ಭಾರತಕ್ಕೆ ಕಾಮನ್‌ವೆಲ್ತ್
ಜಾಗತಿಕ ಕ್ರೀಡಾಕ್ಷೇತ್ರದ ಮತ್ತೊಂದ ಭವ್ಯ ಮೇಳಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಸ್ಕಾಟ್ಲೆಂಡ್ ರಾಜಧಾನಿ ಗ್ಲಾಸ್ಗೋದಲ್ಲಿ 11 ದಿನಗಳ ಕಾಲ ನಡೆದ..
-ಮೈಲಾರಲಿಂಗ ದಿಂಡಲಕೊಪ್ಪ
ಜಾಗತಿಕ ಕ್ರೀಡಾಕ್ಷೇತ್ರದ ಮತ್ತೊಂದ ಭವ್ಯ ಮೇಳಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಸ್ಕಾಟ್ಲೆಂಡ್ ರಾಜಧಾನಿ ಗ್ಲಾಸ್ಗೋದಲ್ಲಿ 11 ದಿನಗಳ ಕಾಲ ನಡೆದ 20ನೇ ಕಾಮನ್‌ವೆಲ್ತ್ ಕ್ರೀಡಾಕೂಟ ಭಾರತದ ಪಾಲಿಗಂತೂ ಹಲವು ವೈಶಿಷ್ಟ್ಯಕ್ಕೆ ಸಾಕ್ಷಿಯಾಗಿ ನಿಂತಿದೆ.
ನಾಲ್ಕು ವರ್ಷಗಳ ಹಿಂದೆ ದೆಹಲಿಯಲ್ಲಿ ಆಯೋಜನೆಗೊಂಡಿದ್ದ 2010ರ ಕ್ರೀಡಾಕೂಟ ಭಾರತದ ಪಾಲಿಗೆ ಪ್ರತಿಷ್ಠೆಯ ಕೂಟವಾಗಿತ್ತು. ಏಕೆಂದರೆ, ಅದು ತಾಯ್ನಾಡಿನಲ್ಲಿಯೇ ನಡೆಯುತ್ತಿದ್ದರಿಂದ ನಮ್ಮ ಕ್ರೀಡಾಪಟುಗಳ ಮೇಲೆ ನಿರೀಕ್ಷೆಯ ಮೂಟೆ ದೊಡ್ಡದಿತ್ತು. ತವರಿನ ನಿರೀಕ್ಷೆಯನ್ನು ಹುಸಿಮಾಡದ ಕ್ರೀಡಾಪಟುಗಳು ನೂರಕ್ಕೂ ಹೆಚ್ಚು ಪದಕಗಳನ್ನು ಗೆದ್ದು ತವರಿನ ಕೀರ್ತಿ ಪತಾಕೆಯನ್ನು ಉತ್ತುಂಗದಲ್ಲಿ ಹಾರಿಸಿದ್ದರು.
ಈ ಬಾರಿ ದೂರದ ಗ್ಲಾಸ್ಗೋದಲ್ಲಿ ನಡೆದ ಕೂಟದಲ್ಲಿ ನಮ್ಮ ಅಥ್ಲೀಟ್‌ಗಳು ಹಿಂದಿನ ಪ್ರದರ್ಶನ ಮುಂದುವರಿಸಬಲ್ಲರೇ ಎಂಬ ಆತಂಕ ಒಂದೆಡೆ ಮೂಡಿತ್ತು. ಅಲ್ಲಿನ ಭಿನ್ನ ವಾತಾವರಣ, ಹಿಂದಿನಗಿಂತ ಕಡಿಮೆ ಸಂಖ್ಯೆಯ ಅಥ್ಲೀಟ್‌ಗಳು ಅಲ್ಲಿಗೆ ತೆರಳಿದ್ದಾರೆ.
ಚಿನ್ನ ಕಶ್ಯಪ್
ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಭಾರತದ ಪರುಪಳ್ಳಿ ಕಶ್ಯಪ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 32 ವರ್ಷಗಳ ನಂತರ ಕಾಮನ್‌ವೆಲ್ತ್ ಕೂಟದ ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಬಂಗಾರ ಲಭಿಸಿದೆ. 1982ರಲ್ಲಿ ಸೈಯದ್ ಮೋದಿ ಈ ಸಾಧನೆ ಮಾಡಿದ್ದರು. ಅದಕ್ಕೂ ಮುನ್ನ 1978ರಲ್ಲಿ ಬೆಂಗಳೂರಿನ ಪ್ರಕಾಶ್ ಪಡುಕೋಣೆ ಚಿನ್ನದ ಪದಕ ಜಯಿಸಿದ್ದರು.
