ಸಂಸದರಿಗಷ್ಟೇ ತ್ವರಿತ ವಿಚಾರಣೆ ಅಸಾಧ್ಯ
ಸಂಸದರ ವಿರುದ್ಧದ ಅಪರಾಧ ಪ್ರಕರಣ ಮಾತ್ರ ತ್ವರಿತ ಕೋರ್ಟ್‌ಗಳಲ್ಲಿ ಯಾಕೆ ವಿಚಾರಣೆ ನಡೆಸಬೇಕು? ಅವರೇನು ಮೇಲಿನಿಂದ ಬಂದವರೇ ಎಂದು ಸುಪ್ರೀಂ ಪ್ರಶ್ನಿಸಿದೆ.
ನವದೆಹಲಿ: ಸಂಸದರ ವಿರುದ್ಧದ ಅಪರಾಧ ಪ್ರಕರಣ ಮಾತ್ರ ತ್ವರಿತ ಕೋರ್ಟ್‌ಗಳಲ್ಲಿ ಯಾಕೆ ವಿಚಾರಣೆ ನಡೆಸಬೇಕು? ಅವರೇನು ಮೇಲಿನಿಂದ ಬಂದವರೇ ಎಂದು ಸುಪ್ರೀಂ ಪ್ರಶ್ನಿಸಿದೆ.
ಜತೆಗೆ, ಅಪರಾಧ ನ್ಯಾಯ ವ್ಯವಸ್ಥೆ ಸುಧಾರಣೆಗೆ ಮೋದಿ ಸರ್ಕಾರ ರಾಜ್ಯಗಳೊಂದಿಗೆ ಮಾತುಕತೆ ನಡೆಸಿ 4 ವಾರಗಳೊಳಗೆ ವರದಿ ಸಲ್ಲಿಸಬೇಕು ಎಂದು ನ್ಯಾ. ಆರ್.ಎಂ. ಲೋಧಾ ಅವರಿದ್ದ ಪೀಠ ಸೂಚಿಸಿದೆ. ಸಂಸದರ ಪ್ರಕರಣಗಳ ವಿಚಾರಣೆಗೆ ಪ್ರಧಾನಿ ಮೋದಿ ವಿಶೇಷ ನ್ಯಾಯಾಲಯ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದ್ದನ್ನು ಮುಂದಿಟ್ಟುಕೊಂಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಪೀಠ ಅಸಮಾಧಾನ ಹೊರ ಹಾಕಿದೆ.
ನಿರ್ದಿಷ್ಟ ವಿಭಾಗದಲ್ಲಿ ಮಾತ್ರ ಶೀಘ್ರ ವಿಚಾರಣೆ ನಡೆದರೆ ಸಾಲದು, ಇದರಿಂದ ಅಪರಾಧ ನ್ಯಾಯ ವ್ಯವಸ್ಥೆ ಸಂಪೂರ್ಣ ತ್ವರಿತಗೊಳಿಸಲು ಸಾಧ್ಯವಿಲ್ಲ. ನ್ಯಾಯಾಲಯಗಳು ಸಿಬ್ಬಂದಿ ಹಾಗೂ ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿವೆ. ಮೊದಲು ಇದನ್ನು ಪರಿಹರಿಸಬೇಕು. ನಿಧಾನಗತಿಯ ವಿಚಾರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಉತ್ತಮ ಆಡಳಿತವೆಂದರೆ ಕ್ಷಿಪ್ರ ನ್ಯಾಯ ವ್ಯವಸ್ಥೆ. ಅಪರಾಧ ಪ್ರಕರಣಗಳು 10 ವರ್ಷದವರೆಗೆ ಬಾಕಿ ಉಳಿಯುವುದು ಸರಿಯಲ್ಲ ಎಂದಿದೆ.