ನವದೆಹಲಿ: ಅಮೀರ್ ಖಾನ್ ನಾಯಕನಾಗಿರುವ ಪಿಕೆ ಚಲನಚಿತ್ರ ಎರಡು ದಿನಗಳಲ್ಲಿ ರು. 50ಕೋಟಿ ಗಳಿಸಿದೆ. ಕಳೆದ ಶುಕ್ರವಾರ ಸಿನಿಮಾ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಈ ಸಿನಿಮಾಗೆ ಲಭಿಸಿದೆ.
ರಾಜ್ ಕುಮಾರ್ ಹಿರಾನಿ ನಿರ್ದೇಶಿಸಿ ವಿದು ವಿನೋದ್ ಚೋಪ್ರಾ ನಿರ್ಮಾಣದ ಪಿಕೆ ಚಿತ್ರ 2014ರಲ್ಲಿ 2 ದಿನಗಳಲ್ಲಿ ರು. 50ಕೋಟಿ ಗಳಿಸಿದ ಚಿಚ್ರಗಳ ಸಾಲಿನಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.
ಈ ಹಿಂದೆ ಹ್ಯಾಪಿ ನ್ಯೂಯರ್, ಪಿಕೆ, ಸಿಂಗಂ ರಿಟರ್ನ್ಸ್ ಮತ್ತು ಕಿಕ್ ಚಿತ್ರಗಳು ಇದೇ ರೀತಿಯ ದಾಖಲೆ ಬರೆದಿದ್ದವು.
ಅಮೀರ್ ಖಾನ್ ಜತೆ ಅನುಷ್ಕಾ ಶರ್ಮಾ, ಸುಶಾಂತ್ ಸಿಂಗ್ ರಜ್ಪೂತ್ ಮತ್ತು ಸಂಜಯ್ ದತ್ ಪ್ರಸ್ತುತ ಸಿನಿಮಾದ ತಾರಾಗಣದಲ್ಲಿದ್ದಾರೆ.
ಮೊದಲ ದಿನ ರು.26 ಕೋಟಿ ಗಳಿಸಿದ ಚಿತ್ರ ಎರಡನೇ ದಿನ ರು.29 ಕೋಟಿ ಗಳಿಸಿತ್ತು. ಎರಡು ದಿನಗಳಲ್ಲಿ ರು.55 ಕೋಟಿ ಗಳಿಸಿರುವ ಪಿಕೆ ಚಿತ್ರಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಇದು ಅಮೀರ್ ಖಾನ್ ನ ಬೆಸ್ಟ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