ಉತ್ತಮ ಸಾಧನೆ
ದೆಹಲಿ ಕೂಟದಲ್ಲಿ ಭಾರತಕ್ಕೆ ಒಟ್ಟಾರೆ 101 ಪದಕಗಳು ಲಭಿಸಿದ್ದವು. ಇದರಲ್ಲಿ 38 ಚಿನ್ನ, 27 ಬೆಳ್ಳಿ ಮತ್ತು 36 ಕಂಚಿನ ಪದಕಗಳು ಸೇರಿವೆ. ಆಗ ಭಾರತ ಪದಕ ಪಟ್ಟಿಯಲ್ಲಿ 2ನೇ ಸ್ಥಾನದ ಗೌರವ ಪಡೆದಿತ್ತು. ಈ ಬಾರಿ ಪದಕಗಳ ಒಟ್ಟು ಸಂಖ್ಯೆ 64. ಇದರಲ್ಲಿ 15 ಚಿನ್ನ, 30 ಬೆಳ್ಳಿ ಮತ್ತು 19 ಕಂಚು ಸೇರಿವೆ. ಆ ಮೂಲಕ ಭಾರತ 5ನೇ ಸ್ಥಾನದ ಗೌರವ ಪಡೆದಿದೆ. ಕಳೆದ ಬಾರಿ ಶೂಟಿಂಗ್ (14) ಮತ್ತು ಕುಸ್ತಿಯಲ್ಲಿ (10) ಹೆಚ್ಚು ಚಿನ್ನದ ಪದಕಗಳು ದೊರೆತಿದ್ದರೆ, ಈ ಸಲ ಕುಸ್ತಿಯಲ್ಲಿ 5 ಮತ್ತು ಶೂಟಿಂಗ್‌ನಲ್ಲಿ 4 ಚಿನ್ನದ ಪದಕಗಳು ಲಭಿಸಿರುವುದೇ ಉತ್ತಮ ಸಾಧನೆಯಾಗಿದೆ.
ಪದಕ ಪಟ್ಟಿಯಲ್ಲಿ ಭಾರತಕ್ಕೆ 5ನೇ ಸ್ಥಾನ
ಪದಕ ಪಟ್ಟಿ 2010
ಕ್ರೀಡೆ ಚಿನ್ನ ಬೆಳ್ಳಿ ಕಂಚು ಒಟ್ಟು
ಶೂಟಿಂಗ್ 14 11 5 30
ಕುಸ್ತಿ 10 5 4 19
ಆರ್ಚರಿ 3 1 4 8
ಬಾಕ್ಸಿಂಗ್ 3 0 4 7
ಅಥ್ಲೆಟಿಕ್ಸ್ 2 3 7 12
ವೇಟ್‌ಲಿಫ್ಟಿಂಗ್ 2 2 4 8
ಬ್ಯಾಡ್ಮಿಂಟನ್ 2 1 1 4
ಟಿಟಿ 1 1 3 5
ಟೆನಿಸ್ 1 1 2 4
ಜಿಮ್ನಾಸ್ಟಿಕ್ಸ್ 0 1 1 2
ಹಾಕಿ 0 1 0 1
ಈಜು 0 0 1 1
ಒಟ್ಟು 38 27 36 101
ಪದಕ ಪಟ್ಟಿ 2014
ಕ್ರೀಡೆ ಚಿನ್ನ ಬೆಳ್ಳಿ ಕಂಚು ಒಟ್ಟು
ಕುಸ್ತಿ 5 6 2 13
ಶೂಟಿಂಗ್ 4 9 4 17
ವೇಟ್‌ಲಿಫ್ಟಿಂಗ್ 3 5 6 14
ಅಥ್ಲೆಟಿಕ್ಸ್ 1 1 1 3
ಬ್ಯಾಡ್ಮಿಂಟನ್ 1 1 2 4
ಸ್ಕ್ವಾಶ್ 1 0 0 1
ಬಾಕ್ಸಿಂಗ್ 0 4 1 5
ಜೂಡೊ 0 2 2 4
ಟಿಟಿ 0 1 0 1
ಹಾಕಿ 0 1 0 1
ಜಿಮ್ನಾಸ್ಟಿಕ್ಸ್ 0 0 1 1
ಒಟ್ಟು 15 30 19 64