ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾಂಗ್ರೆಸ್ ನಟವಾರ್

ತಪ್ಪಿತಸ್ಥ ಸಂಸದರ ರಕ್ಷಿಸುವ ಸುಗ್ರೀವಾಜ್ಞೆಯನ್ನು ರಾಹುಲ್ ಗಾಂಧಿ ಹರಿದು ಬಿಸಾಕಿದ...

Srinivasa Murthy VN
Updated On : 3 Aug 2014, 6:31 am

ನವದೆಹಲಿ: ತಪ್ಪಿತಸ್ಥ ಸಂಸದರ ರಕ್ಷಿಸುವ ಸುಗ್ರೀವಾಜ್ಞೆಯನ್ನು ರಾಹುಲ್ ಗಾಂಧಿ ಹರಿದು ಬಿಸಾಕಿದ ಬಳಿಕವೂ ತಮ್ಮ ಹುದ್ದೆಗೆ ರಾಜಿನಾಮೆ ಕೊಡದ ಪ್ರಧಾನಿ ಸಿಂಗ್‌ರನ್ನು ಗೌರವಿಸುವುದಾದರೂ ಹೇಗೆ?
ಹೀಗೆಂದು ಪ್ರಶ್ನಿಸಿದ್ದು ಮಾಜಿ ಸಚಿವ ನಟವರ್‌ಸಿಂಗ್. ಅಪಮಾನಿತರಾದರೂ ಕುರ್ಚಿಗೆ ಅಂಟಿಕೊಂಡಿದ್ದ ಮನಮೋಹನ ಸಿಂಗ್ ನಿಷ್ಠೆ ಕುರಿತು, ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟವರ್ ಅಸಮಾಧಾನ ಹೊರಹಾಕಿದ್ದಾರೆ.  ಪ್ರಧಾನಿ ಮೋದಿ ಭೇಟಿ ಬಗೆಗಿನ ಪ್ರಶ್ನೆಗೆ ಉತ್ತರಿಸಿ, ನಾವು ವಿದೇಶಾಂಗ ವ್ಯವಹಾರಗಳ ಕುರಿತಷ್ಟೇ ಮಾತುಕತೆ ನಡೆಸಿದ್ದೆವು ಎಂದಿದ್ದಾರೆ. ಇದೇ ವೇಳೆ, ತಾವು ಪುಸ್ತಕ ಬರೆಯುತ್ತಿದ್ದಾಗ ಕರೆ ಮಾಡಿದ್ದ ಪ್ರಿಯಾಂಕಾ ಗಾಂಧಿ, ನೀವು ಪ್ರಧಾನಿ ಬಗ್ಗೆ ಏನಾದರೂ ಬರೆಯುತ್ತೀರಾ ಎಂದು ಪ್ರಶ್ನಿಸಿದ್ದರು. ಅದಕ್ಕೆ ಹೌದು ಎಂದಿದ್ದ ನಾನು, ನನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದೂ ಹೇಳಿದ್ದೆ ಎಂದಿದ್ದಾರೆ ನಟವರ್.
ಬಳಿಕ ಸೋನಿಯಾ ಅವರೇ ನನ್ನ ನಿವಾಸಕ್ಕೆ ಆಗಮಿಸಿದ್ದರು. ಅವರು ಗಾಬರಿಯಾಗಿದ್ದರು. ನಾನು ಹಿಂದೆ ಪಟ್ಟ ಕಷ್ಟಗಳನ್ನೆಲ್ಲ ವಿವರಿಸಿದೆ. ಅದಕ್ಕೆ ಅವರು, 'ನನಗೆ ಇದೆಲ್ಲ ಗೊತ್ತೇ ಇರಲಿಲ್ಲ' ಎಂದರು. ಆದರೆ ನಿಮ್ಮನ್ನು ಕೇಳದೆ ಪ್ರಧಾನಿ ಸಿಂಗ್ ಅವರು ಯಾವುದೇ ನಿರ್ಧಾರವನ್ನೂ ಕೈಗೊಳ್ಳುತ್ತಿರಲಿಲ್ಲ ಎಂಬುದು ನನಗೆ ಗೊತ್ತಿದೆ ಎಂದೆ. ನಂತರ ಅವರು ಅಲ್ಲಿಂದ ತೆರಳಿದರು. ಈ ವಿಚಾರವನ್ನು ನಾನಾಗಲೀ, ಅವರಾಗಲೀ ಯಾರಲ್ಲೂ ಬಾಯಿಬಿಟ್ಟಿರಲಿಲ್ಲ ಎಂದಿದ್ದಾರೆ ನಟವರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement