ಧರ್ಮ ಗ್ರಂಥಕ್ಕೆ ಹಾನಿ: ವ್ಯಕ್ತಿ ಹತ್ಯೆ
ಕೋಲಾರ: ಧಾರ್ಮಿಕ ಪುಸ್ತಕವೊಂದಕ್ಕೆ ಹಾನಿ ಮಾಡಿದ ವಿಚಾರವಾಗಿ ಜಿಲ್ಲೆಯ ಮುಳಬಾಗಿಲು ಹೊರವಲಯದ ಮುಗಿಲಬಂಡೆಯಲ್ಲಿ ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ.
ಧಾರ್ಮಿಕ ಕೇಂದ್ರವೊಂದಕ್ಕೆ ಮದ್ಯಪಾನ ಮಾಡಿ ಪ್ರವೇಶಿಸಿದ್ದ ಆತ, ಅಲ್ಲಿದ್ದ ಧರ್ಮಗ್ರಂಥವನ್ನೂ ಹರಿದು ಹಾಕಿದ್ದ. ಈ ವಿಷಯ ತಿಳಿದ ಹತ್ತಿರದಲ್ಲೇ ಇದ್ದ ಗುಂಪು ಆತನನ್ನು ಹೊರಗೆ ಎಳೆದು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಕೇಂದ್ರದ ಸುತ್ತ ಬಿಗುವಿನ ವಾತಾವರಣ ಉಂಟಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಲಘು ಲಾಠಿ ಪ್ರಹಾರ ನಡೆಸಿ ಉದ್ರಿಕ್ತರನ್ನು ಚದುರಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಇಲೋರಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಹತ್ಯೆ ಮಾಡಿದವರೆಲ್ಲಾ ಸ್ಥಳದಿಂದ ಪರಾರಿಯಾಗಿದ್ದಾರೆ.