ಅನಂತಮೂರ್ತಿ ಜ್ಞಾನಪೀಠಕ್ಕಾಗಿ ಲಾಭಿ ಮಾಡಿಲ್ಲ
ಜ್ಞಾನಪೀಠ ಪ್ರಶಸ್ತಿಗಾಗಿ ಡಾ.ಯುಆರ್ ಅನಂತಮೂರ್ತಿ ಯಾವುದೇ ಲಾಬಿ ಮಾಡಿಲ್ಲ..
ಧಾರವಾಡ: ಜ್ಞಾನಪೀಠ ಪ್ರಶಸ್ತಿಗಾಗಿ ಡಾ.ಯುಆರ್ ಅನಂತಮೂರ್ತಿ ಯಾವುದೇ ಲಾಬಿ ಮಾಡಿಲ್ಲ ಎಂದು ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಅವರು ಸ್ಪಷ್ಟಪಡಿಸಿದ್ದಾರೆ. ಧಾರವಾಡದ ಮನೋಹರ ಗ್ರಂಥಮಾಲೆ ಅಟ್ಟದ ಮೇಲೆ ಶನಿವಾರ ನಡೆದ ಅನಂತಮೂರ್ತಿ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ನನ್ನೊಂದಿಗೆ ಸಿಎನ್ರಾಮಚಂದ್ರ, ಟಿಪಿ ಅಶೋಕ ಜ್ಞಾನಪೀಠ ಪ್ರಶಸ್ತಿ ಕನ್ನಡ ಸಲಹಾ ಸಮಿತಿ ಸದಸ್ಯರಾಗಿದ್ದರು. ಮೊದಲು ಪು.ತಿ.ನರಂಸಿಹಾಚಾರ್ಯರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಇಂಗ್ಲಿಷ್ ಭಾಷಾಂತರದ ಕೊರತೆಯಿಂದ ಅವರು ಆಯ್ಕೆಯಾಗದೆ ಶಿಫಾರಸು ಮಾಡಿದ ಎರಡನೇ ಸ್ಥಾನದಲ್ಲಿದ್ದ ಅನಂತಮೂರ್ತಿಗೆ ಜ್ಞಾನಪೀಠ ನೀಡಲಾಯಿತು. ಈ ವಿಷಯದಲ್ಲಿ ಯಾವುದೇ ಲಾಬಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಅನಂತಮೂರ್ತಿಗೆ ಯಾವಾಗಲೋ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬರುತಿತ್ತು. ಎಸ್.ಎಲ್.ಬೈರಪ್ಪನವೇ ಅದನ್ನು ಸಾಕಷ್ಟು ಬಾರಿ ತೆಡೆದರು. ಅನಂತಮೂರ್ತಿ ಅವರ ಪ್ರತಿಯೊಂದೂ ಕೃತಿಗಳಿಗೆ ಬೈರಪ್ಪನವರು ಮಾನ್ಯತೆ ನೀಡುತ್ತಿರಲಿಲ್ಲ. ಸೂರ್ಯನ ಕುದುರೆ ಕೃತಿ ಹೊರಬಂದಾಗ ಆ ಕೃತಿಯಲ್ಲೇನಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಿಂದ ತಪ್ಪಿಸಿದರು ಎಂದು ಗಿರಡ್ಡಿ ಹೇಳಿದರು.
ಸಾವಿಲ್ಲದ ಸ್ಥಾನ
ಪ್ರಾಧ್ಯಾಪಕ, ಸಾಹಿತಿ ರಾಘವೇಂದ್ರ ಪಾಟೀಲ ಮಾತನಾಡಿ, ಅನಂತಮೂರ್ತಿ ದೇಹ ಅಸ್ತಂಗತವಾಗಿರಬಹುದು. ಅವರು ಸೃಷ್ಟಿಸಿದ ವೈಚಾರಿಕ ಚಿಂತನೆಗಳು ಸಾವಿಲ್ಲದ ಸ್ಥಾನ ಪಡೆದಿವೆ. ಅನಂತಮೂರ್ತಿ ಕೂಡ ಅಧಿಕಾರಕ್ಕೆ ಆಸೆ ಪಟ್ಟವರೇ ಹೊರತು ಲಾಬಿಯಿಂದಲ್ಲ. ಸಿಕ್ಕ ಅಧಿಕಾರವನ್ನು ಸರಿಯಾಗಿ ಬಳಸಿ ಉಳಿಸಿಕೊಂಡವರು ಎಂದು ಸ್ಮರಿಸಿದರು.