ನೊಬೆಲ್ ಪುರಸ್ಕೃತ ಗೇಬ್ರಿಯಲ್ ಮಾರ್ಕ್ವೆಜ್ ನಿಧನ
ನೊಬೆಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ..
ಮೆಕ್ಸಿಕೋ ಸಿಟಿ: ನೊಬೆಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್(87) ಗುರುವಾರ ನಿಧನರಾಗಿದ್ದಾರೆ. ಮೆಕ್ಸಿಕೋ ನಗರದಲ್ಲಿನ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಜನಪ್ರಿಯ ಸ್ಪ್ಯಾನಿಷ್ ಭಾಷಾ ಲೇಖಕರಾಗಿರುವ ಮಾರ್ಕ್ವೆಜ್ ಅವರ ಕಾದಂಬರಿಗಳು ಹಾಗೂ ಸಣ್ಣ ಕಥೆಗಳು ವಿಶ್ವದೆಲ್ಲೆಡೆ ಖ್ಯಾತಿ ಪಡೆದಿವೆ. 1967ರಲ್ಲಿ ಅವರು ಬರೆದ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್' ಎಂಬ ಕಾದಂಬರಿ 25ಕ್ಕೂ ಅಧಿಕ ಭಾಷೆಗಳಲ್ಲಿ ಪ್ರಕಟವಾಗಿದ್ದಷ್ಟೇ ಅಲ್ಲ, ಇದರ 5 ಕೋಟಿ ಪ್ರತಿಗಳು ಮಾರಾಟವಾಗಿವೆ.
ಕೊಲಂಬಿಯಾದಲ್ಲಿ ಜನಿಸಿದ್ದ ಮಾರ್ಕ್ವೆಜ್ ಅವರು ಬರೆದಿರುವ 'ಕ್ರೋನಿಕಲ್ ಆಫ್ ಎ ಡೆತ್ ಫೋರ್‌ಟೋಲ್ಡ್,' 'ಲವ್ ಇನ್ ದಿ ಟೈಮ್ಸ್ ಆಫ್ ಕಾಲರಾ', 'ಆಟಮ್ ಆಫ್ ದಿ ಪ್ಯಾಟ್ರಿಯಾರ್ಕ್'ಗಳು ಸ್ಪ್ಯಾನಿಷ್ ಭಾಷೆಯಲ್ಲಿ ಬೈಬಲ್‌ನ ನಂತರ ಅತ್ಯಂತ ಹೆಚ್ಚು ಮಾರಾಟಗೊಂಡ ಕೃತಿಗಳಾಗಿವೆ.