ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಡ್ವಾಣಿಗಾದ ಗತಿ ಅಟಲ್‌ಗೂ ಬರ್ತಿತ್ತು: ರಾಹುಲ್ ಗಾಂಧಿ

ಅಟಲ್ ಬಿಹಾರಿ ವಾಜಪೇಯಿ ಸಕ್ರಿಯ ರಾಜಕೀಯದಲ್ಲಿರುತ್ತಿದ್ದರೆ ನರೇಂದ್ರ ಮೋದಿ ಅವರನ್ನೂ..

Srinivasa Murthy VN
Updated On : 21 Apr 2014, 1:04 am

ಆಡ್ವಾಣಿ, ಜಸ್ವಂತ್‌ಗಾದ ಸ್ಥಿತಿಯಾಗುತ್ತಿತ್ತು
ಅಟಲ್ ಬಿಹಾರಿ ವಾಜಪೇಯಿ ಸಕ್ರಿಯ ರಾಜಕೀಯದಲ್ಲಿರುತ್ತಿದ್ದರೆ ನರೇಂದ್ರ ಮೋದಿ ಅವರನ್ನೂ ಮೂಲೆಗೆ ತಳ್ಳುತ್ತಿದ್ದರು. ಅವರು ಈಗಾಗಲೇ ಜಸ್ವಂತ್ ಸಿಂಗ್, ಆಡ್ವಾಣಿಯವರನ್ನು ಬದಿಗೆ ಸರಿಸಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ. ಬಿಜೆಪಿಯ ಅಭಿವೃದ್ಧಿಯ ಅಜೆಂಡಾ ಎಂದರೆ ಆಯ್ದ ಉದ್ಯಮಿಗಳ ಅಭಿವೃದ್ಧಿ ಎಂದು ರಾಹುಲ್ ಕಟಕಿಯಾಡಿದ್ದಾರೆ.

ಅಮೇಠಿ ಕಾಪಾಡಲು ರಾಹುಲ್ ವಿಫಲ
ಸ್ವಕ್ಷೇತ್ರ ಅಮೇಠಿ ಹಿತ ಕಾಯುವಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿಫಲರಾಗಿದ್ದಾರೆ ಎಂದು ನರೇಂದ್ರ ಮೋದಿ ಟೀಕಿಸಿದ್ದಾರೆ. ಹೀಗಾಗಿಯೇ ಸೋನಿಯಾ ರಾಹುಲ್ ಪರ ಪ್ರಚಾರದಲ್ಲಿ ಪುತ್ರನನ್ನು ಮತ್ತೊಮ್ಮೆ ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದಾರೆ ಎಂದು ಲೇವಡಿ ಮಾಡಿದರು. ಇಂಥ ನಾಯಕನಿಗೆ ದೇಶದ ಆಡಳಿತ ಸಿಕ್ಕಿದರೆ ಏನಾದೀತು ಎಂದು ನರೇಂದ್ರ ಮೋದಿ ಭಾನುವಾರ ಪ್ರಶ್ನಿಸಿದ್ದಾರೆ.

ಮುಸ್ಲಿಮರಿಗಿರಲಿ ಮೀಸಲು
ಮುಸ್ಲಿಮರಿಗೆ ಮೀಸಲು ಬೇಕು. ಹೀಗೆಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಪ್ರತಿಪಾದಿಸಿದ್ದಾರೆ. ಉತ್ತರಪ್ರದೇಶದ ಹಲವು ಸ್ಥಳಗಳಲ್ಲಿ ರ್ಯಾಲಿಯನ್ನುದ್ದೇಶಿಸಿ ಭಾಷಣ ಮಾಡಿದ ವೇಳೆ ಅವರು ಈ ಅಭಿಪ್ರಾಯ ಮಂಡಿಸಿದ್ದಾರೆ. ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಮೀಸಲು ಕಲ್ಪಿಸಲಾಗುತ್ತದೆ. ಈ ಬಗ್ಗೆ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗುತ್ತದೆ ಎಂದಿದ್ದಾರೆ. ಜತೆಗೆ ಈ ಬಾರಿ ತೃತೀಯ ರಂಗದ ಸರ್ಕಾರವೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ ಮುಲಾಯಂ

ಏನಿದ್ದರೂ ಮೋದಿಯೇ ಪ್ರಧಾನಿ
ಚುನಾವಣೆಯಲ್ಲಿ ಎಷ್ಟೇ ಸ್ಥಾನ ಬರಲಿ. ಎನ್‌ಡಿಎ ವತಿಯಿಂದ ನರೇಂದ್ರ ಮೋದಿಯವರೇ ಪ್ರಧಾನಿಯಾಗಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಮೋದಿ  ಮುಸ್ಲಿಂ ಟೋಪಿ ಧರಿಸದೇ ಇದ್ದ ಬಗ್ಗೆ ಪ್ರಸ್ತಾಪಿಸಿದ ಅವರು ರಾಜಕೀಯ ವಿರೋಧಿಗಳು ಇದೇ ವಿಚಾರ ಮುಂದಿಟ್ಟುಕೊಂಡು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದರು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಮುಸ್ಲಿಮರಲ್ಲಿರುವ ಭಯ, ಸಂದೇಹಗಳನ್ನು ನಿವಾರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement