ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಲಂಕಾ 'ರಕ್ಕಸ ಅಭಿರುಚಿ'

ಲಂಕಾ ತಮಿಳರ ವಿಚಾರದಲ್ಲಿದ್ದ ಮನಸ್ತಾಪವನ್ನು ಶ್ರೀಲಂಕಾ ಸರ್ಕಾರ ಅತ್ಯಂತ ಕೀಳುಮಟ್ಟದಲ್ಲಿ ಪ್ರದರ್ಶಿಸಿದೆ.

Srinivasa Murthy VN
Updated On : 2 Aug 2014, 12:39 pm

ನವದೆಹಲಿ: ಲಂಕಾ ತಮಿಳರ ವಿಚಾರದಲ್ಲಿದ್ದ ಮನಸ್ತಾಪವನ್ನು ಶ್ರೀಲಂಕಾ ಸರ್ಕಾರ ಅತ್ಯಂತ ಕೀಳುಮಟ್ಟದಲ್ಲಿ ಪ್ರದರ್ಶಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ತಮಿಳುನಾಡು ಸಿಎಂ ಜಯಲಲಿತಾ ಅವರನ್ನು ಅತ್ಯಂತ ಅವಹೇಳನಕಾರಿಯಾಗಿ ಚಿತ್ರಿಸಿರುವ ಲೇಖನವೊಂದನ್ನು ಲಂಕಾ ಸರ್ಕಾರ ತನ್ನ ರಕ್ಷಣಾ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಶ್ರೀಲಂಕಾದ ಕೀಳು ಅಭಿರುಚಿಯನ್ನು ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳೂ ಪಕ್ಷಭೇದ ಮರೆತು ಖಂಡಿಸಿವೆ. ಪ್ರಕರಣ ಇನ್ನೇನು ವಿಕೋಪಕ್ಕೆ ತಿರುಗಲಿದೆ ಎಂಬ ಸುಳಿವು ಸಿಕ್ಕೊಡನೆ ಲಂಕಾ ಸರ್ಕಾರ ವೆಬ್‌ಸೈಟ್‌ನಿಂದ ಲೇಖನವನ್ನು ತೆಗೆದುಹಾಕಿದ್ದು, ಪ್ರಧಾನಿ ಮೋದಿ ಮತ್ತು ಜಯಾರ ಕ್ಷಮೆ ಯಾಚಿಸಿದೆ.
ಜಯಾ ಪತ್ರ: ವಿಚಾರ ಬೆಳಕಿಗೆ ಬರುತ್ತಿದ್ದಂತೆ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಜಯಾ, ಲಂಕಾ ಸರ್ಕಾರ ನಮ್ಮ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದೆ. ಅಲ್ಲಿನ ಸರ್ಕಾರ ಕೂಡಲೇ ಬೇಷರತ್ ಕ್ಷಮೆ ಯಾಚಿಸುವಂತೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದ್ದಾರೆ.
ಅವಹೇಳನ: ಲಂಕಾ ರಕ್ಷಣಾ ಇಲಾಖೆ ವೆಬ್‌ಸೈಟ್‌ನಲ್ಲಿ ಜಯಾ ಹಾಗೂ ಮೋದಿಯನ್ನು ಅವಹೇಳನಕಾರಿಯಾಗಿ ಚಿತ್ರಿಸಿದ ಲೇಖನ ಪೋಸ್ಟ್ ಮಾಡಲಾಗಿತ್ತು. ಇದಕ್ಕೆ 'ನರೇಂದ್ರ ಮೋದಿಗೆ ಜಯಲಲಿತಾ ಬರೆದಿರುವ ಪ್ರೇಮಪತ್ರಗಳು ಎಷ್ಟೊಂದು ಅರ್ಥಪೂರ್ಣ?' ಎಂಬ ಶೀರ್ಷಿಕೆ ನೀಡಲಾಗಿತ್ತು.
 ಜತೆಗೆ ಜಯಾ ಅವರು ಮೋದಿಯವರ ಬಗ್ಗೆ ಕನಸು ಕಾಣುತ್ತಾ ಪತ್ರ ಬರೆಯುತ್ತಿರುವಂತಿರುವ ಫೋಟೋವನ್ನೂ ಹಾಕಲಾಗಿತ್ತು.

ತೀವ್ರ ಪ್ರತಿಭಟನೆ
ಪ್ರಕರಣ ಸಂಬಂಧ ಕೊಲಂಬೋದಲ್ಲಿರುವ ಭಾರತೀಯ ಹೈಕಮಿಷನ್, ಲಂಕಾ ಸರ್ಕಾರಕ್ಕೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ರಕ್ಷಣಾ ಸಚಿವಾಲಯವು ಭಾರತದ ಪ್ರಧಾನಿ ಮೋದಿ ಹಾಗೂ ತಮಿಳುನಾಡು ಸಿಎಂ ಜಯಲಲಿತಾ ಅವರ ಕ್ಷಮೆ ಯಾಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement