ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಂಬರೀಷ್ ಅಪಾರ್ಥ ನಿವಾರಿಸಿದ ಎಸ್‌ಎಂಕೆ

ತಮ್ಮ ಹೇಳಿಕೆಯಿಂದ ಮುನಿಸಿಕೊಂಡಿರುವ ವಸತಿ ಸಚಿವ ಅಂಬರೀಶ್ ಅವರಿಗೆ..

Srinivasa Murthy VN
Updated On : 17 Apr 2014, 1:23 am

ಬೆಂಗಳೂರು: ತಮ್ಮ ಹೇಳಿಕೆಯಿಂದ ಮುನಿಸಿಕೊಂಡಿರುವ ವಸತಿ ಸಚಿವ ಅಂಬರೀಶ್ ಅವರಿಗೆ ಕರೆ ಮಾಡಿರುವ ಮಾಜಿ ಸಿಎಂ ಎಸ್.ಎಂ.ಕೃಷ್ಣ 'ಅಪಾರ್ಥ ನಿವಾರಣೆ' ಮಾಡಿದ್ದಾರೆ. 'ಶ್ರೀರಂಗಪಟ್ಟಣದ ಪ್ರಚಾರ ಸಂದರ್ಭದಲ್ಲಿ ವ್ಯಕ್ತವಾದ ಮಾತು ನಿಮ್ಮನ್ನು ಗುರಿಯಾಗಿಸಿಕೊಂಡಿದ್ದಲ್ಲ. ಇಬ್ಬರು ಒಟ್ಟಾಗಿ ಪಕ್ಷದ ಗೆಲುವಿಗೆ ಪ್ರಯತ್ನಿಸೋಣ' ಎಂದು ಕೃಷ್ಣ ಹೇಳಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ರವೀಂದ್ರ ಶ್ರೀಕಂಠಯ್ಯ ಅವರಿಗೆ ಟಿಕೆಟ್ ತಪ್ಪಿಸಿದವರು ತಲೆತಗ್ಗಿಸಬೇಕು ಎಂದು ಪರೋಕ್ಷವಾಗಿ ಅಂಬರೀಶ್‌ಗೆ ಕೃಷ್ಣ ಟಾಂಗ್ ನೀಡಿದ್ದರು. ಇದು ಅಂಬರೀಶ್ ಅವರ ಮುನಿಸಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅಂಬರೀಶ್‌ಗೆ ದೂರವಾಣಿ ಕರೆ ಮಾಡಿ ಚರ್ಚೆ ನಡೆಸಿರುವ ಕೃಷ್ಣ 'ತಾವು ಭಾಷಣ ಮಾಡುವ ಸಂದರ್ಭದಲ್ಲಿ ವ್ಯಕ್ತವಾದ ಮಾತುಗಳು ನಿಮ್ಮನ್ನು ಗುರಿಯಾಗಿಸಿಕೊಂಡು ಹೇಳಿದ್ದಲ್ಲ. ನಿಮ್ಮ ವಿರುದ್ಧ ಮಾತನಾಡುವ ಯಾವುದೇ ಉದ್ದೇಶ ನನಗಿಲ್ಲ. ಇಬ್ಬರು ಒಟ್ಟಾಗಿ ಪಕ್ಷದ ಗೆಲುವಿಗೆ ಪ್ರಯತ್ನ ನಡೆಸೋಣ' ಎಂದು ಸಮಾಧಾನ ಪಡಿಸಿದ್ದಾರೆ. 'ನನ್ನ ಮಾತಿನಂದ ನಿಮಗೇನಾದರೂ ಬೇಸರವಾಗಿದ್ದರೆ ಖೇದ ವ್ಯಕ್ತಪಡಿಸಿತ್ತೇನೆ' ಎಂದು ಹೇಳಿದ್ದಾರೆ.
ಇದಕ್ಕೆ ಸ್ಪಂದಿಸಿರುವ ಅಂಬರೀಶ್, ನಿಮ್ಮ ಎಲ್ಲ ಮಾತುಗಳು ನನಗೆ ಆಶೀರ್ವಾದ. ನಾನು ನಿಮ್ಮ ವಿರುದ್ಧ ಅನ್ಯತಾ ಭಾವಿಸಿಲ್ಲ. ಮಂಡ್ಯದಲ್ಲಿ ರಮ್ಯ ಗೆಲುವಿಗೆ ಶ್ರಮಿಸೋಣ. ಚಿಕ್ಕಪುಟ್ಟ ವಿಚಾರಗಳನ್ನು ದೀರ್ಘಕಾಲ ಬೆಳೆಸುವ ಸ್ವಭಾವ ನನ್ನದ್ದಲ್ಲ ಎಂದು ಹೇಳಿದ್ದಾರೆ ಎಂದು ಗೊತ್ತಾಗಿದೆ. ಈ ಮೂಲಕ ಮತದಾನಕ್ಕೆ ಕೆಲ ಗಂಟೆ ಇರುವಾಗ ಮಂಡ್ಯದಲ್ಲಿ ಟಿಸಿಲೊಡೆದಿದ್ದ ಕಾಂಗ್ರೆಸ್ ದಿಗ್ಗಜರ ಮುನಿಸು ಆಕ್ಷಣವೇ ಶಮನಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement