ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಮ್ಮ-ಮಗನ ಕೈನಿಂದ ದೇಶ ರಕ್ಷಿಸದಿದ್ದರೆ ಕಷ್ಟ

ಕೇಂದ್ರದಲ್ಲಿ ತೆರೆಮರೆಯಿಂದ ಸರ್ಕಾರ ನಡೆಸಿದ್ದಕ್ಕಾಗಿ ಅಮ್ಮ- ಮಗ ತಕ್ಕ ಬೆಲೆ ತೆರ...

Srinivasa Murthy VN
Updated On : 20 Apr 2014, 4:28 am

ಕಕೊಯಿಜನ್(ಅಸ್ಸಾಂ): ಕೇಂದ್ರದಲ್ಲಿ ತೆರೆಮರೆಯಿಂದ ಸರ್ಕಾರ ನಡೆಸಿದ್ದಕ್ಕಾಗಿ ಅಮ್ಮ- ಮಗ ತಕ್ಕ ಬೆಲೆ ತೆರಬೇಕಾದೀತು ಎಂದು ನರೇಂದ್ರ ಮೋದಿ ಎಚ್ಚರಿಸಿದ್ದಾರೆ. ಅಸ್ಸಾಂನಲ್ಲಿ ಪ್ರಚಾರ ನಡೆಸಿದ ಅವರು ಸೋನಿಯಾ ಮತ್ತು ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶವನ್ನು ಉಳಿಸಬೇಕಾದರೆ ಮೊದಲು ಈ ಅಮ್ಮ- ಮಗನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು ಎಂದಿದ್ದಾರೆ.

24ರಂದು ಮೋದಿ ನಾಮಪತ್ರ
ಲಖನೌ:
ಉತ್ತರಪ್ರದೇಶದ ವಾರಾಣಸಿಯಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಏ.24ರಂದು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ವಾರಾಣಸಿಯಲ್ಲಿ ಮೇ 12ರಂದು ಮತದಾನ ನಡೆಯಲಿದೆ.

ರೀಡರ್ ಅಲ್ಲ, ಲೀಡರ್ ಬೇಕು
ಅಮೃತಸರ:
ಮನಮೋಹನ ಸಿಂಗ್ ಅವರೊಬ್ಬ ದುರ್ಬಲ ಪ್ರಧಾನಿ ಎನ್ನುವ ಟೀಕೆಗಳಿಗೆ ಪ್ರಧಾನಿ ಕಾರ್ಯಾಲಯ ನೀಡಿದ ತಿರುಗೇಟಿಗೆ ಈಗ ಬಿಜೆಪಿ ಮುಖಂಡ ಅರುಣ್ ಜೇಟ್ಲಿ  ಪ್ರತ್ಯುತ್ತರ ನೀಡಿದ್ದಾರೆ. ಪ್ರಧಾನಿ ಆಗುವವರು ಉತ್ತಮ ನಾಯಕರಾಗಬೇಕೇ ಹೊರತು ಓದುಗ ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ ಜೇಟ್ಲಿ. ಭಾರತದ ಪ್ರಧಾನಿ ಬರೆದುಕೊಟ್ಟ ಭಾಷಣವನ್ನು ಓದುತ್ತಾರೆ. ಇದನ್ನು ಬಹುತೇಕರು  ಕೇಳಿಸಿಕೊಳ್ಳುವುದೇ ಇಲ್ಲ. ಅವರ ಭಾಷಣವನ್ನು ನೆನಪಿಟ್ಟುಕೊಳ್ಳುವುದು ಬಿಡಿ, ಅದರ ಬಗ್ಗೆ ಮಾತನಾಡುವುದೂ ಇಲ್ಲ. ಪ್ರಧಾನಿ ಸಿಂಗ್‌ರದ್ದು ಮಂಜಿನ ಮೇಲಿನ ನಡಿಗೆ. ಅಲ್ಲಿ ಯಾವುದೇ ಹೆಜ್ಜೆಗುರುತು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಜೇಟ್ಲಿ ತಮ್ಮ ಬ್ಲಾಗ್‌ನಲ್ಲಿ ಸಿಂಗ್ ಕಾಲೆಳೆದಿದ್ದಾರೆ.

ಮೋದಿ ವಿರೋಧಿಗಳು ಪಾಕ್‌ಗೆ ಹೋಗ್ಲಿ!
ಗೊಡ್ಡಾ(ಜಾರ್ಖಂಡ್):
ಬಿಹಾರದ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಹೊಸ ವಿವಾದ ಸೃಷ್ಟಿಸಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಟೀಕೆ ಮಾಡುವವರಿಗೆ ಭಾರತದಲ್ಲಿ ಜಾಗ ಇಲ್ಲ. ಚುನಾವಣೆ ಫಲಿತಾಂಶದ ಬಳಿಕ ಅವರು ಪಾಕಿಸ್ತಾನಕ್ಕೆ ತೆರಳಲು ಗಂಟು ಮೂಟೆ ಕಟ್ಟಿಕೊಳ್ಳಬೇಕು ಎಂದು ಹೇಳಿದ್ದಾರೆ. ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಸಿಂಗ್ ಈ ಹೇಳಿಕೆ ನೀಡಿದ್ದಾರೆ. ಈ ವೇಳೆ ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement