ನೇಪಾಳಕ್ಕಿಂದು ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 2 ದಿನಗಳ ನೇಪಾಳ ಪ್ರವಾಸ ಭಾನುವಾರಆರಂಭವಾಗಲಿದೆ. ಅವರನ್ನು ಸ್ವಾಗತಿಸಲು ನೇಪಾಳ ಸಜ್ಜಾಗಿದೆ. ಕಠ್ಮಂಡುವಿನಲ್ಲಿ ವಿಮಾನ ಇಳಿಯುತ್ತಿದ್ದಂತೆ 5ನೇ ಶತಮಾನದ ಪಶುಪತಿನಾಥ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ದಕ್ಷಿಣ ಭಾರತದ ಪ್ರಧಾನ ಅರ್ಚಕ ಗಣೇಶ ಭಟ್ಟ ಪ್ರಧಾನಿಗೆ ಪ್ರಸಾದ ನೀಡಲಿದ್ದಾರೆ. ದೇವಾಲಯದ ಆಡಳಿತ ಮಂಡಳಿ ಮೋದಿಗೆ ಪಶುಪತಿನಾಥನ ಮೂರ್ತಿಯ ಉಡುಗೊರೆ ನೀಡಲು ನಿರ್ಧರಿಸಲಾಗಿದೆ. ಕಳೆದ ವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೂ ಈ ದೇಗುಲಕ್ಕೆ ಭೇಟಿ ನೀಡಿದ್ದು, ದೇಗುಲದ ಸಂರಕ್ಷಣೆಗೆ 25 ಕೋಟಿ ನೆರವು ಘೋಷಿಸಿದ್ದರು. ಭಾರತವು ದೇವಾಲಯಕ್ಕಾಗಿ 2 ಕೋಟಿ ಮೌಲ್ಯದ 2,500 ಕೆಜಿ ಶ್ರೀಗಂಧವನ್ನೂ ಅರ್ಪಿಸಿದೆ.