂಸಿ ಚುನಾವಣೆ ನಡೆದಿದೆ. ಈ ಹಿನ್ನೆಲೆಯಲ್ಲಿ ಬೆರಳು ಗುರುತು ಬದಲಾಯಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಮಾಡಿದ್ದ ಮನವಿಗೆ ಅಂಗೀಕಾರ ದೊರೆತಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ಕುಮಾರ್ ಝಾ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಹೇಳಿದರು.
ಗುಂಪಲ್ಲಿ ಹೋಗುವಂತಿಲ್ಲ
ಮಂಗಳವಾರ ಸಾಯಂಕಾಲ 6 ಗಂಟೆ ನಂತರ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಗಿದೆ. ಅಭ್ಯರ್ಥಿಗಳು ಹಾಗೂ ಮುಖಂಡರು ಪತ್ರಿಕಾಗೋಷ್ಠಿ ನಡೆಸುವುದನ್ನೂ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ಮಾಡುವುದಕ್ಕೆ ಅವಕಾಶವಿದೆಯಾದರೂ ಗುಂಪಾಗಿ ತೆರಳಬಾರದು ಎಂದು ಆಯೋಗ ಸೂಚಿಸಿದೆ. ಅದೇ ರೀತಿ ಟಿವಿ ವಾಹಿನಿಗಳಲ್ಲಿ ಚರ್ಚೆಗೆ ನಿರ್ಬಂಧ ಇಲ್ಲ. ಆದರೆ ಮತದಾರರ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವಂತಿರಬಾರದು. ಮಾಧ್ಯಮಗಳು ಸಂಯಮ ಮೆರೆಯಬೇಕು.
ವೇತನ ಸಹಿತ ರಜೆ
ಎಲ್ಲ ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಮತದಾನಕ್ಕೆ ತೆರಳುವುದಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಚುನಾವಣೆ ದಿವಸ ವೇತನ ಸಹಿತ ರಜೆ ನೀಡಬೇಕು. ಇದಕ್ಕೆ ತಪ್ಪಿದರೆ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.